ಕೂಡಲಸಂಗಮ: ಪಾದಯಾತ್ರೆ ವರ್ಷಾಚರಣೆ ಕಾರ್ಯಕ್ರಮ ಮುಂದೂಡಿಕೆ

Must Read

ಜನವರಿ 14 ರಂದು ಕೂಡಲಸಂಗಮದ ಪಂಚಮಸಾಲಿ ಪೀಠದಲ್ಲಿ ನಡೆಯಬೇಕಿದ್ದ ಪಂಚಮಸಾಲಿ ಪಾದಯಾತ್ರೆ ವರ್ಷಾಚರಣೆ ಹಾಗೂ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಮುಂದಿನ ದಿನಾಂಕವನ್ನು ಕರೋನಾ ನಿಯಮಗಳು ಸಡಿಲಗೊಂಡ ನಂತರ ಪ್ರಕಟಿಸಲಾಗುವುದು ಎಂದು ಬಾಗಲಕೋಟೆಯಲ್ಲಿ ಜನವರಿ 12 ರಂದು ನಡೆದ ಪಂಚಮಸಾಲಿ ತುರ್ತು ಸಭೆಯಲ್ಲಿ ನಿರ್ಧರಿಸಲಾಗಿದೆ.

ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಬಸವನಗೌಡ ಪಾಟೀಲ್ ಯಾತ್ನಾಳ್ ಸ್ವಾಗತ ಸಮಿತಿ ಅಧ್ಯಕ್ಷರು

ಡಾ.ವಿಜಯಾನಂದ ಕಾಶಪ್ಪನವರ ರಾಷ್ಟ್ರೀಯ ಅಧ್ಯಕ್ಷರು ಪಂಚಮಸಾಲಿ ಮಹಾಸಭಾ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ದಿ 14 ರಂದು ಸ್ವತಃ ಮುಖ್ಯಮಂತ್ರಿಗಳು ಕೂಡಲಸಂಗಮಕ್ಕೆ ಆಗಮಿಸಿ ಪಂವಮಸಾಲಿಗಳ ಪಾದಯಾತ್ರೆ ವರ್ಷಾಚರಣೆಯಲ್ಲಿ ಪಾಲ್ಗೊಳ್ಳಲಿದ್ದರು. ಅದೇ ದಿನ 2ಎ ಮೀಸಲಾತಿಯ ಸಿಹಿ ಸುದ್ದಿಯನ್ನೂ ಅವರು ಪ್ರಕಟಿಸುವ ನಿರೀಕ್ಷೆಯಿತ್ತು ಆದರೆ ಕೋವಿಡ್ ಹೆಚ್ಚಳವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ವನ್ನು ರದ್ದುಪಡಿಸಲಾಗಿದೆ.

ಪಂಚಮಸಾಲಿ ಸೋಷಿಯಲ್ ಮೀಡಿಯಾ ವಿಭಾಗದ ರಾಜ್ಯಾಧ್ಯಕ್ಷ, ದೀಪಕ ಜುಂಜರವಾಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group