“ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ದೀವಿಗೆಯನ್ನು ಬೆಳಗಿಸುವುದು ಕಾರ್ತಿಕದ ಸಂಕೇತವಾಗಿದೆ” ಮುರುಘೇಂದ್ರ ಮಹಾಸ್ವಾಮಿಗಳು

Must Read

ಮುನವಳ್ಳಿ: “ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ದೀವಿಗೆಯನ್ನು ಬೆಳಗಿಸುವುದು ಕಾರ್ತಿಕದ ಸಂಕೇತವಾಗಿದೆ. ಧಾರ್ಮಿಕ ಪರಂಪರೆಯಿಂದ ಸಮುದಾಯಗಳು ಬೆಸೆದುಕೊಳ್ಳುತ್ತವೆ. ಇಂದು ಅಡುಗೆ ಕೋಣೆ ಉದ್ಘಾಟನೆ. ಕಾಳಿಕಾದೇವಿ ವಾರ್ಷಿಕ ಕಾರ್ತಿಕೋತ್ಸವ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ೬೮ ಬಾಲಕರ ಉಪನಯನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಉತ್ತಮ ಕಾರ್ಯ ತಾವು ಮಾಡಿರುವಿರಿ. ಇನ್ನೂ ಉತ್ತರೋತ್ತರವಾಗಿ ಇಂತಹ ಕಾರ್ಯಗಳು ಜರುಗಲಿ” ಎಂದು ಮುನವಳ್ಳಿ ಸೋಮಶೇಖರ ಮಠದ ಶ್ರೀ.ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಅವರು ಪಟ್ಟಣದ ಕಾಳಿಕಾ ದೇವಸ್ಥಾನದಲ್ಲಿ ಜರುಗಿದ ಎಂಟೂವರೆ ಲಕ್ಷ ರೂಪಾಯಿಗಳ ವೆಚ್ಚದ ಅಡುಗೆ ಕೋಣೆ ಉದ್ಘಾಟನೆ ಉಪನಯನ ಮತ್ತು ಕಾರ್ತಿಕೋತ್ಸವದ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಾನ್ನಿಧ್ಯ ವಹಿಸಿ ಮಾತನಾಡಿದ ಯರಗಟ್ಟಿಯ ಗಣಪತಿ ಮಹಾರಾಜರು, “ಉಪನಯನದ ಮಹತ್ವ ತಿಳಿಸಿ. ಗುರೂಪದೇಶ” ಮಾಡಿದರು. ಮುಂಬರುವ ಕಾರ್ಯಕ್ರಮಗಳ ನೀಲನಕ್ಷೆಯನ್ನು ಶಾಸಕ ಹಾಗೂ ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಮುನವಳ್ಳಿಯಲ್ಲಿ ಮೊಟ್ಟ ಮೊದಲ ಬಾರಿಗೆ ಜಿಲ್ಲೆಯಲ್ಲೇ ವಿನೂತನ ಎನಿಸುವಂತಹ ‘ನವಗ್ರಹ ವನ’ ವನ್ನು ಕಾಳಿಕಾದೇವಿ ದೇವಾಲಯ ಆವರಣದಲ್ಲಿ ನಿರ್ಮಿಸಲಾಗಿದ್ದು ವನಸ್ಪತಿ ಔಷಧೀಯ ಗುಣವುಳ್ಳ ಸಸ್ಯಗಳನ್ನು ನೆಡಲಾಗಿದ್ದು ಮುಂಬರುವ ದಿನಗಳಲ್ಲಿ ಇದು ಬಹಳ ಉಪಯುಕ್ತ ವನವಾಗುವುದು ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಗುರುನಾಥ ಪತ್ತಾರ ತಿಳಿಸಿದರು. ಇದೇ ಸಂದರ್ಭದಲ್ಲಿ ದಾನಿಗಳ ಸನ್ಮಾನ ಜರುಗಿತು.

ಉಪನಯನದ ಪೌರೋಹಿತ್ಯವನ್ನು ಮೌನೇಶಾಚಾರ್ಯ ದೈವಜ್ಞ ಮಂಜುನಾಥಾಚಾರ್ಯ ದೈವಜ್ಞ. ವಹಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಸಿದ್ದಯ್ಯ ವಡಿಯರ ಹಾಗೂ ಸಿರಸಂಗಿಯ ವಿಶ್ವಕರ್ಮ ಸಮಾಜ ಸಂಸ್ಥೆಯ ನಿರ್ದೇಶಕರಾದ ಅರುಣ ಸುಳ್ಳದ ಕಾಳಿಕಾದೇವಿ ಟ್ರಸ್ಟ ಕಮೀಟಿಯ ಮೌನೇಶ ಮಾಯಾಚಾರಿ. ಮೌನೇಶ ಬಡಿಗೇರ, ವಿನಾಯಕ ಪತ್ತಾರ, ಕಾಳಪ್ಪ ಬಡಿಗೇರ, ಈರಣ್ಣ ಪತ್ತಾರ, ಬಸವರಾಜ ಪತ್ತಾರ, ಮಂಜುನಾಥ ಬಡಿಗೇರ (ಅರ್ಟಗಲ್) ಜಗದೀಶ ಬಡಿಗೇರ ಗುತ್ತಿಗೆದಾರರು, ಅರ್ಜುನ ಬ,ಬಡಿಗೇರ, ಮಂಜುನಾಥ ಶಹಾಪೂರ ನಾರಾಯಣ ಕಂಬಾರ, ನಾಗರಾಜ ದೈವಜ್ಞ,ಕಾಳಿಕಾ ದೇವಾಲಯದ ಮಹಿಳಾ ತಂಡದ ಸುಮಂಗಲಿಯರು ಸೇರಿದಂತೆ ವಿಶ್ವಕರ್ಮ ಸಮಾಜದ ಸಮಸ್ಥ ಬಂಧು ಬಾಂಧವರು ರಾಜಕೀಯ ದುರೀಣರಾದ ಅಂಬರೀಷ ಯಲಿಗಾರ, ರಮೇಶ ಗೋಮಾಡಿ, ವಿಜಯ ಅಮಠೆ, ಅಶೋಕ ಗೋಮಾಡಿ ಮೊದಲಾದವರು ಉಪಸ್ಥಿತರಿದ್ದರು.

ಅಶೋಕ ಬಡಿಗೇರ ಸ್ವಾಗತಿಸಿದರು.ಗುರುನಾಥ ಪತ್ತಾರ ಕಾರ್ಯಕ್ರಮ ನಿರೂಪಿಸಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group