ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ಹಾಗೂ “ದೀಪಿಕಾ ಪ್ರಕಾಶನ ಬೆಳಗಾವಿ” ಸಹಯೋಗದಲ್ಲಿ’ ದಿ.ಎಚ್ ಬಿ ಕುಲಕರ್ಣಿ ಮತ್ತು ದಿ.ಭಾರತಿಭಾಯಿ ದತ್ತಿನಿಧಿ ಕಾರ್ಯಕ್ರಮ’ದನ್ವಯ ಶ್ರೀಮತಿ ದೀಪಿಕಾ ಚಾಟೆ ಅವರ ರಚಿಸಿರುವ ಐದು ಕೃತಿಗಳ ಬಿಡುಗಡೆ ಬೆಳಗಾವಿ ಚೆನ್ನಮ್ಮ ವೃತ್ತದ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ ದಿ.14ರಂದು ಮ. 3-30 ಘಂಟೆಗೆ ಜರುಗಲಿದೆ.
ಕೇಂದ್ರ ಗ್ರಂಥಾಲಯ ಬೆಳಗಾವಿ ಉಪನಿರ್ದೇಶಕರಾದ ಜಿ. ರಾಮಯ್ಯ ಇವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಸಾಹಿತಿ ಡಾ.ನಿರ್ಮಲಾ ಬಟ್ಟಲ ‘ಸಮರ್ಥ ರಾಮದಾಸ’ ಕೃತಿ ಪರಿಚಯ, ‘ಡಾ ರೇಣುಕಾ ಕಠಾರೆ ಅವರು ‘ದೀಪ ಧ್ಯಾನ ಗಝಲ್, ಸಂಕಲನ ಪರಿಚಯ, ಡಾ. ನೀತಾ ರಾವ್ ಅವರು ‘ಮನಸ್ಸಿನ ದೊಂಬರಾಟ ಅಂಕಣ ಬರಹಗಳು. ಕೃತಿ ಪರಿಚಯ ಹಾಗೂ ಶ್ರೀ ಎ.ಎ.ಸನದಿ ಅವರು ‘ಮಕ್ಕಳ ಕುರಿತು ಬರೆದ ಎರಡು ಕೃತಿಗಳ, ಪರಿಚಯ ಮಾಡಲಿದ್ದಾರೆ.
ಬೆಳಗಾವಿ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಹೇಮಾ ಸೊನೊಳ್ಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಮತಿ ರಾಜನಂದಾ ಘಾರ್ಗಿ ಕಾಯ೯ಕ್ರಮ ನಿರೂಪಿಸಲಿದ್ದಾರೆ. ಸಾಹಿತ್ಯಾಸಕ್ತರು ಆಗಮಿಸಿ ಯಶಸ್ವಿಗೊಳಿಸಲು ಕಾರ್ಯದರ್ಶಿ ಶ್ರೀಮತಿ ರಾಜನಂದಾ ಘಾರ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.