ಮದುವೆ ಆಗಿ ಆರು ತಿಂಗಳಲ್ಲಿ ಉಸಿರು ನಿಲ್ಲಿಸಿದ ಆಕಾಶ; ಅಣ್ಣನ ಕೊಲೆಯಾಗಿದೆ ಎಂದ ಸಹೋದರಿ

Must Read

ಬೀದರ – ಕೇವಲ ಆರು ತಿಂಗಳ ಹಿಂದೆಯೇ ವಿವಾಹವಾಗಿದ್ದ ಯುವಕನೊಬ್ಬ ಶವ ಬೀದರ್ ನಲ್ಲಿ ಇಂದು ಸಾಯಂಕಾಲ ಆದರ್ಶ ನಗರದ ರೈಲ್ವೆ ಟ್ರಾಕ್ ನಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳೆಗೆ ಎಡೆಮಾಡಿಕೊಟ್ಟಿದೆ.

ಆಕಾಶ ಎಂಬ ಹೆಸರಿಯ ಈ ಮೃತ ಯುವಕ ಮೂಲತ ಚಿಮ್ನಕೊಡ ಗ್ರಾಮದವರು ಆಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಕೆಲಸವನ್ನು ಮಾಡಿಕೊಂಡಿದ್ದ ಎಂದು ಕುಟುಂಬಸ್ಥರಿಂದ ಮಾಹಿತಿ ಲಭ್ಯವಾಗಿದೆ.

ಕುಟುಂಬಸ್ಥರು ಹೇಳುವ ಪ್ರಕಾರ ಆಕಾಶ ಮದುವೆ ಆಗಿ ಕೇವಲ ಆರು ತಿಂಗಳ ಆಗಿತ್ತು ಆದರೆ ಆಕಾಶನ ಸಾವು ಯಾಕೆ ಈ ರೀತಿ ಆಗಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಕುಟುಂಬ ಸದಸ್ಯರು ಕಣ್ಣೀರು ಹಾಕುತ್ತಿದ್ದಾರೆ.

ಆಕಾಶನ ಸಹೋದರಿ ಕಣ್ಣೀರು ಹಾಕುತ್ತಾ, ನನ್ನ ಅಣ್ಣ ಆತ್ಮಹತ್ಯೆ ಮಾಡಿಕೊಂಡಿಲ್ಲ ಸರ್, ಯಾರೋ ಕೊಲೆ ಮಾಡಿದಾರೆ. ನನ್ನ ಅಣ್ಣ ಬೆಳಗ್ಗೆ ನನ್ನನ್ನು ಕಾಲೇಜ್ ಗೆ ಬಿಟ್ಟು ಹೋಗಿದ್ದು ಇವಾಗ ನೋಡಿದರೆ ನನ್ನ ಅಣ್ಣ ಉಸಿರು ನಿಲ್ಲಿಸಿದ್ದಾನೆ ಎಂದು ದುಃಖದಿಂದ ಹೇಳಿದರು. ಇನ್ನೊಂದು ಕಡೆ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು.

ರೈಲ್ವೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ರೈಲ್ವೆ ಪೊಲೀಸರ ತನಿಖೆ ಬಳಿಕ ಸತ್ಯಾಸತ್ಯತೆ ಹೊರಗೆ ಬರಬೇಕಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group