spot_img
spot_img

ಸಾಧಕರಿಗೊಂದು ಸಲಾಂ ತಂಡದಿಂದ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆ

Must Read

- Advertisement -

ಬಾಗಲಕೋಟೆ: ಪ್ರತಿ ವರ್ಷದಂತೆ ಈ ವರ್ಷವು ಸಾಧಕರಿಗೊಂದು ಸಲಾಂ ತಂಡದಿಂದ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆಯಾಗಿದೆ. ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಸಮಾಜಕ್ಕೆ ಪರಿಚಯಿಸುತ್ತಿರುವ ಈ ತಂಡ ಯಾವುದೇ ಅರ್ಜಿ ಸಲ್ಲಿಸುವ ವಿಧಾನವನ್ನು ಅನುಸರಿಸದೆ. ತಾನೇ ಸ್ವತಃ ಹೋಗಿ ವಿಶೇಷ ಸಾಧಕರ ಕೌಶಲ್ಯಗಳನ್ನು ಗುರುತಿಸಿ, ಅವುಗಳನ್ನು ಪ್ರಾಯೋಗಿಕವಾಗಿ ಪರಿಶೀಲಿಸಿ ಪ್ರಾಮಾಣಿಕ ಮತ್ತು ನ್ಯಾಯಯುತವಾಗಿ ತೊಡಗಿಸಿಕೊಂಡು ಸಾಧನೆಯೊಂದಿಗೆ ಇನ್ನುಳಿದವರಿಗೆ ಸ್ಫೂರ್ತಿಯಾಗುತ್ತಿರುವವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದೆ.

ಸಾಧಕರ ಸಂದರ್ಶನ, ಯುವಪೀಳಿಗೆಗೆ ಮಾರ್ಗದರ್ಶನ

ತತ್ವದಡಿ ನಡೆಯುತ್ತಿರುವ ಸಾಧಕರಿಗೊಂದು ಸಲಾಂ ತಂಡವು ಕಳೆದ ಬಾರಿ ಶಿಕ್ಷಣ ಕ್ಷೇತ್ರದಲ್ಲಿ ಸಾಗರ ತೆಕ್ಕೆನ್ನವರ, ಸಾಹಿತ್ಯದಲ್ಲಿ ಸಿದ್ದಪ್ಪ ಬಿದರಿ, ರಂಗಭೂಮಿಯಲ್ಲಿ ಪಿ. ಡಿ. ಹುದ್ದಾರ, ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟು ಶೇಖರ್ ಕಾಖಂಡಕಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಿ, ಅಭಿನಂದಿಸಿತ್ತು. ಆದರೆ ಈ ಬಾರಿ ಮತ್ತಷ್ಟು ವಿಶೇಷಗಳೊಂದಿಗೆ ಪ್ರಶಸ್ತಿ ಪುರಸ್ಕೃತ ಸಾಧಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮುಖ್ಯಸ್ಥರಾದ ಪರಶುರಾಮ ಕೊಟ್ನಳ್ಳಿಯವರು ಮಾತನಾಡುತ್ತ “ನಮ್ಮ ತಂಡವು, ಸಾಧಕರ ಕೌಶಲ್ಯಗಳನ್ನು, ಪ್ರಾಮಾಣಿಕ ಪ್ರಯತ್ನ, ಹಾಗೂ ಪ್ರಾಯೋಗಿಕವಾಗಿ ಪರೀಕ್ಷಿಸಿ ಪ್ರಶಸ್ತಿಗಳನ್ನು ನೀಡುತ್ತದೆ. ಇದರಲ್ಲಿ ಯಾವುದೇ ರೀತಿಯ ಪಕ್ಷಪಾತ ಧೋರಣೆ ತೋರುವುದಿಲ್ಲ” ಎಂದು ಹೇಳಿ ಪುರಸ್ಕೃತರ ಹೆಸರನ್ನು ತಿಳಿಸಿದರು. ಅಂದ ಹಾಗೆ ಈ ಪ್ರಶಸ್ತಿಗೆ ಭಾಜನರಾದ ಸಾಧಕರು, ಬೀಳಗಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಡಿ. ಎಮ್. ಸಾಹುಕಾರ, ವಿಕಲಚೇತನ ಕಲಾವಿದೆ ಕು. ಸರಿತಾ ಹಳ್ಳೂರು, ಸಮಾಜ ಸೇವಕರಾದ .ಅಶೋಕ ಚಲವಾದಿ, ಪತ್ರಕರ್ತರಾದ ವೆಂಕಟೇಶ್ ಜುಲುಕುಂಟಿ, ಅಂತರರಾಷ್ಟ್ರೀಯ ಕ್ರೀಡಾಪಟು ಕು. ಹಾಸಿಂಬಿ ಪಕಾಲಿ, ಸಿಂದಗಿಯ ಪ್ರಖ್ಯಾತ ಡ್ಯಾನ್ಸರ್ ಆಕಾಶ ರಾಠೋಡ್, ಹಾಗೂ ವಿಸ್ಮಯವೆಂಬಂತೆ ತನ್ನ ಲೇಖನಗಳಿಂದ ಎಲ್ಲರ ಗಮನ ಸೆಳೆದಿದ್ದ ಬಾಲಕ ಕು. ಅರುಣ ಕುಮಾರ ಬಂಡಿವಡ್ಡರವರು ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸಾಧಕರಿಗೊಂದು ಸಲಾಂ ತಂಡದ ಪ್ರಧಾನ ನಿರ್ದೇಶಕರಾದ ಕು. ಹನಮಂತ ಐಹೊಳೆ, ಮಹೇಶ್ ವಡ್ಡರ, ಸುದೀಪ್ ನಾಯಕ, ಮತ್ತಿತರರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group