spot_img
spot_img

ವಿದ್ಯಾರ್ಥಿ ವೇತನ, ಅಂರ್ತಜಾತಿ ವಿವಾಹ ಪ್ರೋತ್ಸಾಹ ಧನ ಕಾರ್ಯಕ್ರಮಗಳ ಅಭಿಯಾನ

Must Read

spot_img
- Advertisement -

ಸಿಂದಗಿ: ಮಾನ್ಯ ಆಯುಕ್ತರು ಸಮಾಜ ಇಲಾಖೆ ಬೆಂಗಳೂರು ರವರು ಹಾಗೂ ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ವಿಜಯಪುರ ರವರ ಆದೇಶದ ಮೇರೆಗೆ ಅ. 28 ರಿಂದ ನ. 17 ರ ವರೆಗೆ ವಿದ್ಯಾರ್ಥಿ ವೇತನ, ಅಂರ್ತಜಾತಿ ವಿವಾಹ ವಿವಿಧ ವಿವಾಹಗಳ ಮತ್ತು ಪ್ರೋತ್ಸಾಹ ಧನ ಈ ಕಾರ್ಯಕ್ರಮಗಳ ಅಭಿಯಾನವನ್ನು ಹಮ್ಮಿಕೊಂಡು ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮುಗಿಸುವಂತೆ ತಾಲೂಕಾ ಅಧಿಕಾರಿ ಎಸ್.ಎನ್.ಭೂಸಗೊಂಡ ಅವರು ನಿರ್ದೇಶನ ನೀಡಿದರು.

ವಿಶೇಷವಾಗಿ ವಿದ್ಯಾರ್ಥಿ ವೇತನವನ್ನು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಮಂಜೂರು ಮಾಡಲು ಆನ್‍ಲೈನ್ ಹಾಕುವಂತೆ ಕಾಲೇಜು ವಸತಿ ನಿಲಯಗಳಲ್ಲಿ ವಾಸವಿರುವ ವಿದ್ಯಾರ್ಥಿಗಳಿಗೆ ಸಹಿತ ವಿದ್ಯಾರ್ಥಿ ವೇತನ ಅರ್ಜಿ ಹಾಕಲು ಕಾಲೇಜು ಪ್ರಾಂಶುಪಾಲರನ್ನು ಮತ್ತು ಕಚೇರಿಯಲ್ಲಿ ಹಾಗೂ ಕಾಲೇಜು ಹಾಸ್ಟೇಲಗಳಲ್ಲಿ ಸಹಾಯಕ ಕೇಂದ್ರ ತೆರಯಲಾಯಿತು. ಎಲ್ಲ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹಾಕುವ ಅರ್ಜಿಗಳಿಗೆ ಹಾಕಲು ಸಹಾಯವಾಗುವ ದೃಷ್ಟಿಯಿಂದ ಸಹಾಯಕ ಕೇಂದ್ರದ ಸದುಪಯೋಗ ಪಡಿಸಿಕೊಳ್ಳಲು ಹಾಗೂ ಇತರೆ ಕಾರ್ಯಕ್ರಮಗಳನ್ನು ನ.17 ರ ಒಳಗಾಗಿ ಮುಗಿಸಿ ಅಭಿಯಾನವನ್ನು ಕಚೇರಿ ಸಿಬ್ಬಂದಿಯವರಿಗೆ ಮತ್ತು ನಿಲಯದ ಮೇಲ್ವಿಚಾರಕರಿಗೆ ಯಶಸ್ವಿಗೊಳಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾ ಸಂಚಾಲಕ ಹರ್ಷವರ್ಧನ ಪೂಜಾರಿ, ಹಾಗೂ ಇಲಾಖೆಗೆ ಸಂಬಂಧಪಟ್ಟಂತಹ ವಸತಿ ನಿಲಯಪಾಲಕರು ಮತ್ತು ತಾಲೂಕು ಅಧಿಕಾರಿಗಳು ಒಳಗೊಂಡಂತೆ ಅನೇಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group