ಸಿಂದಗಿ: ಮಕ್ಕಳೆಲ್ಲರೂ ನಾಳಿನ ದೇಶದ ಭವಿಷ್ಯ. ದೇಶ ನಿರ್ಮಾಣಕ್ಕೆ ಶಿಕ್ಷಣದ ಅತ್ಯವಶ್ಯಕತೆ ಮತ್ತು ಮಕ್ಕಳ ಪಾತ್ರ ಏನು ಎಂಬುದನ್ನು ಅರಿತು ಶಿಕ್ಷಕರು ಪಾಠ ಭೋಧನೆಯಲ್ಲಿ ಮನವರಿಕೆ ಮಾಡುವುದು ಅತ್ಯವಶ್ಯಕವಾಗಿದೆ ಎಂದು ಪತ್ರಕರ್ತ ಪಂಡಿತ ಯಂಪೂರೆ ಹೇಳಿದರು.
ಪಟ್ಟಣದ ಶ್ರೀ ಭುವನೇಶ್ವರಿ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಕಾವ್ಯಾ ಆಂಗ್ಲಮಾದ್ಯಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಂಗಮೇಶ್ವರ ಕಾಲೇಜ ಆಫ್ ಪಾರ್ಮಸಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರ ಹಾಕಲು ಶಿಕ್ಷಕರು ಹಾಗೂ ಪಾಲಕರು ವೇದಿಕೆ ರೂಪಿಸಿ ಪ್ರೋತ್ಸಾಹ ನೀಡಿದಾಗ ಎಲೆಮರೆ ಕಾಯಿ ಹಾಗೆ ಅಡಗಿರುವ ಪ್ರತಿಭೆಗಳು ಜಗತ್ತಿಗೆ ಕಾಣಲು ಸಾಧ್ಯ.
ಮಕ್ಕಳಲ್ಲಿ ಒಂದಲ್ಲಾ ಒಂದು ಪ್ರತಿಭೆ ಇದ್ದೇ ಇರುತ್ತದೆ ಆದರೆ ಅವರಿಗೆ ಗುರುತಿಸಿ ಅವರಲ್ಲಿ ಇರುವ ಪ್ರತಿಭೆಯನ್ನು ಹೊರ ಜಗತ್ತಿಗೆ ಪ್ರದರ್ಶಿಸಲು ಪಾಲಕರು ಹಾಗೂ ಶಿಕ್ಷಕರು ಪ್ರೋತ್ಸಾಹಕ ಸಲಹೆ ಮಾರ್ಗದರ್ಶನ ನೀಡುವುದು ತುಂಬಾ ಅಗತ್ಯವಾಗಿದೆ ಎಂದರು.
ಸಭೆ ಅಧ್ಯಕ್ಷತೆ ವಹಿಸಿದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಚಂದ್ರಶೇಖರ ನಾಗರಬೆಟ್ಟ ಮಾತನಾಡಿ, ದೇಶದ ಮೊದಲ ಪ್ರಧಾನಿ ಜವಾಹರಲಾಲ ನೆಹರುರವರು ತಮ್ಮ ಜನ್ಮದಿನವನ್ನು ಮಕ್ಕಳಿಗೆ ಅರ್ಪಿಸಿ ಮಕ್ಕಳ ದಿನವನ್ನಾಗಿ ಆಚರಿಸಿದರು ಅದರ ನಿಮಿತ್ತ ನವ್ಹಂಬರ 14 ರಂದು ಚಾಚಾ ನೆಹರೂ ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತ ಬರಲಾಗಿದೆ. ಮಕ್ಕಳು ನಮ್ಮ ದೇಶದ ಸರ್ವ ಸಂಪತ್ತು ಅವರಿಗೆ ನಮ್ಮ ಭಾರತೀಯ ಸಂಸ್ಕೃತಿ ಕಲಿಸಿ ಅವರಿಗೆ ಒಳ್ಳೆಯ ಸಂಸ್ಕಾರ ಗುಣಗಳು ಜೀವನದಲ್ಲಿ ರೂಡಿಸಿಕೊಂಡು ಉತ್ತಮ ಶಿಕ್ಷಣ ಪಡೆಯುವ ಮೂಲಕ ನೂತನ ವಿಷಯಗಳನ್ನು ಆಟ ಪಾಠ ಹಾಡು ಕಲಿಯುತ್ತಾ ಉತ್ತಮ ಜ್ಞಾನದ ಭಂಡಾರವನ್ನು ಹೆಚ್ಚಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆ, ಕೋಕೋ, ಕಬಡ್ಡಿ, ರಂಗೋಲಿ ಅನೇಕ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ತೃತಿಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಬಹುಮಾನ ವಿತರಣೆ ಮಾಡಿದರು.
ಗುರುಮಾತೆ ಕಾಂಚನಾದೇವಿ ನಾಗರಬೆಟ್ಟ, ಸಂಗಮೇಶ್ವರ ಕಾಲೇಜ ಆಫ್ ಫಾರ್ಮಸಿ ಪ್ರಾಚಾರ್ಯ ಸಂದೀಪ ಚಾಂದಕವಠೆ, ರಾಜು ಕಾಂಬಳೆ, ಮನೋಹರ ಹೊನ್ನಳ್ಳಿ ವೇದಿಕೆ ಮೇಲಿದ್ದರು.
ಕುಮಾರಿ ಅಂಬಿಕಾ ಪೂಜಾರಿ ಸ್ವಾಗತಿಸಿದರು. ತೇಜಸ್ವಿನಿ ನಾರಾಯಣಕರ ನಿರೂಪಿಸಿದರು. ವಫಾ ಬಾಗವಾನ ವಂದಿಸಿದರು.