ಬೀದರ: ಆರು ನೂರು ಗಡಿ ದಾಟಿದೆ ಕರೋನ ಪ್ರಕರಣ.

Must Read

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಕರೋನ ಆರ್ಭಟ ಹೆಚ್ಚಾಗಿದ್ದು ಸದ್ಯಕ್ಕೆ ಆರು ನೂರು ಗಡಿ ದಾಟಿ ಆತಂಕ ಹೆಚ್ಚಿಸಿದೆ.

ಜಿಲ್ಲಾ ಆಡಳಿತ ಹೇಗೆ ಕರೋನ ಹತೋಟಿಗೆ ತರಬಹುದು ಎಂಬುದು ಜಿಲ್ಲೆಯ ಜನರಲ್ಲಿ ಕುತೂಹಲ ಹೆಚ್ಚಾಗಿದೆ. ಇನ್ನೊಂದು ಕಡೆ ಹುಮನಾಬಾದ ನಲ್ಲಿ ಕರೋನಾ ಮಹಾ ಸ್ಫೋಟಗೊಂಡಿದೆ ಶಾಲಾ ಮಕ್ಕಳನ್ನು ಗುರಿಯಾಗಿಸಿ ಮಕ್ಕಳಿಗೆ ವಕ್ಕರಿಸಿದೆ ಕರೋನ. ವಿದ್ಯಾರ್ಥಿಗಳು ತಂದೆ ತಾಯಿಯರಲ್ಲಿ ಭಯ ಹುಟ್ಟಿದ್ದು ಮಕ್ಕಳು ಬೇಗ ಗುಣವಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಪ್ರಕರಣ ವರದಿಯಾಗುತ್ತಿದ್ದಂತೆಯೇ ಹುಮನಾಬಾದ ಶಾಸಕ ರಾಜಶೇಖರ ಪಾಟೀಲ ಶಾಲೆಗೆ ಧಿಡೀರ್ ಭೇಟಿ ನೀಡಿದರು.

ಕಿತ್ತೂರುರಾಣಿ ಚನ್ನಮ್ಮ ವಿದ್ಯಾರ್ಥಿ ವಸತಿ ನಿಲಯದಲ್ಲಿ 21ಕೋವಿಡ ಪ್ರಕರಣ ಧೃಡ

ಹುಮನಾಬಾದ್: ಪಟ್ಟಣದ ಕಿತ್ತೂರುರಾಣಿ ಚನ್ನಮ್ಮ ವಿದ್ಯಾರ್ಥಿ ವಸತಿ ನಿಲಯದ 21ವಿದ್ಯಾರ್ಥಿನಿಯರಿಗೆ ಕೋವಿಡ್ ಧೃಡಪಟ್ಟ ಹಿನ್ನೆಲೆಯಲ್ಲಿ ಶಾಸಕ ರಾಜಶೇಖರ ಬಿ.ಪಾಟೀಲ ಶನಿವಾರ ಭೇಟಿ ನೀಡಿ, ಪರಿಶೀಲಿಸಿದರು.

ಮುಂಜಾಗೃತಾ ಕ್ರಮವಾಗಿ ವಿದ್ಯಾರ್ಥಿನಿಯರಿಗೆ ಪೌಷ್ಠಿಕ ಆಹಾರ ವ್ಯವಸ್ಥೆ ಮಾಡುವುದರ ಜತೆಗೆ ಕೋವಿಡ್ ಹೆಚ್ಚಳವಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.

ತಹಶೀಲ್ದಾರ್ ಡಾ. ಪ್ರದೀಪ ಹಿರೇಮಠ, ಕೋವಿಡ ನೋಡಲ್ ಅಧಿಕಾರಿ ಡಾ.ಗೋವಿಂದ, ಮುಖ್ಯ ಆರೋಗ್ಯ ಅಧಿಕಾರಿ ಡಾ.ನಾಗನಾಥ ಹುಲಸೂರೆ, ಪುರಸಭೆ ಸದಸ್ಯ ಅಫರಸಮಿಯ್ಯ ಮತ್ತಿತರರು ಇದ್ದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ವ್ಯಕ್ತಿ ದಾರುಣ ಸಾವು

ಬೀದರ - ಮಕರ ಸಂಕ್ರಾಂತಿ ನಿಮಿತ್ತ ಗಾಳಿಪಟ ಹಾರಿಸುತ್ತಿರುವ ಸಂದರ್ಭದಲ್ಲಿ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಯುವಕ ಸಂಜಿಕುಮಾರ ಎಂಬುವವರ ಕುತ್ತಿಗೆಗೆ ಗಾಳಿ ಪಟದ ಮಾಂಜಾ(ಚೀನಿ...

More Articles Like This

error: Content is protected !!
Join WhatsApp Group