Homeಸುದ್ದಿಗಳುಮನಗೂಳಿ ಅವರ ರಾಜಕೀಯ ಜೀವನ ರೂಪಿಸುವುದು ನಮ್ಮ ಕರ್ತವ್ಯ

ಮನಗೂಳಿ ಅವರ ರಾಜಕೀಯ ಜೀವನ ರೂಪಿಸುವುದು ನಮ್ಮ ಕರ್ತವ್ಯ

ಸಿಂದಗಿ: ಪಟ್ಟಣದ ಕುಡಿಯುವ ನೀರಿನ ಬವಣೆಯನ್ನು ನೀಗಿಸಿದ ಆಧುನಿಕ ಭಗೀರಥ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವ ದಿ. ಎಮ್.ಸಿ.ಮನಗೂಳಿ ಧೀಮಂತ ನಾಯಕನನ್ನು ಕಳೆದು ಕೊಂಡರು ಸಹ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಮಗನನ್ನು ಜನ ಸೇವೆಗೆ ಕೊಟ್ಟಿದ್ದಾರೆ ಈ ಕ್ಷೇತ್ರಕ್ಕೆ ಅವರದ್ದೆ ಆದ ಕೊಡುಗೆಗಳನ್ನು ನೀಡುವ ಎದೆಗಾರಿಕೆಯ ನಾಯಕ ಅಶೋಕ ಮನಗೂಳಿ ಅವರ ರಾಜಕೀಯ ಜೀವನ ರೂಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮೈಬೂಬ ಮರ್ತೂರ ಹೇಳಿದರು.

ಸ್ಥಳೀಯ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಅವರ 53 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತ ಮನಗೂಳಿ ಅಭಿಮಾನಿಗಳು ಹಣ್ಣು ಹಂಪಲು ವಿತರಣೆ ಮಾಡುವ ಮುಖಾಂತರ ಅತ್ಯಂತ ಸರಳ ರೀತಿಯಾಗಿ ಹುಟ್ಟುಹಬ್ಬವನ್ನು ಆಚರಿಸಿ ಮಾತನಾಡಿ, ಈ ಕ್ಷೇತ್ರದ ಜನರ ಮನದಲ್ಲಿ ಅಭಿಮಾನ ತುಂಬಿರುವಾಗ ಎಂದಿಗೂ ಅವರ ಕೈ ಬಿಡುವ ಪ್ರಶ್ನೆ ಉದ್ಭವಿಸುವದಿಲ್ಲ ಎಂದರು.

ಈ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆ, ಖಾಸಗಿ ದವಾಖಾನೆ, ಮನಗೂಳಿ ಆಸ್ಪತ್ರೆ, ಜಾಲಗೇರಿ ಆಸ್ಪತ್ರೆ ಹಾಗೂ ಜಾಲವಾದಿ ಆಸ್ಪತ್ರೆಯಲ್ಲಿ ಎಲ್ಲಾ ರೋಗಿಗಳಿಗೆ ಹಣ್ಣು ಹಂಪಲು ನೀಡುವ ಮುಖಾಂತರವಾಗಿ ಆಚರಣೆ ಮಾಡಲಾಗಿದೆ ಅವರಿಗೆ ದೇವರು ಇನ್ನಷ್ಟು ಹೋರಾಟದ ಶಕ್ತಿ ಕರುಣಿಸಲಿ ಎಂದು ಮರ್ತೂರ, ಮೈಹಬೂಬ ಬಾಗವಾನ, ಸೈಫನ ಖೇಡ, ನಬಿಲಾಲ ಮರ್ತೂರ, ಮೈಹಬೂಬ ಆಳಂದ, ರಹೀಮ್ ಮರ್ತೂರ ಸೇರಿದಂತೆ ಅನೇಕ ಅಭಿಮಾನಿ ಬಳಗ ಅಭಿಮತ ವ್ಯಕ್ತಪಡಿಸಿದರು.

RELATED ARTICLES

Most Popular

close
error: Content is protected !!
Join WhatsApp Group