ಶಾಹೂ ನಗರದಲ್ಲಿ ಸಂಭ್ರಮದ ರಾಜ್ಯೋತ್ಸವ

Must Read

ಬೆಳಗಾವಿ ; ಇಲ್ಲಿನ ಶಾಹೂ ನಗರದ ಯುವ ಕರ್ನಾಟಕ ಅಭಿವೃದ್ಧಿ ಸಂಘದಿಂದ ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಿಕ್ಕಿರಿದ ಜನಸಮೂಹದ ಮಧ್ಯೆ ನಡೆದ ಕಾರ್ಯಕ್ರಮದಲ್ಲಿ ಪುನೀತ ನಮನ ಹಾಗೂ ಹೊಸ ಹಾಡುಗಾರರ ಶೋಧ ಕಾರ್ಯಕ್ರಮ “ಯುವ ಗಂಧರ್ವ” ಅತ್ಯಂತ ಹೃದಯಸ್ಪರ್ಶಿಯಾಗಿ ನಡೆಯಿತು. ನಮೃತಾ ಜಹಗೀರದಾರ, ಜೋತ್ಸ್ನಾ ರಾಕೇಶ ಹಾಗೂ ವಾಸುದೇವ ಐಕ್ರೇತ ತೀರ್ಪುಗಾರರಾಗಿ ಆಗಮಿಸಿದ್ದರು.

ಹಿರಿಯರ ವಿಭಾಗದಲ್ಲಿ ೬ ಯುವಕ ಯುವತಿಯರು ಮತ್ತು ಕಿರಿಯರ ವಿಭಾಗದಲ್ಲಿ ೬ ಮಕ್ಕಳು ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಕಿರಿಯರ ವಿಭಾಗದಲ್ಲಿ ಪ್ರಥಮ ಕು. ಸ್ವಾತಿ ಕಿಡದಾಳ ದ್ವಿತೀಯ ಕು.ತೇಜಸ್ವಿನಿ ಎಸ್ ಕೆ ತೃತೀಯ ಕು. ಶ್ರೀದೇವಿ ಮಾಮಲೆದೇಸಾಯಿ ಸ್ಥಾನ ಗಳಿಸಿದರು. ಹಿರಿಯರ ವಿಭಾಗದಲ್ಲಿ
ಪ್ರಥಮ ರಾಘವೇಂದ್ರ ಬುಜನ್ನವರ ದ್ವಿತೀಯ ಸುಜಾತಾ ಸಣ್ಣಕ್ಕಿ ತೃತೀಯ ವರ್ಷಾ ಕಾರೇಕರ ಸ್ಥಾನ ಗಳಿಸಿದರು.

ಮುಖ್ಯ ಅಥಿತಿಯಾಗಿ ಬೆಳಗಾವಿ ಉತ್ತರದ ಶಾಸಕ ಅನಿಲ ಬೆನಕೆ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಬುಡಾ ಅಧ್ಯಕ್ಷರಾಗಿ ನೇಮಕಗೊಂಡ ಸಂಜಯ ಬೆಳಗಾಂವಕರ, ನಗರ ಸೇವಕರಾದ ಶ್ರೇಯಸ್ ನಾಕಾಡಿ ಮತ್ತು ಶ್ರೀಮತಿ ರೇಷ್ಮಾ ಪಾಟೀಲರನ್ನು ಗೌರವಿಸಲಾಯಿತು.

ಸಂಘದ ಗೌರವಾಧ್ಯಕ್ಷ ಬಸವರಾಜ ಪರವಿನಾಯ್ಕರ, ಅಧ್ಯಕ್ಷ ರವಿ ಪಾಟೀಲ ಮತ್ತು ಮಧುರಾ ಮಹಿಳಾ ಮಂಡಳ, ಶಿವಶಕ್ತಿ ಮಹಿಳಾ ಮಂಡಳದ ಅಧ್ಯಕ್ಷರು ಉಪಸ್ಥಿತರಿದ್ದರು. ಮಹಾಂತೇಶ ಇಂಚಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಶಾಹೂ ನಗರದ ಎಲ್ಲ ಕನ್ನಡ ಮನಸ್ಸುಗಳು ಸೇರಿ ರಾಜ್ಯೋತ್ಸವವನ್ನು ಆನಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group