ಮೇಕೆದಾಟು ಪಾದಯಾತ್ರೆಯಲ್ಲಿ ಯುವಕನ ದೀರ್ಘದಂಡ

Must Read

ಸಿಂದಗಿ: ಕುಡಿಯುವ ನೀರಿಗಾಗಿ ನಡೆದ ಮೇಕೆದಾಟು ಯೋಜನೆಗೆ ಆಗ್ರಹಿಸಿ ನಡೆದ ಪಾದಯಾತ್ರೆಯಲ್ಲಿ ಕನಕಪುರ ಸಮೀಪದ ಮೇಕೆದಾಟುವಿನಿಂದ ಬೆಂಗಳೂರಿನವರೆಗೆ ಧೀರ್ಘ ದಂಡ ನಮಸ್ಕಾರ ಹಾಕುವ ಮೂಲಕ ವಿಜಯಪುರ ಜಿಲ್ಲೆಯ ಚಿಕ್ಕರೂಗಿ ಗ್ರಾಮದ ಯುವಕನೊಬ್ಬ ಕೇಂದ್ರ ಬಿಂದುವಾಗಿದ್ದಾನೆ.

ಕಳೆದ ದಿ. 09 ರಿಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಅಕ್ಷಯಕುಮಾರ(ದಾದಾ) ಬಸವರಾಜ ಸಿಂದಗಿ ಕನಕಪುರ ಸಮೀಪದ ದೊಡ್ಡೇನಹಳ್ಳಿಯಿಂದ ಬೆಂಗಳೂರಿನವರೆಗೆ ಸುಮಾರು 110 ಕಿ.ಮೀ ಸಂಪೂರ್ಣ ಧೀರ್ಘದಂಡ ನಮಸ್ಕಾರ ಹಾಕುವ ಸಂಕಲ್ಪ ಹೊಂದಿದ್ದು, ಪ್ರತಿಯೊಬ್ಬರ ಹೋರಾಟಗಾರರ ಕೇಂದ್ರ ಬಿಂದುವಾಗಿದ್ದಾನೆ.

ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯನಾಗಿ ಕಾರ್ಯನಿರ್ವಹಿಸುತ್ತಿದ್ದು, ಸದ್ಯ ಕಾಂಗ್ರೆಸ್ ಸೇವಾದಳದ ದೇವರಹಿಪ್ಪರಗಿ ಘಟಕದ ಅಧ್ಯಕ್ಷನಾಗಿದ್ದಾನೆ. ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕ್ರಮಗಳಿರಲಿ ಸ್ವಯಂ ಪ್ರೇರಣೆಯಿಂದ ಹಾಜರಿರುವ ಅಕ್ಷಯಕುಮಾರ ಸಿಂದಗಿ ಕುಡಿಯುವ ನೀರಿನ ಯೋಜನೆಯಾಗಿರುವ ಮೇಕೆದಾಟು ನಿಮಿತ್ತ ಹಮ್ಮಿಕೊಂಡ ಪಾದಯಾತ್ರೆಯಲ್ಲಿ ಧೀರ್ಘದಂಡ ಹಾಕುವ ಮೂಲಕ ಪಾದಯಾತ್ರೆಯಲ್ಲಿ ಮನೆ ಮಾತಾಗಿದ್ದಾನೆ. ಸ್ವತಃ ನಿರ್ಧಾರ ತೆಗೆದುಕೊಂಡು ಅಳಿಲು ಸೇವೆ ಇರಲಿ ಎಂಬ ಹೆಬ್ಬಯಕೆಯಿಂದ ತಕ್ಷಣ ನಿರ್ಧಾರ ಮಾಡಿ ಸೋಮವಾರ ಬೆಳಗಿನಿಂದ ಪಾದಯಾತ್ರೆಯ ಜೊತೆಯಲ್ಲಿಯೇ ಧೀರ್ಘದಂಡ ನಮಸ್ಕಾರ ಹಾಕುತ್ತ ಹೆಜ್ಜೆ ಹಾಕುತ್ತಿದ್ದಾನೆ.

ದಾದಾ ಜೊತೆ ಕಾಂಗ್ರೆಸ್ ನಾಯಕರ ದಂಡು:

ದಾದಾ ಎಂದೇ ಎಲ್ಲರಿಗೂ ಚಿರಪರಿಚಿತನಾಗಿರುವ ಅಕ್ಷಯಕುಮಾರ ಸಿಂದಗಿ ಧೀರ್ಘದಂಡ ಹಾಕುವ ಸಮಯದಲ್ಲಿ ಕಾಂಗ್ರೆಸ್ ನಾಯಕರ ದಂಡೇ ಹಿಂದೆ ಸಾಗುತ್ತಿದೆ. ಕಾಂಗ್ರೆಸ್‍ನ ಮಾಜಿ ಸಚಿರಾದ ಡಾ. ಎಂ ಬಿ ಪಾಟೀಲ, ಪ್ರಿಯಾಂಕ ಖರ್ಗೆ, ಚಿತ್ರನಟಿ ಉಮಾಶ್ರೀ, ವಿನಯ ಕುಲಕರ್ಣಿ, ರಿಜ್ವಾನ ಅರ್ಷದ, ಅಶೋಕ ಮನಗೂಳಿ, ಕಾಂತಾ ನಾಯಿಕ, ಸಂತೋಷ ಹರನಾಳ, ನಬಿ ಜಮಾದಾರ, ನೂರಹಮ್ಮದ ಅತ್ತಾರ, ಸೇರಿದಂತೆ ನೂರಾರು ಜನ ಕಾಂಗ್ರೆಸ್ ನಾಯಕರ ದಂಡೇ ಹಿಂದೆ ಸಾಗುತ್ತ ಹುರುಪು ಹಾಕಿ ಪಾದಯಾತ್ರೆಗೆ ರಂಗು ನೀಡುತ್ತಿದ್ದಾರೆ.

ಫುಲ್ ಫಿದಾ ಆದ ಡಿಕೆಶಿ:

ಪಾದಯಾತ್ರೆಯಲ್ಲಿ ಇಡೀ ಬೆಂಗಳೂರಿನವರೆಗೆ ಧೀರ್ಘದಂಡ ನಮಸ್ಕಾರ ಹಾಕುವ ಮೂಲಕ ಗಮನ ಸೆಳೆದ ದಾದಾ ಸಿಂದಗಿಯವರನ್ನು ಕಂಡು ಪಾದಯಾತ್ರೆಯ ರೂವಾರಿ ಡಿ ಕೆ ಶಿವಕುಮಾರ ಸ್ವತಃ ಅವನ ಬಳಿ ತೆರಳಿ ಫುಲ್ ಖುಶ್ ಆಗಿ ಸನ್ಮಾನ ಮಾಡಿ ಗೌರವಿಸಿದ್ದಾರೆ. ಪಾದಯಾತ್ರೆಯುದ್ದಕ್ಕೂ ಜತೆಯಲ್ಲಿದ್ದು, ಸಾಥ್ ನೀಡುವಂತೆ ಕೇಳಿಕೊಂಡಿದ್ದಾರೆ. ಅಕ್ಷಯಕುಮಾರನ ಭಕ್ತಿಗೆ ಸಹಸ್ರಾರು ಯುವಕರು ಕುಣಿದು ಕುಪ್ಪಳಿಸುತ್ತ ಅಕ್ಷಯಕುಮಾರನ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ ಹರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಜಯಕಾರ ಕೂಗುತ್ತ ಅಕ್ಷಯಕುಮಾರನ ಹಿಂದೆ ಹೆಜ್ಜೆ ಜೋಡಿಸುತ್ತಿದ್ದಾರೆ.


ಪಾದಯಾತ್ರೆಯಲ್ಲಿ ಉತ್ಸಾಹದಿಂದ ಧೀರ್ಘದಂಡ ನಮಸ್ಕಾರ ಹಾಕುವ ಸಂಕಲ್ಪ ಮಾಡಿದ್ದೇನೆ. ನಮ್ಮದು ಕಾಂಗ್ರೆಸ್ ಮನೆತನ, ಕಾಂಗ್ರೆಸ್ ಪಕ್ಷದ ಪ್ರಗತಿಗಾಗಿ ಶ್ರಮಿಸುತ್ತೇನೆ. ನಮ್ಮ ನಾಯಕರೆಲ್ಲ ಇಷ್ಟೊಂದು ಶ್ರಮದಿಂದ ಇಂತಹ ಸೇವೆ ಮಾಡುತ್ತಿರುವುದು ಪ್ರೇರಣೆಯಾಗಿ ಈ ಕಾಯಕಕ್ಕೆ ಕೈ ಹಾಕಿದ್ದೇನೆ ಇದಕ್ಕೆ ಎಲ್ಲರ ಸಹಕಾರವೂ ಸಿಗುತ್ತಿದೆ.

-ಅಕ್ಷಯಕುಮಾರ ಸಿಂದಗಿ, ಧೀರ್ಘದಂಡ ಹಾಕುತ್ತಿರುವ ಯುವಕ ಚಿಕ್ಕರೂಗಿ (ವಿಜಯಪುರ ಜಿಲ್ಲೆ)


ವರದಿ: ಪಂಡಿತ್ ಯಂಪೂರೆ, ಸಿಂದಗಿ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group