ಮಲ್ಲಪ್ಪ ಸಾಹುಕಾರ ತಂಗಿ ಫುಲ್ ಫೇಮಸ್
ಚಿಕ್ಕೋಡಿ: ನಿರೂಪಣೆ, ಮಾಡೆಲಿಂಗ್, ನಟನೆಯಿಂದ ಗುರ್ತಿಸಿಕೊಂಡ ನಟಿ ಶುಭಾಂಗಿ ವಿಭೂತೆಯವರು ಬಡತನದಲ್ಲಿ ಅರಳುತ್ತಿರುವ ವಿಶೇಷ ಕಲಾವಿದೆಯಾಗಿದ್ದಾರೆ. ಇವರು ಸಮಯ ಸಿಕ್ಕಾಗ ಲೇಖನ, ಕವಿತೆಗಳನ್ನು ಬರೆಯುವುದರ ಜೊತೆಗೆ ಸಮಾಜ ಸೇವಕಿಯಾಗಿ ಜನರ ಕಣ್ಮನ ಸೆಳೆದಿದ್ದಾರೆ. ಕ್ರೀಡೆಯಲ್ಲಿ ವಿದೇಶಗಳಿಗೂ ಆಯ್ಕೆಯಾಗಿರುವ ಇವರು, ಹೆಣ್ಣೆಂಬ ಕಾರಣಕ್ಕೆ ಹೋಗಲು ಕುಟುಂಬಸ್ಥರು ಅವಕಾಶ ಮಾಡಿಕೊಡಲಿಲ್ಲ. ಆದರೂ ಇವರು ಸಾಧಿಸುವ ಇಚ್ಛಾಶಕ್ತಿಯ ಬಲದೊಂದಿಗೆ ತಮ್ಮೂರಿನ ಯುವತಿಯರಿಗೆ ಸ್ಫೂರ್ತಿಯಾಗಿ, ಹೆಣ್ಣು ಕೂಡ ಸಾಧಿಸಬಲ್ಲಳೆಂಬ ತತ್ವಕ್ಕೆ ಉದಾಹರಣೆಯಾದರು.ಸಾಕಷ್ಟು ಮಾಡೆಲಿಂಗ್ ಷೋ ಗಳಲ್ಲಿ ಭಾಗವಹಿಸಿ,ತಮ್ಮದೆಯಾದ ಛಾಪನ್ನು ಮೂಡಿಸುತ್ತಿದ್ದಾರೆ.ನಟನೆಯಲ್ಲೂ ಸಾಕಷ್ಟು ಎನಿಸಿಕೊಂಡಿರುವ ಈ ಕಲಾವಿದೆ ಬಹುಮುಖ ಪ್ರತಿಭೆ ಎಂದೇ ಹೇಳಬಹುದು.
ಈಗಾಗಲೇ ಇವರ ನಟನೆಯ ‘ಮಲ್ಲಪ್ಪ ಸಾಹುಕಾರ’ ಕಿರುಚಿತ್ರವು ಜವಾರಿ ಜಂಕ್ಷನ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದು, ಇಂದು ಉತ್ತರ ಕರ್ನಾಟಕದ ಮನೆಮಾತಾಗಿದ್ದಾರೆ. ಇಂದು ಇವರ ಜನ್ಮ ದಿನವಾಗಿರುವುದರಿಂದ ದೇವರು ಇವರಿಗೆ ಆಯುರಾರೋಗ್ಯ, ಸುಖ, ಶಾಂತಿ, ನೆಮ್ಮದಿ, ಸಿರಿ-ಸಂಪತ್ತು ನೀಡಿ ಸುಖವಾಗಿಟ್ಟಿರಲೆಂದು ನಮ್ಮ ಟೈಮ್ಸ್ ಆಫ್ ಕರ್ನಾಟಕ ವೆಬ್ ಶುಭ ಹಾರೈಸುತ್ತದೆ.