ಸಂಚಾರಿ ನಿಯಮ ಪಾಲಿಸುವಂತೆ ಪಿಎಸ್ ಐ ಮನವಿ

Must Read

ಫೋಟೋ; ಸಿಂದಗಿಯಲ್ಲಿ ಹೆಲ್ಮೆಟ್ ಧರಿಸಿ ಸಂಚಾರಿ ನಿಯಮ ಪಾಲಿಸುವಂತೆ ಪಿಎಸ್‍ಐ ನಿಂಗಣ್ಣ ಪೂಜಾರಿ ಬೈಕ್ ಸವಾರರಿಗೆ ಹೂವು ನೀಡುವ ಮೂಲಕ ಮನವಿ ಮಾಡಿದರು.

ಸಿಂದಗಿ; ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ,ಸಂಚಾರಿ ನಿಯಮ ಪಾಲಿಸಿ ಅಪಘಾತಗಳನ್ನು ತಪ್ಪಿಸಬೇಕೆಂದು ಪಟ್ಟಣದ ಪೊಲೀಸ ಠಾಣಾ ಎದುರು ಬೈಕ್ ಸವಾರರಿಗೆ ಹೂವು ನೀಡುವ ಮೂಲಕ ಪಿಎಸ್‍ಐ ನಿಂಗಣ್ಣ ಪೂಜಾರಿ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ ದ್ವಿಚಕ್ರ ವಾಹನಗಳೇ ಹೆಚ್ಚು ಅಪಘಾತವಾಗುತ್ತಿವೆ ಮನೆ ಬಿಟ್ಟು ಹೋದ ಯಜಮಾನ ಅಥವಾ ತಂದೆ ಮನೆ ಬರುವಾಗ ಸಿಹಿ ತಿಂಡಿಗಳನ್ನು ತರುತ್ತಾನೆ ಎಂದು ಹಾತೊರೆಯುವ ಜೀವಕ್ಕೆ ಹೆಣವಾಗಿ ಹೋದರೆ ಒಂದು ಆಘಾತಕಾರಿ ಸುದ್ದಿ ನೀಡಿದ ಸಾಕಷ್ಟು ಉದಾರಣೆಗಳಿವೆ. ಕಾರಣ ಪೊಲೀಸರು ಹಿಡಿದು ದಂಡ ಹಾಕುತ್ತಾರೆ ಎನ್ನುವ ಕಾರಣಕ್ಕೆ ಹೆಲ್ಮೆಟ್ ಧರಿಸದೇ ತಮ್ಮ ಹಾಗೂ ಕುಟುಂಬದ ರಕ್ಷಣೆಗೊಸ್ಕರ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಅಪಘಾತವಾಗುವುದನ್ನು ತಡೆಗಟ್ಟಿ ಮತ್ತು ಸಂಚಾರಿ ನಿಯಮಗಳನ್ನು ಪಾಲಿಸಿ ಪೊಲೀಸ ಇಲಾಖೆಯ ಜೊತೆ ಸಹಕರಿಸಿ ಎಂದು ಕಳಕಳಿಯಿಂದ ಮನವಿ ಮಾಡಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group