“ಉತ್ತಮ ಆರೋಗ್ಯಕ್ಕಾಗಿ ರಕ್ತದಾನ ಮಾಡಿರಿ” – ಡಾ|| ವಿಠ್ಠಲ್ ಮಾನೆ

0
322

ಸವದತ್ತಿ: ರಕ್ತ ದಾನ ಮಾಡುವದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ಹೃದಯ ರೋಗದಂಥ ಅನೇಕ ಮಾರಕ ರೋಗಗಳನ್ನು ತಡೆಗಟ್ಟಬಹುದು ಎಂದು ಬೆಳಗಾವಿಯ ಕೆ.ಎಲ್.ಇ. ಡಾಪ್ರಭಾಕರ ಕೋರೆ ಆಸ್ಪತ್ರೆಯ ರಕ್ತ ಕೇಂದ್ರದ ಮುಖ್ಯಸ್ಥರಾದ ಡಾ|| ವಿಠ್ಠಲ್ ಮಾನೆ ನುಡಿದರು.

ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದ ಎನ್.ಎಸ್.ಎಸ್, ಎನ್.ಸಿ.ಸಿ, ಯುತ್ ರೆಡ್ ಕ್ರಾಸ್ ಮತ್ತು ರೆಡ್ ರಿಬ್ಬನ್ ಘಟಕಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಪ್ರತಿಯೊಬ್ಬ ಯುವಕರು ಯುವತಿಯರು ರಕ್ತದಾನವನ್ನ ಮಾಡುವುದರಿಂದ ವೈಯಕ್ತಿಕ ಮತ್ತು ಸಾಮಾಜಿಕ ಪ್ರಗತಿ ಸಾಧ್ಯ. ಮಾನವನ ದೇಹದಲ್ಲಿ ಮಾತ್ರ ಉತ್ಪಾದಿಸಬಹುದಾದ ಸಂಪನ್ಮೂಲವಾಗಿದ್ದು ಇದು ನಮ್ಮ ದೇಹದಲ್ಲಿ ಸರಿಯಾದ ಕ್ರಮದಲ್ಲಿ ರಕ್ತ ಪೂರೈಕೆಯಾಗದಿರುವದರಿಂದ ಸಾವುಗಳು ಅನೇಕ ಸಂಭವಿಸುತ್ತಿವೆ. ಆದ್ದರಿಂದ ಎಲ್ಲರೂ ಸ್ವಯಂ ಆಗಿ ರಕ್ತದಾನ ಮಾಡಬೇಕು ಮತ್ತು ಇತರರು ರಕ್ತದಾನ ಮಾಡಲು ಪ್ರೋತ್ಸಾಹಿಸಬೇಕು ಎಂದು ನುಡಿದರು.

ಡಾ||ಎಸ್. ವಿ. ವಿರಗಿ ಪ್ರಭಾರಿ ಮುಖ್ಯಸ್ಥರು ಕೆ.ಎಲ್.ಇ ಆಸ್ಪತ್ರೆ, ರಕ್ತ ಕೇಂದ್ರ ಬೆಳಗಾವಿ ಮತ್ತು ಸಿಬ್ಬಂದಿವರ್ಗದರು ಇವರ ಸಹಯೊಗದೊಂದಿಗೆ ರಕ್ತದಾನ ಶಿಬಿರದಲ್ಲಿ ೪೦ಕ್ಕೂ ಹೆಚ್ಚು ಜನರು ರಕ್ತ ದಾನ ಮಾಡಿದರು ಈ ಶಿಬಿರದಲ್ಲಿ ಕಾಲೇಜಿನ ಪ್ರಾಚಾರ್ಯರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳು ಮತ್ತು ಕೆ.ಎಲ್.ಇ. ಅಂಗಸಂಸ್ಥೆಗಳ ಮುಖ್ಯಸ್ಥರು ಮತ್ತು ಸಿಬ್ಬಂದಿಯವರು ರಕ್ತ ದಾನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಮಾರುತಿ ಎ. ದೊಂಬರ ವಹಿಸಿದ್ದರು, ಪ್ರೊ. ಎಮ್. ಜೆ. ಹಡಗಲಿ ಸ್ವಾಗತಿಸಿದರು, ಪ್ರೊ. ಎಮ್. ಸಿ. ಹಾದಿಮನಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಶಿವಾನಂದ ಎಂ. ಹೊಳಿ ವಂದಿಸಿದರು, ಪ್ರೊ, ಮೊಹನ. ಬೆಣಚಮರಡಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.