- Advertisement -
ಬೆಂಗಳೂರು – ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಬಿಟ್ ಕಾಯಿನ್ ಪ್ರಕರಣ ಬೋಗಸ್ ಎಂದಿದ್ದಾನೆ.
ಬಿಡುಗಡೆಯಾದ ಮೇಲೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಮುಖ್ಯ ದ್ವಾರದಿಂದ ನಡೆದುಕೊಂಡು ಬಂದ ಶ್ರೀಕಿ ಪತ್ರಕರ್ತರ ಪ್ರಶ್ನೆಗೆ ಕೇವಲ ಹಾರಿಕೆಯ ಉತ್ತರ ಕೊಟ್ಟು ಆಟೋದಲ್ಲಿ ಹಾರಿಹೋದ.
ಈ ಪ್ರಕರಣದಲ್ಲಿ ಕೋಟಿ ಕೋಟಿ ಹಣ ವಶ ಆಗಿರುವ ಬಗ್ಗೆ ಕೇಳಿದರೆ ತನಗೆ ಗೊತ್ತಿಲ್ಲ ಎಂದು ಉತ್ತರಿಸಿದ ಶ್ರೀಕಿ ತನಗೆ ಜಾಮೀನು ಸಿಗಲು ಯಾರು ಕಾರಣ ಎಂಬ ಬಗ್ಗೆಯೂ ತನಗೆ ಗೊತ್ತಿಲ್ಲ ಎಂದೇ ಉತ್ತರಿಸಿದ. ಇದೆಲ್ಲ ಮಾಧ್ಯಮದವರೇ ಸೃಷ್ಟಿ ಮಾಡಿರಬಹುದು ಎಂದೂ ಶ್ರೀಕಿ ಉತ್ತರಿಸಿದ.
- Advertisement -
ತನಗಾಗಿ ಕಾರಾಗೃಹದ ಹೊರಗೆ ಕಾಯುತ್ತಿದ್ದ ಪತ್ರಕರ್ತರತ್ತ ಆಗಮಿಸಿ ಪಟಪಟನೆ ಇಂಗ್ಲೀಷಿನಲ್ಲಿ ಮಾತನಾಡುತ್ತ, ಮುಗುಳ್ನಗುತ್ತ ಕೇಳಿದ ಪ್ರಶ್ನೆಗೆ ತನಗೇನೂ ಗೊತ್ತೇ ಇಲ್ಲ ಎನ್ನುತ್ತ ಆಟೋ ಹಿಡಿದು ಹೊರಟುಬಿಟ್ಟ ಶ್ರೀಕಿ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ