ಭೂಸನೂರಗೆ ಇನ್ನೊಂದು ಅವಕಾಶ ನೀಡಿ – ಸವದಿ

Must Read

ಸಿಂದಗಿ: ಸಿಂದಗಿ ಕ್ಷೇತ್ರದ ಉಪಚುನಾವಣೆ ಪ್ರಚಾರ ದಿನೇ ದಿನೇ ಕಾವೇರುತ್ತಿದ್ದು ಗುರುವಾರ ದೇವನಾವದಗಿ ಗ್ರಾಮದಲ್ಲಿ ಅಭ್ಯರ್ಥಿ ರಮೇಶ ಭೂಸನೂರ ಪರ ಮತಯಾಚನೆ ಮಾಡಿದರು.

ಮಾಜಿ ಉಪಮುಖ್ಯಮಂತ್ರಿ ಲಕ್ಷಣ ಸವದಿ ಮಾತನಾಡಿ, ಮಾಜಿ ಶಾಸಕ ರಮೇಶ ಭೂಸನೂರ ಅವರು ತಮ್ಮ ಹತ್ತು ವರ್ಷದ ಅವಧಿಯಲ್ಲಿ ಹಲವಾರು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ ಅವರಿಗೆ ಮತ್ತೂಂದು ಅವಕಾಶ ಕೊಟ್ಟು ಉಪಚುನಾವಣೆ ಯಲ್ಲಿ ಅವರನ್ನು ಗೆಲ್ಲಿಸಬೇಕು ಎಂದು ಗ್ರಾಮದ ಜನರಲ್ಲಿ ವಿನಂತಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಶ್ರೀಕಾಂತ ಸೋಮಜ್ಯಾಳ, ಹನುಮಂತರಾಯ ಬಿರಾದಾರ, ಶ್ರೀಶೈಲ ಪರಗೊಂಡ, ಮಲ್ಲಣ್ಣ ಗೌಡ ಬಿರಾದಾರ, ಮಹಾಂತೇಶ್ ಪರಗೊಂಡ, ಸುದರ್ಶನ್ ಜಂಗಾಣ್ಣಿ, ಪುಟ್ಟು ದೇಸಾಯಿ ಉಪಸ್ಥಿತರಿದ್ದರು.

ಇತ್ತ ಕೊರಳ್ಳಿ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ರಮೇಶ ಭೂಸನೂರ ಅವರ ಪರವಾಗಿ ಸಚಿವ ಸಿ ಸಿ ಪಾಟೀಲ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಂತೋಷ ಪಾಟೀಲ (ಡಂಬಳ) ,ಶ್ರೀಶೈಲ ಚಳ್ಳಗಿ , ಸಿದ್ದರಾಮ ಪಾಟೀಲ, ಹಾಗೂ ಪಕ್ಷದ ಪದಾಧಿಕಾರಿಗಳು ಊರಿನ ಗಣ್ಯರಾದ ಕಾಶಿನಾಥ ಶುಂಠಿ ಇನ್ನು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳನ್ನು ತೊರೆದ ರಮೇಶ ಕೊರಳ್ಳಿ, ಶರಣು ನಿಂಬಳ, ಬಸವರಾಜ ಮಲಘನ, ಮಲಕಪ್ಪ ಮಾದರ, ಮಾಂತು ತಳವಾರ, ಸಿದ್ದನಗೌಡ ಬಿರಾದಾರ, ಪ್ರದೀಪ್ ಪಟ್ಟಣಶೆಟ್ಟಿ, ಮಾಳಪ್ಪ ಪೂಜಾರಿ ಎಲ್ಲರೂ ಈ ಸಲ ಬಿಜೆಪಿಯನ್ನು ಗೆಲ್ಲಿಸೋಣ ಎಂದು ಹೇಳಿದರು.


ವರದಿ: ಪಂಡಿತ್ ಯಂಪೂರೆ, ಸಿಂದಗಿ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group