ಆನ್‍ಲೈನ್ ಅರ್ಜಿ ಹಾಕಿರುವ ಎಲ್ಲಾ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಿಗೆ ಪ್ರವೇಶ ಕೊಡಿ

Must Read

ಸಿಂದಗಿ:‍ ಆನ್ಲೈನ್ ಅರ್ಜಿ ಹಾಕಿರುವ ಎಲ್ಲಾ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಿಗೆ ಪ್ರವೇಶ ಮಾಡಿಕೊಳ್ಳುವಂತೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ತಾಲೂಕ ಘಟಕ ವತಿಯಿಂದ ತಾಲೂಕಾ ಸಮಾಜ ಕಲ್ಯಾಣಾಧಿಕಾರಿ ಎಸ್.ಎನ್.ಭೂಸಗೊಂಡ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಹರ್ಷವರ್ಧನ ಪೂಜಾರಿ ಮಾತನಾಡಿ, ಸತತ 2 ವರ್ಷಗಳಿಂದ ಇಡೀ ದೇಶಕ್ಕೆ ಕರೋನಾ ಆವರಿಸಿ ಶಾಲಾ-ಕಾಲೇಜುಗಳು ನಡೆಯದೇ ಶಿಕ್ಷಣ ಗುಣಮಟ್ಟ ಕುಸಿದಿದೆ ಅಲ್ಲದೆ ಜನರ ಕೈಗಳಿಗೆ ಕೆಲಸವಿಲ್ಲದೆ ಜೀವನ ನಡೆಸುವುದು ದುಸ್ತರವಾಗಿದ್ದು ಇಂತಹ ಸಂದರ್ಭದಲ್ಲಿ ಶಿಕ್ಷಣ ನೀಡಲು ಅಗದೇ ಕೆಲ ಮಕ್ಕಳು ಶಿಕ್ಷಣದಿಂದ ದೂರ ಸರಿದಿದ್ದಾರೆ ಅಲ್ಪ-ಸ್ವಲ್ಪ ಸ್ಥಿತಿವಂತರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ನಿರ್ಣಯಿಸಿ ಶಾಲಾ-ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ. ಆದರೆ ಊಟಕ್ಕಾಗಿ ಪರಿತಪಿಸುವ ಸಂದರ್ಭ ಬಂದೊದಗಿದ್ದು ಕಾರಣ ವಸತಿ ನಿಲಯಕ್ಕೆ ಆನ್‍ಲೈನ್ ಅರ್ಜಿ ಹಾಕಿರುವ ಎಲ್ಲಾ ವಿದ್ಯಾರ್ಥಿಗಳನ್ನು ವಸತಿ ನಿಲಯಕ್ಕೆ ಪ್ರವೇಶ ಮಾಡಿ ಕೊಂಡು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಸುಮೀತ ರಂಜುಣಗಿ, ಗಂಗಾದರ ನಾಗಾವಿ, ಬಸು ನಾವಿ ಸೇರಿದಂತೆ ವಿದ್ಯಾರ್ಥಿ ಪರಿಷತ್ತಿನ ಪದಾಧಿಕಾರಿಗಳು ಇದ್ದರು.

Latest News

ಸಾವಿಲ್ಲದ ಶರಣರು ವ್ಯಾಕರಣದ  ಬೇಗೂರು ಮಲ್ಲಪ್ಪ

ಬಿ. ಮಲ್ಲಪ್ಪ ಅವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರಿನವರು. 1835ರಲ್ಲಿ ಮಲ್ಲಿಕಾರ್ಜುನಪ್ಪ ಮಲ್ಲಮ್ಮಾಜಿ ಎಂಬ ಲಿಂಗಾಯತ ಬಣಜಿಗ ದಂಪತಿಗಳಿಗೆ ಜನಿಸಿದರು. ಬಾಲ್ಯದಿಂದಲೂ ಮೈಸೂರು ಅರಮನೆಯ...

More Articles Like This

error: Content is protected !!
Join WhatsApp Group