ಜಾತ್ಯತೀತ ಬುದ್ಧಿಜೀವಿಗಳ ಲಜ್ಜೆಗೇಡಿತನ

Must Read

ನಮ್ಮ ದೇಶದ ಜಾತ್ಯತೀತ ಬುದ್ಧಿಜೀವಿಗಳೆಂಬ ಒಂದು ವರ್ಗವು ತಮ್ಮ ಮಾನ ಮರ್ಯಾದೆಯನ್ನೆಲ್ಲ ಗಂಟು ಮೂಟೆ ಕಟ್ಟಿ ಮೂಲೆಗೆ ಎಸೆದಿದೆಯೆಂಬುದು ಸಾಬೀತಾಗಿದೆ. ಜಮ್ಮು ಕಾಶ್ಮೀರದಲ್ಲಿ ಪಂಡಿತರನ್ನು ಗುರಿ ಮಾಡಿ ಕೊಲ್ಲುತ್ತಿರುವ ಉಗ್ರಗಾಮಿಗಳ ವಿರೋಧ ಮಾಡಿ ಒಂದೇ ಒಂದು ಮಾತು ಹೇಳದಷ್ಟು ನಸುಗುನ್ನಿಗಳಾಗಿದ್ದಾರೆ ಈ ಬುದ್ಧಿಜೀವಿಗಳು.

ಅಕಸ್ಮಾತ್ ಈ ಪಂಡಿತರ ಜಾಗದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ನೇನಾದರೂ ಸತ್ತಿದ್ದರೆ ಇವರು ನೆಲ ಮುಗಿಲನ್ನು ಒಂದು ಮಾಡಿ ಬಾಯಿ ಬಡಿದುಕೊಳ್ಳುತ್ತಿದ್ದರು. ಇವರ ಲೆಕ್ಕದಲ್ಲಿ ಹಿಂದೂಗಳ ಜೀವಕ್ಕೆ ಬೆಲೆಯೇ ಇಲ್ಲ. ಇಂಥ ನಡವಳಿಕೆಯ ಇವರನ್ನು ನಾವು ‘  ಬುದ್ಧಿಜೀವಿಗಳು ‘ ಎಂದು ಕರೆಯಬೇಕಾದ ಕರ್ಮ !

ಇವರು ಯಾಕೆ ಹೀಗೆ ಪಕ್ಷಪಾತಕ್ಕೆ ಬಲಿಯಾಗಿದ್ದಾರೆ ಎಂಬುದೇ ಅರ್ಥವಾಗದ ಸಂಗತಿ. ಅಲ್ಲಿ ಉಗ್ರರು ಅಮಾಯಕರನ್ನು ಕರುಣೆಯಿಲ್ಲದೆ ಹೊಡೆದು ಹಾಕುತ್ತಾರೆ. ಯಾಕೆ ? ಇವರಿಗಷ್ಟೇ ಬದುಕುವ ಹಕ್ಕಿದೆಯೆ ? ಧರ್ಮ ಬೇರೆಯಾದರೆ ಏನಾಯಿತು ? ಅವರೂ ಮನುಷ್ಯರೇ ಅಲ್ಲವೆ ? ಅಬ್ಬಬ್ಬಾ ಎಂದರೆ ಯಾರಾದರೂ ಎಷ್ಟು ವರ್ಷ ಬದುಕಬಹುದು ಇದ್ದುದರಲ್ಲಿಯೇ ಮನುಷ್ಯನಾಗಿ ಬದುಕುವುದು ಮುಖ್ಯವಲ್ಲವೆ ? ಧರ್ಮದ ನಶೆಯೇರಿಸಿಕೊಂಡು ಬೇರೆಯವರನ್ನು ಕೊಲ್ಲುವುದು ಎಂಥ ಧರ್ಮ ? ಇದನ್ನು ರಕ್ಕಸ ಉಗ್ರರಿಗೆ ತಿಳಿಸಿ ಹೇಳುವವರಾರು ?

ಉಗ್ರರ ವಿಷಯ ಹಾಗಿರಲಿ ಈ ಬುದ್ಧಿಜೀವಿಗಳು ತಮ್ಮ ಬುದ್ಧಿಯನ್ನು ಎಲ್ಲಿ ಇಟ್ಟುಕೊಂಡಿದ್ದಾರೆ ? ಮಾತೆತ್ತಿದರೆ ತಾನು  ಜಾತ್ಯತೀತ ಎಂದು ಕರೆದುಕೊಳ್ಳುವ ಇವರು ಒಂದು ಜಾತಿಯನ್ನೇ ಮೇಲುಗಟ್ಟಿ ಮಾತನಾಡುವುದು ಪಕ್ಕಾ ಜಾತೀಯತೆ ಎಂಬುದು ಅರ್ಥವಾಗುವುದಿಲ್ಲವೋ ಅಥವಾ  ಅರ್ಥವಾದರೂ ತೋರಗೊಡದ ಹೊಣೆಗೇಡಿತನವೇ ? ಜಾತ್ಯತೀತರು, ಬುದ್ಧಿಜೀವಿಗಳು ಇದಕ್ಕೆ ಉತ್ತರಿಸಬೇಕು. ಯಾಕೆಂದರೆ ಅವರ ಮೌನ ಅವರ ಯೋಗ್ಯತೆಯನ್ನು ಸಾರಿ ಹೇಳುತ್ತದೆ. ಬದುಕಿದರೆ ಅಪ್ಪಟ ಜಾತ್ಯತೀತರಾಗಿ ಬದುಕಬೇಕು ಅಂದರೆ ಯಾರೇ ತಪ್ಪು ಮಾಡಿದರೂ, ಅವರು ಯಾವುದೇ ಧರ್ಮಕ್ಕೆ ಸೇರಿದವರಿರಲಿ, ಖಂಡಿಸುವ ಪುರುಷತ್ವ ಇರಬೇಕು ಇಲ್ಲ ಬಾಯಿ ಮುಚ್ಚಿಕೊಂಡು ಇರಬೇಕು.

ತಾನು ಬದುಕಿ ಬಾಳಬೇಕಾದ ದೇಶ, ತನಗೆ ಅನ್ನ ಹಾಕುತ್ತಿರುವ ದೇಶದ ಬಗ್ಗೆ ಅಭಿಮಾನ, ಪ್ರೀತಿ ಇಲ್ಲದ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಲೇಸು. ಧರ್ಮದ ಬಗ್ಗೆ ಅಭಿಮಾನವಿರಬೇಕು ನಿಜ ಆದರೆ ದುರಭಿಮಾನ ಅಥವಾ ನಶೆಯಿದ್ದರೆ ಅಂಥ ಯಾವ ಧರ್ಮವೂ ಜಗತ್ತಿನ ಶಾಂತಿಗೆ ಕಾರಣವಾಗುವುದಿಲ್ಲ. ಅಂಥ ನಶೆಯೇರಿಸಿಕೊಂಡ  ಯಾವ ದೇಶವೂ ಉದ್ಧಾರವಾದ ಉದಾಹರಣೆಯಿಲ್ಲ. ಆದರೆ ದೇಶದ ಒಳಗೇ ಇದ್ದುಕೊಂಡು ದೇಶದ ವಿರುದ್ಧ ಮಾತನಾಡುವ ದ್ರೋಹಿಗಳೂ ದೇಶದ ಅವನತಿಗೆ ಕಾರಣರಾಗುತ್ತಾರೆ. ಅವರೇನೋ ಹಾಳಾಗಿ ಹೋಗುತ್ತಾರೆ ಆದರೆ ಅಷ್ಟರಲ್ಲಿ ತಮ್ಮ ಮುಂದಿನ ಹತ್ತು ಜನ್ಮಕ್ಕಾಗುವಷ್ಟು ಅರಾಜಕತೆ, ಅತಂತ್ರ ಸ್ಥಿತಿ ತಂದಿಟ್ಟು ದೇಶ ನರಳುವಂತೆ ಮಾಡಿ ಹೋಗಿರುತ್ತಾರೆ. ಇಂಥವರು ದೇಶದ ಕ್ಯಾನ್ಸರ್ ಇದ್ದಂತೆ. ಇವರ ಲಜ್ಜೆಗೇಡಿತನ ಎಷ್ಟು ಮಿತಿ ಮೀರಿದೆಯೆಂದರೆ ಬಹಿರಂಗವಾಗಿಯೇ ಇವರು ಒಂದು ಕೋಮಿನ ವಕ್ತಾರರಂತೆ ಮಾತನಾಡುತ್ತಾರೆ ಆದರೆ ತಮ್ಮನ್ನು ತಾವು ‘ ಜಾತ್ಯತೀತರು ‘ ಎಂದು ಕರೆದುಕೊಳ್ಳುತ್ತಾರೆ. ದುರದೃಷ್ಟವೆಂದರೆ ಇಂಥವರನ್ನು ನಾವು ಬುದ್ಧಿಜೀವಿಗಳು ಎಂದು ಕರೆಯುವ ಕರ್ಮ ನಮ್ಮದು!


ಉಮೇಶ ಬೆಳಕೂಡ, ಮೂಡಲಗಿ

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group