ಅಪಘಾತ ಸಂಭವಿಸಿ ಎರಡು ಗಂಟೆಯಾದರೂ ಬಾರದ ambulance..

Must Read

ಬೀದರ – ಅಪಘಾತವಾಗಿ ರಸ್ತೆ ಮಧ್ಯೆಯೇ ಎರಡು ಗಂಟೆಗೆ ಹೆಚ್ಚು ಕಾಲ ನರಳಾಡಿದ ಅಪಘಾತ ಆದ ವ್ಯಕ್ತಿಗಳು. ಸಮಯಕ್ಕೆ ಬಾರದ ಆ್ಯಂಬುಲೆನ್ಸ್ …ಸಾರ್ವಜನಿಕರಿಂದ ಆಕ್ರೋಶ.

ಕಳೆದ ರಾತ್ರಿ ದನ್ನೋರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ. ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಖಾನಾಪುರ ಗ್ರಾಮದಲ್ಲಿ ವ್ಯಕ್ತಿಗಳಿಬ್ಬರು ಮೋಟರ್ ಬೈಕ್ ನಲ್ಲಿ ಬೀದರ್ ನಿಂದ ಭಾಲ್ಕಿ ಕಡೆ ಹೋಗುವಾಗ ಖಾನಾಪುರ ಗ್ರಾಮದಲ್ಲಿ ಅಪಘಾತ ನಡೆಯಿತು.ಎರಡು ಗಂಟೆ ಕಾದರೂ ಆ್ಯಂಬುಲೆನ್ಸ್ ಬರಲಿಲ್ಲ. ಕರೆ ಮಾಡಿದರೆ ಗಾಡಿ ಲಭ್ಯವಿಲ್ಲ ಎಂಬ ಉತ್ತರ ಬಂದಿದೆ. ಪೊಲೀಸರು ಬೇರೆ ವಾಹನದಲ್ಲಿ ಗಾಯಾಳುಗಳನ್ನು ಸಾಗಿಸಲು ಪ್ರಯತ್ನಿಸಿದರೂ ಯಾವ ವಾಹನವೂ ಸಿಗದ ಕಾರಣ ಗಾಯಾಳಯಗಳ ಪರಿಸ್ಥಿತಿ ಚಿಂತಾಜನಕವಾಗಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ವಿರುದ್ಧ ಜನಾಕ್ರೋಶ ಹೆಚ್ಚಾಗಿದ್ದು ಕರೆ ಮಾಡಿದ ತಕ್ಷಣ ಬರುತ್ತಿದ್ದ ಆ್ಯಂಬುಲೆನ್ಸ್ ಕಾರ್ಯ ವೈಖರಿ ಈಗ ಮೊದಲಿನಂತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಈ ಮೊದಲು ೧೦೮ ನಂಬರಿನಿಂದ ಪ್ರಸಿದ್ಧವಾಗಿದ್ದ ಆ್ಯಂಬುಲೆನ್ಸ್ ಸೇವೆ ರಾಜ್ಯಾದ್ಯಂತ ಹೆಸರುವಾಸಿಯಾಗಿತ್ತು ಆದರೆ ಈಗ ಮೊದಲಿನಂತಿಲ್ಲ. ಕಳೆದ ರಾತ್ರಿ ಅಪಘಾತದಲ್ಲಿ ಗಾಯಾಳುಗಳು ನರಳಿದ ರೀತಿ ನೋಡಿದರೆ ರಾಜ್ಯ ಆರೋಗ್ಯ ಇಲಾಖೆಯ ಕಾರ್ಯ ವೈಖರಿ ಯಾವ ಉಪಯೋಗಕ್ಕೂ ಇಲ್ಲವೆನಿಸುತ್ತದೆ.

ಜನರ ಬಗ್ಗೆ ಕಾಳಜಿ ಇದೆ ಎಂದು ಹೇಳಿಕೊಳ್ಳುವ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆಗಳು ಇನ್ನಾದರೂ ಕಣ್ಣು ತೆರೆಯಬೇಕು. ಸಮರ್ಪಕ ಆ್ಯಂಬುಲೆನ್ಸ್ ಸೇವೆಗೆ ಅಣಿಯಾಗಬೇಕಾಗಿದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group