ಲೇಖಕಿಯರ ಸಂಘದ ವತಿಯಿಂದ ಸಾಹಿತಿ ರೇಣುಕಾ ಜಾಧವ ಅವರ ಅವಳಿ ಕೃತಿಗಳ ಲೋಕಾರ್ಪಣೆ

Must Read

ಇದೇ ದಿ. 21 ರಂದು ಗುರುವಾರ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸಾಹಿತಿ ರೇಣುಕಾ ಜಾಧವ ರಚಿಸಿದ ‘ಅಮ್ಮ’ ಮತ್ತು ‘ಓ ನನ್ನ ಕಂದ ಅರುಣ’ ಅವಳಿ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೋನೋಳ್ಳಿ ವಹಿಸಲಿದ್ದು ಹಿರಿಯ ಸಾಹಿತಿ ಬಿ.ಎಸ್. ಗವಿಮಠ ಕೃತಿ ಲೋಕಾರ್ಪಣೆ ಮಾಡುವರು. ಪ್ರಾಧ್ಯಾಪಕರಾದ ಡಾ.ಶೋಭಾ ನಾಯಿಕ ಮತ್ತು ಡಾ. ಭಾರತಿ ಮಠದ ಕೃತಿಗಳನ್ನು ಪರಿಚಯಿಸುವರು. ಹಿರಿಯ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ಪ್ರಾಸ್ತಾವಿಕ ನುಡಿಗಳನ್ನಾಡುವರು. ಅತಿಥಿಗಳಾಗಿ ಸಾಹಿತಿ ಶಾಂತಾದೇವಿ ಹುಲೆಪ್ಪನವರಮಠ ಆಗಮಿಸುವರು.

ಸಾಹಿತ್ಯಾಸಕ್ತರು ಮತ್ತು ಕನ್ನಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಬೇಕೆಂದು ಸಂಘದ ಕಾರ್ಯದರ್ಶಿ ರಾಜನಂದಾ ಘಾರ್ಗಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group