ರಾಜ್ಯ ರೈತ ಮೋರ್ಚಾಕ್ಕೆ ಪದಾಧಿಕಾರಿಗಳ ನೇಮಕ

Must Read

ಬೆಂಗಳೂರು: ರಾಜ್ಯ ರೈತ ಮೋರ್ಚಾಕ್ಕೆ ಪದಾಧಿಕಾರಿಗಳನ್ನು ನೇಮಿಸಿ ಮೋರ್ಚಾದ ರಾಜ್ಯಾಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಆದೇಶ ಹೊರಡಿಸಿದ್ದಾರೆ.

ರಾಜ್ಯ ಉಪಾಧ್ಯಕ್ಷರಾಗಿ ಕುಮಾರಿ ಸಿ.ಮಂಜುಳಾ (ಬೆಂಗಳೂರು ಉತ್ತರ) ಅವರನ್ನು ನೇಮಿಸಲಾಗಿದೆ. ರಾಜ್ಯ ಕಾರ್ಯದರ್ಶಿಯಾಗಿ ರವಿಕಾಂತ ಸಿದ್ದಪ್ಪ ಬಗಲಿ (ವಿಜಯಪುರ), ರಾಜ್ಯ ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಪಿ.ಆರ್.ಪ್ರಶಾಂತ್ (ಶಿವಮೊಗ್ಗ), ರಾಜ್ಯ ಮಾಧ್ಯಮ ಸಂಚಾಲಕರಾಗಿ ಶರತ್ ಹೆಗಡೆ (ಬೆಂಗಳೂರು ಉತ್ತರ), ರಾಜ್ಯ ಕಾರ್ಯಕಾರಿಣಿ ಸದಸ್ಯರನ್ನಾಗಿ ರಾಮನಗೌಡ ತಿಮ್ಮನಗೌಡ ಪಾಟೀಲ (ಬಾಗಲಕೋಟೆ), ಶ್ರೀಮತಿ ಮಹಾದೇವಿ ಪೂಜಾರ್ (ಹುಬ್ಬಳ್ಳಿ- ಧಾರವಾಡ), ಶ್ರೀಮತಿ ಎಂ.ಮೀರಾಬಾಯಿ (ವಿಜಯನಗರ), ಹೆಚ್.ಎಸ್.ದೇವರಾಜು (ಮೈಸೂರು ಗ್ರಾಮಾಂತರ), ಶ್ರೀಮತಿ ರುಕ್ಮಿಣಿ ಯೋಗೇಶ್ (ಹಾಸನ), ಶ್ರೀಮತಿ ಜಯಪ್ರತಿಭಾ ಕೆ.ಎಸ್. (ಚಿತ್ರದುರ್ಗ) ಮತ್ತು ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷರನ್ನಾಗಿ ರುದ್ರಪ್ಪ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ ಎಂದು ರಾಜ್ಯ ಬಿಜೆಪಿಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಪ್ರಕಟಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group