26ರಂದು ಉಪ್ಪಾರ ಸಮಾಜ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ

Must Read

ಮೂಡಲಗಿ: ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದಿಂದ ದಿ; 26ರಂದು ಭಾನುವಾರ ಧಾರವಾಡದ ಮಯೂರ ಆದಿತ್ಯಾ ರೆಸಾರ್ಟದಲ್ಲಿ ಉಪ್ಪಾರ ಸಮಾಜದ ವಿಧ್ಯಾರ್ಥಿ/ನಿಯರಿಗಾಗಿ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಸನ್ 2020-21 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಪ್ರತಿಶತ 80% ಹಾಗೂ ಅಧಿಕ ಅಂಕ ಗಳಿಸಿದ ಉಪ್ಪಾರ ಸಮಾಜದ ವಿದ್ಯಾರ್ಥಿ/ನಿಯರಿಗೆ ಸನ್ಮಾನಿಸಿ ಗೌರವಿಸಲಾಗುವುದು. ಅದರೊಂದಿಗೆ ಉಪ್ಪಾರ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೂ ಸಹ ಸನ್ಮಾನಿಸಿ ಗೌರವಿಸಲಾಗುವುದು ಎಂದು ರಾಜ್ಯಾಧ್ಯಕ್ಷ ವಿಷ್ಣು ಲಾತೂರ ವಕೀಲರು ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಾವಿರಾರು ವಿದ್ಯಾರ್ಥಿ/ನಿಯರು ಆಗಮಿಸುತ್ತಿದ್ದು, ಭಗಿರಥ ಪೀಠದ ಗುರುಗಳಾದ ಶ್ರೀ. ಶ್ರೀ. ಶ್ರೀ. ಪುರುಷೋತ್ತಮಾನಂದಪುರಿ ಸ್ವಾಮೀಜಿಗಳು ಹಾಗೂ ಉಪ್ಪಾರ ಸಮಾಜದ ಸರ್ವ ಪೂಜ್ಯರನ್ನು. ರಾಜಕೀಯ ಮುಖಂಡರನ್ನು ಸಮಾಜದ ಹಿರಿಯರನ್ನು ಮಹಿಳಾ ಮುಖಂಡರನ್ನು ಮತ್ತು ಯುವ ನಾಯಕರನ್ನು ಆಹ್ವಾನಿಸಲಾಗಿದೆ.

ಕಾರಣ ಬೆಳಗಾವಿ ಜಿಲ್ಲೆಯ ಉಪ್ಪಾರ ಸಮಾಜ ಬಾಂಧವರು ಮತ್ತು ವಿದ್ಯಾರ್ಥಿ/ನಿಯರು ಕಾರ್ಯಕ್ರಮದ ಸದುಪಯೋಗ ಪಡೆಸಿಕೊಳ್ಳುವುದರ ಜೊತೆಗೆ ಕಾರ್ಯದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ ಅರುಣ ಸವತಿಕಾಯಿ, ಮೊ.ನಂ.9742716264, ರೇವಣ್ಣ ದುರದುಂಡಿ, ಮೊ.ನಂ.9481740044 ಶ್ರೀಮತಿ. ಭಿಮವ್ವ ಹುಳ್ಳಿ, ಮೊ.ನಂ.7406324034, ದರ್ಮಣ್ಣ ಅರಭಾವಿ, ಮೊ,ನಂ9880420437, ಧರೆಪ್ಪ ನಾಯಕವಾಡಿ, ಮೊ.ನಂ.8867060889 ಇವರನ್ನು ಸಂಪರ್ಕಿಸಲು ಕೋರಲಾಗಿದೆ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group