ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆ; ಮರು ಚುನಾವಣೆ ನಡೆಸುವಂತೆ ಬಿಜೆಪಿ ಪರಾಜಿತ ಅಭ್ಯರ್ಥಿಗಳಿಂದ ಮನವಿ

Must Read

ಮೂಡಲಗಿ:‌‌ ಅರಭಾಂವಿ ಮತಕ್ಷೇತ್ರದ ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆ ಡಿ-27 ರಂದು ನಡೆದ ನಂತರ ಮೂಡಲಗಿ ಶ್ರೀ ಶಿವಬೋಧರಂಗ ಕಾಲೇಜಿನ ಸ್ಟ್ರಾಂಗ್ ರೂಮನಲ್ಲಿ ಇರಿಸಲಾದ ಮತಯಂತ್ರ ಬದಲಾವಣೆಯಾಗಿವೆ ಎಂದು ಬುಧವಾರ ನಗರದ ತಹಶೀಲ್ದಾರ ಕಚೇರಿ ಎದುರು ಕಲ್ಲೋಳಿ ಪಟ್ಟಣದ ನೂರಾರು ಬಿಜೆಪಿ ಕಾರ್ಯಕರ್ತರು ತಹಶೀಲ್ದಾರಿಗೆ ಮನವಿ ಸಲ್ಲಿಸಿ, ಮರು ಚುನಾವಣೆ ನಡೆಸಬೇಕೆಂದು ಆಗ್ರಹಿಸಿದರು.

ತಾಲೂಕಿನ ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಮತಯಂತ್ರ ಬದಲಾವಣೆಯಾಗಿ ಚುನಾವಣೆ ಅಕ್ರಮವಾಗಿದೆ ಎಂದು ಸಂಶಯವಿದ್ದು ಡಿ-27 ರಿಂದ ಸಂಜೆ 6-00 ಗಂಟೆಯಿಂದ ಡಿ-30 ರ ಮಧ್ಯಾಹ್ನ 12-00 ಗಂಟೆವರೆಗೆ ಸ್ಟ್ರಾಂಗ್ ರೂಮನಲ್ಲಿ ಅಳವಡಿಸಿರುವ ಸಿಸಿಟಿವಿ ಪೂಟೇಜ್ ಮತ್ತು ಸ್ಟ್ರಾಂಗ ರೂಮ ಬಾಗಿಲ ಲಾಕ್ ಮಾಡುವುದು, ಸ್ಟ್ರಾಂಗ ರೂಮ ಬಾಗಿಲ ತೆಗೆಯುವುದು ವಿಡಿಯೋ ಪೊಟೇಜ್ ನೀಡುವಂತೆ ತಹಶೀಲ್ದಾರಿಗೆ ಒತ್ತಾಯಿಸಿದರು.

ಮತದಾರರು ಈ ವಾರ್ಡಿನಿಂದ ಆ ವಾರ್ಡಿಗೆ ಹೆಸರು ಸೇರ್ಪಡೆ ಆಗಿವೆ ಅವುಗಳ ಬಗ್ಗೆ ಬಿಎಲ್‍ಒ ಗಮನ ಸೆಳೆದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು. ಸಿಸಿಟಿವಿ ಪೂಟೇಜ್ ಈ ಬಗ್ಗೆ ಬೇಗ ಮಾಹಿತಿ ಸಿಗಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರಮುಖ ಬಸವರಾಜ ಕಡಾಡಿ, ರಾವಸಾಹೇಬ ಬೆಳಕೂಡ, ಅಜೀತ ಬೆಳಕೂಡ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪರಾಜಿತ ಅಭ್ಯರ್ಥಿಗಳಾದ, ಪ್ರಭು ಕಡಾಡಿ, ಅಶೋಕ ಮಕ್ಕಳಗೇರಿ, ಶಿವಪ್ಪ ಬಿ.ಪಾಟೀಲ, ಧರೇಪ್ಪ ಖಾನಗೌಡ, ಅಕ್ಷತಾ ಹುಗಾರ, ಗೀತಾ ನೀಲಪ್ಪ ಮುಂಡಿಗನಾಳ, ಭಾಗ್ಯಶ್ರೀ ಆಡಿನವರ, ಪಾರ್ವತಿ ಚೌಗಲಾ, ಉಮೇಶ ಬಿ.ಪಾಟೀಲ, ಬಸವರಾಜ ಭಜಂತ್ರಿ, ರೇಣುಕಾ ಇಮ್ಮಡೇರ. ಪ್ರಮುಖರಾದ ಹಣಮಂತ ಸಂಗಟಿ, ಈರಣ್ಣ ಮೂನೊಳಿಮಠ, ಭೀಮರಾಯ ಕಡಾಡಿ, ಶಿವಾನಂದ ಹೆಬ್ಬಾಳ, ಮಲ್ಲೇಶ ಗೋರೋಶಿ, ಶಿವಾನಂದ ಕಡಾಡಿ, ರಾಮಲಿಂಗ ಬಿ.ಪಾಟೀಲ, ಕೃಷ್ಟಾ ಮುಂಡಿಗನಾಳ, ಘೂಳಪ್ಪ ವಿಜಯನಗರ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತಿ ಇದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group