ಸಿಂದಗಿ: ದೇಶದಲ್ಲಿಯೇ ಅತಿ ಹೆಚ್ಚು ಕುಟುಂಬಗಳಿಗೆ ಸಾಲ ಮನ್ನಾ ಮಾಡಿದ್ದು ನಮ್ಮ ಆಡಳಿತದಲ್ಲಿಯೇ ಕಾಂಗ್ರೆಸ್, ಬಿಜೆಪಿ ಅವರು ರೈತರಿಗೆ ಏನು ಮಾಡಿದ್ದಾರೆ ಎಂದು ಹೇಳಲಿ. ನಾನು ಸಾಲ ಮನ್ನಾ ಮಾಡುವಾಗ ಇಬ್ಬರೂ ವಿರೋಧಿಸಿದ್ದಾರೆ ಈಗ ರೈತರ ಬಗ್ಗೆ ಮಾತನಾಡುತ್ತಾರೆ ಅಂತವರನ್ನು ನಂಬಬೇಡಿ, ನನಗೆ ಚುನಾವಣೆಯಲ್ಲಿ ಜನರು ಮತ ನೀಡುತ್ತಿಲ್ಲ, ಬರಿ ಶಿಕ್ಷೆ ಕೊಡುತ್ತಿದ್ದಾರೆ ನಮ್ಮ ಪಕ್ಷದ ಕೆಲಸ ನೋಡಿ ನಮಗೆ ಮತ ನೀಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರುು.
ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಪರ ಮತಯಾಚನೆ ನಿಮಿತ್ತವಾಗಿ ಆಲಮೇಲ ತಾಲೂಕಿನ ಬೊಮ್ಮನಳ್ಳಿ ಗ್ರಾಮದಲ್ಲಿ ಸಮಾವೇಶದಲ್ಲಿ ಮಾತನಾಡಿ, 2018 ರ ಚುನಾವಣೆಯಲ್ಲಿ ನಾನು ಪ್ರಚಾರ ವೇಳೆ ರೈತರ ಸಾಲ ಮನ್ನಾ ಮಾಡುತ್ತೇನೆಂದು ಹೇಳಿದೆ ನಂತರ ನನಗೆ ಬಹುಮತ ಇರಲಿಲ್ಲ ಆದರೂ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸುಮಾರು 3 ಸಾವಿರ ಕುಟುಂಬಗಳಿಗೆ ಸಾಲದ ಹೊರೆ ಇತ್ತು ಹೀಗಾಗಿ 30 ಸಾವಿರದಿಂದ 2 ಲಕ್ಷದ ವರೆಗೆ ಸುಮಾರು 25 ಸಾವಿರ ಕೋಟಿ ಸಾಲಾ ಮನ್ನಾ ಮಾಡಿದ್ದೇನೆ, ರೈತರಿಗೆ ನೀರಾವರಿ ಅವಶ್ಶಕತೆ ಇದ್ದ ಕಾರಣ ಉತ್ತರ ಕರ್ನಾಟಕ್ಕೆ ನಾನು 2006 ರಲ್ಲಿ ಮತ್ತು 2018 ರಲ್ಲಿ ಸಾವಿರಾರು ಕೋಟಿ ಅನುದಾನ ನೀಡಿದ್ದೇನೆ, ನಮ್ಮ ತಂದೆ ಪ್ರಧಾನ ಮಂತ್ರಿ ಇದ್ದಾಗ ಕೂಡಾ ಕೋಟ್ಯಂತರ ಹಣ ನೀಡಿ ನೀರಾವರಿ ಮಾಡಿದ್ದಾರೆ, ಹೀಗಾಗಿ ಈ ಭಾಗ ಹಸಿರು ಕಾಣುತ್ತಿದೆ ಎಂದರೆ ಅದರಲ್ಲಿ ನಮ್ಮ ಪಕ್ಷದ ಪಾತ್ರವಿದೆ. ಆದರೆ ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು ಆಕಸ್ಮಿಕವಾಗಿ ಆದರೆ ಜನ ನನಗೆ ಬಹುಮತ ಕೊಡುತ್ತಿಲ್ಲ, ಅಭಿವೃದ್ದಿಯ ಕನಸು ಕಂಡ ನಮ್ಮ ಪಕ್ಷಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿದರೆ ಇನ್ನೂ ಹಲವಾರು ಹೊಸ ಯೋಜನೆಗಳನ್ನು ತರುತ್ತೇನೆ ಎಂದರು.
ದಿ,ಎಂ ಸಿ ಮನಗೂಳಿ ಅವರು ಉತ್ತಮವಾದ ವ್ಯಕ್ತಿತ್ವ ಉಳ್ಳವರು ಅವರ ಬಗ್ಗೆ ನಮಗೆ ಅಸಮಾಧಾನ ಇಲ್ಲ ಆದರೆ ಅವರ ಮಕ್ಕಳು ಈಗ ಅವರಂತೆ ಇಲ್ಲ, ಅಧಿಕಾರದ ಆಸೆಗಾಗಿ ನಮ್ಮ ಪಕ್ಷದಿಂದ ಹೋಗಿದ್ದಾರೆ ಹೋಗಲಿ ಆದರೆ ನಮ್ಮ ಕಾರ್ಯಕರ್ತರು ನಮ್ಮ ಜೊತೆಗೆ ಇದ್ದಾರೆ, ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯ ಗೆಲುವಿನಿಂದ ಮುಂದಿನ 2023ರ ಮಿಷನ್ 123 ಪ್ರಾರಂಭವಾಗುತ್ತದೆ ಇದಕ್ಕೆ ಜನರು ಸಾಥ್ ನೀಡಬೇಕು, ನಾನು ಸಮ್ಮಿಶ್ರ ಸರಕಾರದಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಬೇಕಿತ್ತು ಆದರೆ ಆಗ ನನಗೆ ನರಕಯಾತನೆ ಇತ್ತು, ಸಾಲ ಮನ್ನಾಗೆ ಕಾಂಗ್ರೆಸ್‍ನವರು 2018 ರಲ್ಲಿ ವಿರೋಧಿಸಿದರೆ, 2006ರಲ್ಲಿ ಬಿಜೆಪಿಯವರು ವಿರೋಧಿಸಿದ್ದಾರೆ ಹೀಗಾಗಿಯೂ ನಾನು ರೈತರ ಹಿತದೃಷ್ಟಿಯಿಂದ ಸಾಲ ಮನ್ನಾ ಮಾಡಿದ್ದೇನೆ ಎಂದು ಹೇಳಿದರು.
ನಂತರ ಅಭ್ಯರ್ಥಿ ನಾಜಿಯಾ ಅಂಗಡಿ ಮಾತನಾಡಿ, ಸಿಂದಗಿ ಭಾಗದಲ್ಲಿ ಜೆಡಿಎಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಮಾಡಿರುವ ನೀರಾವರಿ,ಅಭಿವೃದ್ದಿ ಇನ್ನೂ ಜೀವಂತವಾಗಿವೆ ಇನ್ನೂ ಹೆಚ್ಚು ಅಭಿವೃದ್ದಿ ಯಾಗಬೇಕಾದ ಅವಶ್ಶಕತೆ ಇದೆ ನಮ್ಮ ಪಕ್ಷದ ನಾಯಕರು ಅಭಿವೃದ್ದಿಗೆ ಆದ್ಯತೆ ನೀಡುತ್ತಾರೆ ಹೀಗಾಗಿ ನನಗೆ ಆರ್ಶಿವಾದ ಮಾಡಿ ಎಂದು ಮನವಿ ಮಾಡಿಕೊಂಡರು.
ಭಾಷಣ ಉದ್ದಕ್ಕೂ ಕುಮಾರಾಸ್ವಾಮಿ ಅವರು 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಹೇಳಬೇಕಾದ ಪ್ರಣಾಳಿಕೆಯೇ ಹೆಚ್ಚಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶಂಪೂರ,ಬಿ ಜಿ ಪಾಟೀಲ(ಹಳಸಂಗಿ), ರಾಜುಗೌಡಾ ಪಾಟೀಲ,ಶಿವುಕುಮಾರ ನಾಟಿಕಾರ,ಬಿ ಡಿ ಪಾಟೀಲ, ಈರಣ್ಣ ಚಟ್ಟಿ, ಸಿದ್ದು ಡಂಗಾ,ಅರವಿಂದ ಹಂಗರಗಿ,ಸಿದ್ದು ಪಾಟೀಲ(ಅಲ್ಲಾಪೂರ) ಸೇರಿದಂತೆ ಅನೇಕರು ಉಪಸ್ಥಿತರಿದ್ದರು.