ರೈತ ಮಹಿಳೆಯರಿಗೆ ಸುರಕ್ಷಿತ ಕಿಟ್ ವಿತರಣೆ

Must Read

ಮುನವಳ್ಳಿ : ಪಟ್ಟಣದ ಶ್ರೀ ರೇಣುಕಾ ಶುಗರ್ಸ ಸಕ್ಕರೆ ಕಾರ್ಖಾನೆಯಲ್ಲಿ ಸೋಲಿಡರಿಡ್ಯಾಡ ಶ್ರೀ ರೇಣುಕಾ ಶುಗರ್ಸ್ ಸಂಯುಕ್ತಾಶ್ರದಲ್ಲಿ ರೈತ ಮಹಿಳೆಯರಿಗೆ ಸುರಕ್ಷತಾ ಕಿಟ್ ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರಾಘವೇಂದ್ರ ಗುದಗಾಪೂರ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಹಿನ್ನೆಲೆ ಮತ್ತು ಉದ್ದೇಶವನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಮಹಾವೀರ ಮಲಗೌಡನವರ್ ಮಾತನಾಡಿ, “ಕೃಷಿಯಲ್ಲಿ ಮಹಿಳೆಯರು ತುಂಬಾ ಪ್ರಮುಖ ಪಾತ್ರ ವಹಿಸುತ್ತಾರೆ ಹಳ್ಳಿಗಳಲ್ಲಿ ಮಹಿಳೆಯರಿಗೆ ಕೃಷಿಯೇ ಜೀವನಾಧಾರ ಮತ್ತು ಕೃಷಿಗೆ ರೈತ ಮಹಿಳೆಯರೇ ಬೆನ್ನೆಲುಬು. ಲಿಂಗ ತಾರತಮ್ಯ ಸಲುವಾಗಿ ಅವರು ಬಯಸಿದ ಮಾನ್ಯತೆಯನ್ನು ಪಡೆಯುತ್ತಿಲ್ಲ ಕೃಷಿಯಲ್ಲಿ ಶೇಕಡಾ 80ರಷ್ಟು ಕೆಲಸವನ್ನು ಮಹಿಳೆಯರೇ ನಿಭಾಯಿಸುತ್ತಾರೆ ಬಿತ್ತನೆಯಾಗಿರಬಹುದು, ಕೊಯ್ಲು, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಹೀಗೆ ನಾನಾತರದ ಕೆಲಸಗಳಲ್ಲಿ ಮಹಿಳೆಯರು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ ಈ ಸುರಕ್ಷಿತ ಕಿಟ್ ಗಳನ್ನು ನೀಡುತ್ತಿರುವ ಮುಖ್ಯ ಉದ್ದೇಶವಂದರೆ ಕೃಷಿ ಕಾರ್ಮಿಕರು ನಾನಾ ರೀತಿಯ ಯಂತ್ರೋಪಕರಣಗಳ ಜೊತೆ, ಪ್ರಾಣಿ, ಸಸ್ಯ ಮತ್ತು ವ್ಯಾಪಕವಾಗಿ ವಿವಿಧ ಭೌಗೋಳಿಕ ಹಾಗೂ ಹವಾಮಾನದ ಪರಿಸ್ಥಿತಿ ಗಳಲ್ಲಿ ಒಳಾಂಗಣ ಮತ್ತು ಹೊರಾಂಗಣ ಪರಿಸ್ಥಿತಿಯಲ್ಲಿ ಕೂಡ ಕೆಲಸ ಮಾಡಬೇಕಾಗುತ್ತದೆ ಎಲ್ಲ ಕ್ಷೇತ್ರಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಕೃಷಿಕ್ಷೇತ್ರ ಅತ್ಯಂತ ಅಪಾಯಕಾರಿ ಪ್ರತಿವರ್ಷ ಕೃಷಿಕಾರ್ಮಿಕರು ಅಪಘಾತ ಮತ್ತು ಅನಾರೋಗ್ಯದಿಂದ ಬಳಲುತ್ತಾರೆ ಇದಕ್ಕೆ ಪ್ರಮುಖ ಕಾರಣ ಕೃಷಿ ಚಟುವಟಿಕೆಯಲ್ಲಿ ಸುರಕ್ಷತಾ ಸಾಮಗ್ರಿಗಳನ್ನು ಬಳಸದಿರುವುದು ಈ ಎಲ್ಲ ವಿಷಯವನ್ನು ಪರಿಗಣನೆಗೆ ತೆಗೆದುಕೊಂಡು ನಾವು ಈ ರೀತಿಯ ಸುರಕ್ಷತೆಯ ಪಟ್ಟಿಗಳನ್ನು ವಿತರಣೆ ಮಾಡುತ್ತಿದ್ದೇವೆ ಇದರ ಸದುಪಯೋಗವನ್ನು ಫಲಾನುಭವಿಗಳು ತೆಗೆದುಕೊಳ್ಳಬೇಕು”ಎಂದು ವಿವರಿಸಿದರು.

ಕಾರ್ಖಾನೆಯ ಸಿಬ್ಬಂದಿಗಳಾದ ಮ್ಯಾನೇಜರ್ ಸುಧೀರ್ ಕರಿಕಟ್ಟಿ, ಅಸಿಸ್ಟೆಂಟ್ ಮ್ಯಾನೇಜರ್ ಬಾಳೇಶ್ ಶೀಗುಣಸಿ ,ಸರ್ಕಲ್ ಅಧಿಕಾರಿ ಆದಂತಹ ರಂಗಪ್ಪ ಬಟಕುರ್ಕಿ ಮತ್ತು ಕ್ಷೇತ್ರ ಸಿಬ್ಬಂದಿಗಳಾದ ಮಡಿವಾಳರ್, ಟಿಎಸ್ ಜೈನ್, ಸಾವಂತ್ ,ಡಾಂಗಿಮಠ, ಕಿರಣ್ ಎಲಿಗಾರ್ ಮತ್ತಿತರರು ಹಾಜರಿದ್ದರು.

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group