ಪರಿಸರವನ್ನು ನಾವು ಪ್ರೀತಿಸಿದಷ್ಟು ಅದು ನಮ್ಮನ್ನು ಕಾಪಾಡುತ್ತದೆ

Must Read

ಸಿಂದಗಿ: ಪ್ರಕೃತಿಗೂ ಮಾನವನಿಗೂ ಗಾಢವಾದ ಸಂಬಂಧವಿದೆ, ಪ್ರಕೃತಿಯಲ್ಲಿ ಹುಟ್ಟಿ ಪ್ರಕೃತಿಯಲ್ಲಿ ಬದುಕಿ ಬಾಳುತ್ತಾನೆ. ತನಗೆ ಬೇಕಾದ ಎಲ್ಲವನ್ನು ಪ್ರಕೃತಿಯಿಂದಲೇ ಪಡೆಯುತ್ತಾನೆ ಆದ್ದರಿಂದ ಪ್ರಕೃತಿಯನ್ನು ‘ಪ್ರಕೃತಿಮಾತೆ ಎಂದು ಕರೆಯುತ್ತಾರೆ. ಎಂದು ಯರಗಲ್ ನ ಶ್ರೀ ಸಿದ್ದ ಶಂಕರಾನಂದ ಮಠದ ಪೀಠಾಧಿಪತಿ ವಲ್ಲಭ ಸ್ವಾಮೀಜಿ ಹೇಳಿದರು.

ತಾಲೂಕಿನ ಯರಗಲ್ಲ ಗ್ರಾಮದ ಸಿದ್ದೇಶ್ವರ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಸಿಂದಗಿಯ ವಿಶ್ವ ಬಂಧು ಪರಿಸರ ಬಳಗ ಹಮ್ಮಿಕೊಂಡ 25ನೇ ವಾರದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಮಾತನಾಡಿ, ಪರಿಸರವೇ ಸೃಷ್ಟಿಯ ಪ್ರತಿಯೊಂದು ಜೀವಿಯ ಆಗರವಾಗಿದೆ ಕಾರಣ ಪರಿಸರವನ್ನು ನಾವು ಎಷ್ಟು ಪ್ರೀತಿಸುತ್ತಿವೋ ಅಷ್ಟು ನಮ್ಮನ್ನು ಕಾಪಾಡುತ್ತದೆ ಮಹಾ ಸ್ವಾರ್ಥಿಯಾದ ಮಾನವನಿಂದ ಗ್ರಾಮ -ನಗರ ಸೇರಿದಂತೆ ಸಂಪೂರ್ಣ ಪರಿಸರ ಮಲಿನವಾಗಿ ಮನುಷ್ಯನ ನಾಶ ಸನ್ನಿಹಿತವಾಗಿದೆ ಇನ್ನಾದರೂ ಎಚ್ಚತ್ತುಕೊಳ್ಳಬೇಕಿದೆ ಎಂದರು.

ಪಾಂಡುರಂಗ ಮಠದ ಶಾಮರಾವ್ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶಾಲೆ ಮನೆ ಸೇರಿದಂತೆ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ತಮ್ಮ ಹುಟ್ಟುಹಬ್ಬದಂದು ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಳ್ಳಬೇಕು. ಶಿಕ್ಷಕರು ಪೋಷಕರು ಮತ್ತು ಸಮುದಾಯದ ಸಹಾಯ ಪಡೆದು ವಿದ್ಯಾರ್ಥಿ ಸಂಘಗಳ ಮೂಲಕ ಜಾಥಾ ಹೋಗಿ ಜನರಲ್ಲಿ ಪರಿಸರ ಸಂರಕ್ಷಣೆಯ ಅರಿವನ್ನು ಮೂಡಿಸಬೇಕು ಎಂದರು.

ವಿಶ್ವಬಂಧು ಪರಿಸರ ಬಳಗದ ಸಂಚಾಲಕ ಸಿದ್ದಲಿಂಗ ಚೌಧರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಕುಂತಲಾ ಹಿರೇಮಠ ಪ್ರಾರ್ಥಿಸಿದರು ಡಾ. ಪ್ರಕಾಶ್ ಮೂಡಲಗಿ ಪರಿಸರ ಗೀತೆ ಹಾಡಿದರು ಸಾಯಿಬಣ್ಣ ದೇವರಮನಿ ನಿರೂಪಿಸಿದರು. ಚಂದ್ರಕಾಂತ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಹಾದೇವಿ ಹಿರೇಮಠ, ಸಭಿಯಾ ಮರ್ತುರ, ಮಲ್ಲಿಕಾರ್ಜುನ ಕಡಲಗೊಂಡ, ಪ್ರಕಾಶ ಗಾಣಿಗೇರ, ಶ್ರೀಶೈಲ ನೆದಲಗಿ, ಶಂಕರಲಿಂಗ ಪರಗೊಂಡ, ಮಲ್ಲಮ್ಮ ಲೋಣಿ, ಪಿ.ವಾಯ್.ಬಡಿಗೇರ, ಎಲ್ ವಾಯ್ ಬೈರಾಮಡಗಿ, ಮಾದೇವಪ್ಪ ಪರಗೊಂಡ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Latest News

ಗಾರ್ಡನ್ ಅಭಿವೃದ್ದಿಗೆ  ರೂ.೨೩.೩೯ ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ

ಸಿಂದಗಿ; ಆಯಾ ವಾರ್ಡುಗಳು ಸಾರ್ವಜನಿಕರು, ವಯೋ ವೃದ್ಧರು ವಾಯು ವಿಹಾರಕ್ಕೆ ಅನುಕೂಲವಾಗಲೆಂದು ಪಟ್ಟಣದ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ. ಪಟ್ಟಣದಲ್ಲಿ ಒಟ್ಟು ೭೨...

More Articles Like This

error: Content is protected !!
Join WhatsApp Group