- Advertisement -
ಇದೇ ದಿ. 17ರಂದು ಶುಕ್ರವಾರ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ದಿ. ಲಲಿತಾತಾಯಿ ದೇಶಪಾಂಡೆ ಮತ್ತು ದಿ. ಪ್ರಕಾಶ ದೇಶಪಾಂಡೆಯವರ ಸ್ಮರಣಾರ್ಥ ‘ದತ್ತಿನಿಧಿ ಕಾರ್ಯಕ್ರಮ’ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಡಾ.ಹೇಮಾವತಿ ಸೊನೋಳ್ಳಿ ವಹಿಸಲಿದ್ದು ಅತಿಥಿಗಳಾಗಿ ದತ್ತಿದಾನಿಗಳಾದ ಸಂತೋಷ ದೇಶಪಾಂಡೆ,ಪತ್ರಕರ್ತರಾದ ಡಾ.ಸರಜೂ ಕಾಟ್ಕರ್ ಮತ್ತು ಸಾಹಿತಿ ಆಶಾ ಕಡಪಟ್ಟಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸ್ವರಚಿತ ಕವನ ವಾಚನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ರಾಜನಂದಾ ಘಾರ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.