ಎಸ್ಎಸ್ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ

Must Read

ಬೆಂಗಳೂರು – ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ೨೦೨೨ ರ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ದಿ.೫ ರಂದು ಹೊರಡಿಸಲಾದ ಪ್ರೌಢ ಶಿಕ್ಷಣ ಮಂಡಳಿಯ ಪ್ರಕಟಣೆಯಲ್ಲಿ ಮಾರ್ಚ್/ಎಪ್ರೀಲ್ ೨೦೨೨ ರ ಎಸ್ಎಸ್ಎಲ್ ಸಿ ಪರೀಕ್ಷೆಗಳನ್ನು ಮಾರ್ಚ್ ೨೮ ರಿಂದ ಎಪ್ರೀಲ್ ೧೧ ರವರೆಗೆ ನಡೆಸಲು ನಿರ್ಧರಿಸಲಾಗಿದೆ.ಸದರಿ ವೇಳಾಪಟ್ಟಿ ಗೆ ಅಭ್ಯರ್ಥಿಗಳು/ಪೋಷಕರಿಂದ ಆಕ್ಷೇಪಣೆ ಸಲ್ಲಿಸಲು ದಿ.೬.೧.೨೦೨೨ ರಿಂದ ೧೪.೧.೨೦೨೨ ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಆಕ್ಷೇಪಣೆಗಳಿದ್ದಲ್ಲಿ ಮಂಡಳಿಯ ಅಂತರ್ಜಾಲ www.sslc.karnatakagovt.in ಇಲ್ಲಿ ಅಥವಾ dpikseeb@gmail.com ಗೆ ಈ ಮೇಲ್ ಮುಖಾಂತರ ಸಲ್ಲಿಸಬಹುದು ಅಥವಾ ” ನಿರ್ದೇಶಕರು (ಪರೀಕ್ಷೆಗಳು), ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ೬ ನೇ ಅಡ್ಡರಸ್ತೆ ಮಲ್ಲೇಶ್ವರಂ, ಬೆಂಗಳೂರು – ೫೬೦೦೦೩ ಇಲ್ಲಿಗೆ ಅಂಚೆ ಮೂಲಕ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

ಶಾಲಾ ಅಭ್ಯರ್ಥಿ/ಪುನರಾವರ್ತಿತ ಶಾಲಾ ಅಭ್ಯರ್ಥಿ/ ಖಾಸಗಿ ಅಭ್ಯರ್ಥಿ/ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳಿಗಾಗಿ ದಿ.೨೮.೩.೨೦೨೨ ರಂದು ಪ್ರಥಮ ಭಾಷಾ ಪರೀಕ್ಷೆಗಳು, ದಿ.೩೦ ರಂದು ದ್ವಿತೀಯ ಭಾಷೆ ಇಂಗ್ಲೀಷ್, ಕನ್ನಡ ಭಾಷಾ ಪರೀಕ್ಷೆ, ದಿ. ೧, ೪, ಹಾಗೂ ೬ ರಂದು ವಿವಿಧ ಕೋರ್ ಸಬ್ಜೆಕ್ಟ್ ಗಳು, ದಿ.೮.೪.೨೨ ರಂದು ತೃತೀಯ ಭಾಷೆ ಹಾಗೂ ಎಸ್ಎಸ್ ಕ್ಯೂ ಎಫ್ ವಿಷಯಗಳಿಗೆ ಪರೀಕ್ಷೆ ಹಾಗೂ ದಿ.೧೧.೪.೨೨ ರಂದು ವಿಜ್ಞಾನ, ರಾಜ್ಯಶಾಸ್ತ್ರ ಹಾಗೂ ಕರ್ನಾಟಕ/ಹಿಂದೂಸ್ತಾನಿ ಸಂಗೀತ ಪರೀಕ್ಷೆಗಳು ನಡೆಯಲಿವೆ ಎಂಬುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group