ಬೆಳಗಾವಿ: ಬೆಳಗಾವಿ ನಗರ ಹಾಗೂ ಗ್ರಾಮೀಣ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಎರಡೂ ಘಟಕಗಳಿಂದ ಇಬ್ಬರೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೈ.ಜೆ.ಭಜಂತ್ರಿ ಹಾಗೂ ಆರ್ ಪಿ ಜುಟ್ಟಣವರ ಅವರ ಮೂಲಕ ಶಿಕ್ಷಕ ಸಂಘಗಳಿಂದ ವಿವಿಧ ಬೇಡಿಕೆಗಳ ಕುರಿತು ಶಿಕ್ಷಣ ಸಚಿವರಿಗೆ ಮನವಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಯಕುಮಾರ್ ಹೆಬಳಿಯವರು, “ಈಗಾಗಲೇ ಶಿಕ್ಷಕರ ಪ್ರಮುಖ ಬೇಡಿಕೆಗಳಾದ.ಸಿ ಆ್ಯಂಡ್ ಆರ್ ನಿಯಮ ತಿದ್ದುಪಡಿ, ಎನ್‌ಪಿ.ಎಸ್ ರದ್ದತಿ,ವರ್ಗಾವಣೆ ಸಮಸ್ಯೆ,ಮುಖ್ಯ ಗುರುಗಳ ಸಮಸ್ಯೆ, ಹಿಂದಿ ಶಿಕ್ಷಕರ ಸಮಸ್ಯೆ,ದೈಹಿಕ ಶಿಕ್ಷಕರ ಸಮಸ್ಯೆ,ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ತರಬೇತಿಯನ್ನು ಬಹಿಷ್ಕಾರ ಮಾಡಲಾಗಿತ್ತು.
ಇಂದು ಎಲ್ಲ ಶಿಕ್ಷಕ ಶಿಕ್ಷಕಿಯರು ಎಡಗೈಗೆ ಕಪ್ಪು ಪಟ್ಟಿ ಧರಿಸುವ ಮೂಲಕ ತರಗತಿ ನಡೆಸುತ್ತಿದ್ದು ಇಲಾಖೆಯ ಮುಖ್ಯಸ್ಥರ ಮೂಲಕ ಮನವಿಯನ್ನು ರಾಜ್ಯದ ಶಿಕ್ಷಣ ಸಚಿವರಿಗೆ ತಲುಪಿಸಲು ನೀಡಿದ್ದಾರೆ. ಇಂದಿನಿಂದ ಅಕ್ಟೋಬರ್ ೨೯ ವರೆಗೆ ಕಪ್ಪು ಪಟ್ಟಿ ಧರಿಸಿ ಶಾಲೆಯ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಲಾಗುವುದು” ಎಂದು ತಿಳಿಸಿದರು.
ರಾಜ್ಯ ಸಂಘದ ನಿರ್ಣಯದಂತೆ ಜಿಲ್ಲೆಯ ಸಮಸ್ತ ಶಿಕ್ಷಕರು ಈಗಾಗಲೇ ತರಬೇತಿ ಬಹಿಷ್ಕಾರಕ್ಕೆ ಉತ್ತಮ ಬೆಂಬಲವನ್ನು ನೀಡಿದ್ದಾರೆ.ಅಕ್ಟೋಬರ್ ೨೧ ರಿಂದ ೨೯ರ ವರೆಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಮುಂದಿನ ಹೋರಾಟಕ್ಕೆ ಶಿಕ್ಷಕರನ್ನು ಸಜ್ಜುಗೊಳಿಸುವುದು. ಆ ಮೂಲಕ ಅಗತ್ಯ ಬೆಂಬಲವನ್ನು ಎಲ್ಲ ಶಿಕ್ಷಕಿಯರು ನೀಡಬೇಕು ಈ ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಹೋರಾಟವನ್ನು ಆಯೋಜಿಸಿ ಯಶಸ್ವಿಗೊಳಿಸುವ ಮೂಲಕ ಶಿಕ್ಷಕರಿಗೆ ಸಿಗಬೇಕಾದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಹೋರಾಟ ಅನಿವಾರ್ಯವಾಗಿದೆ. ಇದಕ್ಕೂ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ಹೋರಾಟದ ರೂಪುರೇಷೆ ತಿಳಿಸಲಾಗುವುದು ಎಂದು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಜಯಕುವಾರ ಹೆಬಳಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಗೋಣಿ ಜಿಲ್ಲಾ ಖಜಾಂಚಿ ವಾಯ್ ಬಿ ಪೂಜೇರ ಸಹಕಾರ್ಯದರ್ಶಿ ಕೆ ಎಸ್ ರಾಚಣ್ಣವರ ಗ್ರಾಮೀಣ ಅಧ್ಯಕ್ಷ ಪ್ರಕಾಶ್ ದಯಣ್ಣವರ, ಕಾರ್ಯದರ್ಶಿ ಮೈಲಾರ ಹೊರಕೆರಿ ನಗರ ಅಧ್ಯಕ್ಷ ಬಾಬು ಸೊಗಲನ್ನವರ, ಕಾರ್ಯದರ್ಶಿ ಶಿವಾನಂದ ರೊಡಬಸ್ನವರ, ಬೆಳಗಾವಿ ನಗರ ಹಾಗೂ ಗ್ರಾಮೀಣ ಘಟಕಗಳ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದು ಮನವಿ ಸಲ್ಲಿಸಿ ಸಹಕರಿಸಿದರು.
ನಮ್ಮ ಹೋರಾಟ ನಿರಂತರ. ಬೇಡಿಕೆಗಳು ಈಡೇರುವವರೆಗೆ ನಿರಂತರ ಮುಂದುವರೆಯಲಿದೆ ಎಂದು ತಿಳಿಸುವ ಮೂಲಕ ಹೋರಾಟ ಪ್ರಾರಂಭಗೊಂಡಿತು.