ವಿದ್ವಾನ್ ಎನ್. ರಂಗನಾಥಶರ್ಮರು ಸಂಪಾದಿಸಿರುವ ಕನ್ನಡ ರಾಮಾಯಣ ಮತ್ತು ಪ್ರೊ|| ಎಲ್. ಎಸ್. ಶೇಷಗಿರಿರಾವ್ ಅವರ ಶ್ರೀಮಹಾಭಾರತ ಇವೆರಡೂ ನಮ್ಮ ಮನೆಗಳಲ್ಲಿ ಇರಲೇಬೇಕಾದ ಪುಸ್ತಕಗಳು.
ನಿಜ, ಬಹಳಷ್ಟು ಜನರಿಗೆ ‘ಇಷ್ಟು ದೊಡ್ಡ ಪುಸ್ತಕಗಳನ್ನು ಓದುವುದು ಹೇಗೆ?’- ಎಂಬ ಚಿಂತೆ. ವಿಶೇಷವೆಂದರೆ, ಇವೆರಡನ್ನೂ ಪುರಸೊತ್ತಾದಾಗ ಆದಾಗ ಯಾವ ಪುಟವನ್ನು ಬೇಕಾದರೂ ತೆರೆದು ಓದಬಹುದು; ಅಲ್ಲೊಂದು ವಿಶೇಷ ಸಂಗತಿ, ಸ್ವಾರಸ್ಯಕರ ವಿಷಯ, ಯಾವುದೊ ಒಂದು ಕಥೆ, ಯಾವುದೊ ಒಂದು ನೀತಿ, ಹೀಗೆ ಒಂದಲ್ಲ ಒಂದು ಮಹತ್ತ್ವದ ಅಂಶ ನಮಗಾಗಿ ಕಾದಿರುತ್ತದೆ!
ಇನ್ನು ಮನೆಯಲ್ಲಿ ಎಲ್ಲರಿಗೂ ಕಾಣುವಂತೆ ಈ ಪುಸ್ತಕಗಳು ಇದ್ದಾಗ, ಅವುಗಳನ್ನು ದಿನವೂ ನೋಡುನೋಡುತ್ತಲೇ ಅವುಗಳ ಬಗ್ಗೆ ಕುತೂಹಲ ಮೊಳಕೆಯೊಡೆಯುತ್ತದೆ. ಹಾಗೆ, ಮನೆಯವರೆಲ್ಲರೂ ಓದುವಂತಾಗುತ್ತದೆ. ಮಕ್ಕಳಿಗಂತೂ ಇಲ್ಲಿಯ ಕಥೆಗಳು ಅಚ್ಚುಮೆಚ್ಚಿನವು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಮೊನ್ನೆ ಮೊನ್ನೆಯಷ್ಟೆ ಈ ಎರಡೂ ಪುಸ್ತಕಗಳನ್ನು ತರಿಸಿಕೊಂಡ ಹಿರಿಯರೊಬ್ಬರು ಪುಸ್ತಕ ತಲಪಿದ ಎರಡುದಿನದಮೇಲೆ ಕಳಿಸಿದ ಮೆಸೇಜು ಇದು:
ನಮ್ಮ ಮನೆಯಲ್ಲಿ ಬೇರೆ ಏನಿದೆ, ಇಲ್ಲ – ಎಂಬುದು ಪಕ್ಕಕ್ಕಿರಲಿ; ರಾಮಾಯಣ-ಮಹಾಭಾರತದ ಒಂದೊಂದು ಪುಸ್ತಕವೂ ಇಲ್ಲವೆಂದಾದರೆ ಬೇರೆ ಏನೆಲ್ಲ ಇದ್ದೂ ಏನು ಪ್ರಯೋಜನ?
ಹೌದಲ್ಲವಾ? ಮತ್ತೇಕೆ ತಡ?
ಹ್ಞಾ! ಮಕರ ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ಎರಡೂ ಪುಸ್ತಕಗಳು ರಿಯಾಯಿತಿ ದರದಲ್ಲಿ ಸಿಗುತ್ತವೆ.
ರಾಮಾಯಣ_ಮಹಾಭಾರತ ಪುಸ್ತಕಗಳನ್ನು ಖರೀದಿಸಲು WhatsApp ಮಾಡಿ: 7483681708