ಸಿಂದಗಿ: ಇಂದಿನ ವಿದ್ಯುನ್ಮಾನ ಯುಗದಲ್ಲಿ ಕಲುಷಿತ ಹಾಗು ವಿಷಯುಕ್ತ ಆಹಾರ ಸೇವಿಸುವುದರಿಂದ ಅನೇಕ ರೋಗಗಳನ್ನು ಆವ್ಹಾನಿಸಿಕೊಳ್ಳುತ್ತಿದ್ದೇವೆ ಅದಕ್ಕೆ ಪ್ರತಿದಿನ ಸೂರ್ಯ ಉದಯಕ್ಕಿಂತ ಮೊದಲು ಪ್ರಕೃತಿ ನೀಡುವ ನೈಸರ್ಗಿಕವಾಗಿ ವಾಯು ಉಸಿರಾಟ ಮಾಡುವುದರೊಂದಿಗೆ ನಿತ್ಯ ಕರ್ಮವನ್ನು ಮುಗಿಸಿಕೊಂಡು ಸುಮಾರು 3 ರಿಂದ 4 ಕಿ.ಮೀ ವಾಯುವಿಹಾರ ಮಾಡಿ ನಂತರ ಯೋಗಾಭ್ಯಾಸ ಮಾಡಬೇಕು ಇದರಿಂದ ಮನುಷ್ಯನಿಗೆ ಆಕ್ರಮಿಸುತ್ತಿರುವ ರೋಗದಿಂದ ಮುಕ್ತಿ ಹೊಂದಬಹುದು ಎಂದು ಯೋಗ ತರಬೇತಿದಾರ ಗುರುಪ್ರಸಾದ ಕಾಮತ ಹೇಳಿದರು.
ಪಟಣ್ಟದ ಎ.ಪಿಎಮ್.ಸಿ ಆವರಣದಲ್ಲಿ ಯೋಗ ತರಬೇತಿ ನೀಡಿ, ಬೆಳಗ್ಗಿನ ಒಂದು ಯೋಗ ಮನುಷ್ಯನ ಜೀವನದ ಚಿತ್ರಣವನ್ನು ಬದಲಿಸಿಬಿಡುತ್ತದೆ ಯೋಗ ಗುರು ಬಾಬಾ ರಾಮದೇವ ಅವರು ಹೇಳಿದಂತೆ ಕೋರೊನಾದಂತ ಮಹಾಮಾರಿ ರೋಗಕ್ಕೆ ಮೊದಲೂ ಪ್ರತಿದಿನ ಯೋಗದ ಪಾತ್ರ ಬಹು ಮುಖ್ಯ ಎಂದು ತಿಳಿಸಿದ್ದಾರೆ ಅದಕ್ಕೆ ಪ್ರತಿದಿನ ನಾವಿಲ್ಲಿ ಯೋಗದ ಅಬ್ಯಾಸ ತೊಡಗಿದ್ದೇವೆ ಅವರಿವರು ಎನ್ನದೆ ಸಾರ್ವಜನಿಕರು ಯೋಗ ತರಬೇತಿಯಲ್ಲಿ ಪಾಲ್ಗೊಳ್ಳಬಹುದು ಎಂದರು.
ಇದೆ ಸಂದರ್ಭದಲ್ಲಿ ಗಣ್ಯವರ್ತಕ ಅಶೋಕ ವಾರದ ಮಾತನಾಡಿ,ನಾವು ಸುಮಾರು ವರ್ಷದಿಂದ ಇಲ್ಲಿ ವ್ಯಾಯಾಮ ಮಾಡುತ್ತಿದ್ದೇವೆ ಆದ್ದರಿಂದ ನಮ್ಮ ದಿನದ ಆಯಾಸ ಅಲಸ್ಯ ಬೇಜಾರು ಎಲ್ಲದರಿಂದ ಮುಕ್ತರಾಗುವುದರ ಜೊತೆಗೆ ಹೊಸ ಹುಮ್ಮಸ್ಸು ಮೂಡುತ್ತದೆ ಎಂದರು.
ಈ ಸಂದರ್ಭ ಬಿಜೆಪಿ ಮುಖಂಡರಾದ ಶ್ರೀಶೈಲಗೌಡ ಮಾಗಣಗೇರಿ, ರಾಜು ಪುಜಾರಿ, ರುದ್ರಯ್ಯ ಹೀರೆಮಠ, ಸಿದ್ದು ಬಿರಾದಾರ, ಶ್ರೀಪಾದ ಮಲ್ಲೇದ, ಡಾ.ಪ್ರವೀಣ ಬಮ್ಮಣ್ಣಿ, ಶಿವು ವಾರದ, ಗಂಗಾಧರ ಕಿಣಗಿ, ಸಂತೋಷ ಮಲ್ಲೇದ, ಅಕ್ಷಯ ಇಳಗೇರ ತರಬೇತಿಯಲ್ಲಿ ಇದ್ದರು.

