ಸಿಂದಗಿ: ಬರದ ನಾಡು ವಿಜಯಪುರದಲ್ಲಿ ಚಿಮ್ಮಲಗಿ ತುಬುಚಿ ಏತನೀರಾವರಿ ಯೋಜನೆಯಿಂದ ಸಂಪೂರ್ಣ ನೀರಾವರಿ ಮಾಡಿದ ಶ್ರೇಯಸ್ಸು ಮಾಜಿ ಸಚಿವ ಎಂ.ಬಿ.ಪಾಟೀಲರಿಗೆ ಸಲ್ಲುತ್ತದೆ ಆದರೆ ಸರಕಾರದ ಅಂಕಿ-ಅಂಶ ಅರಿಯದೇ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಗಾಂವ ಗುತ್ತಿಗೆ ಹೇಳಿಕೆ ನೀಡುತ್ತಿರುವುದನ್ನು ನಿಲ್ಲಿಸಬೇಕು ಇಲ್ಲದಿದ್ದರೆ ಕಾಂಗ್ರೆಸ್ ಸಮಿತಿ ವತಿಯಿಂದ ಇಡೀ ರಾಜ್ಯಾದ್ಯಂತ ಉಗ್ರವಾಗಿ ಹೊರಾಟ ನಡೆಸಬೇಕಾಗುತ್ತದೆ ಎಂದು ಪಕ್ಷದ ವಕ್ತಾರ ರಾಜಶೇಖರ ಕೂಚಬಾಳ ಎಚ್ಚರಿಕೆ ನೀಡಿದರು.
ಪಟ್ಟಣದ ಸೋಂಪುರ ರಸ್ತೆಯಲ್ಲಿರುವ ಜೇತವನದಲ್ಲಿ ಕಾಂಗ್ರೆಸ್ ಸಮಿತಿ ಎಸ್ ಸಿ ಘಟಕದಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಸಾಲಟ್ಟಿ, ಮಂಡೂರಿ ಏತನೀರಾವರಿ ಇಡೀ ರಾಜ್ಯಕ್ಕೆ ನೀರಾವರಿ ಕಲ್ಪಿಸಿಕೊಟ್ಟು ನೀರಾವರಿ ಎಲ್ಲ ಯೋಜನೆಗಳಿಗೆ ಚಾಲನೆ ನೀಡಿದ ಆಧುನಿಕ ಭಗೀರಥ ಮಾಜಿ ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ ಅವರ ಮನೆಗೆ ಬಿಜೆಪಿ ಕಾರ್ಯಕರ್ತರು ಘೇರಾವ್ ಹಾಕಿ ಹೈಡ್ರಾಮಾದಂಥ ಗೊಂದಲ ಸೃಷ್ಟಿಸಿದ್ದಾರೆ. ಎಂ.ಬಿ.ಪಾಟೀಲರು ವಿಜಯಪುರ ನಗರದಲ್ಲಿ ಬುದ್ಧವಿಹಾರ ನಿರ್ಮಿಸಿ ದಲಿತರ ಜನಮನ ಗೆದ್ದಿದ್ದಾರೆ. ಸಚಿವ ಕಾರಜೋಳ ಅವರು ದಲಿತರ ಹೆಸರಿನ ಮೇಲೆ ಹುದ್ದೆ ಗಿಟ್ಟಿಸಿಕೊಂಡು ಮಂತ್ರಿಯಾಗಿದ್ದಾರೆ ಅವರು ಮಾಡಿದ ಸಾಧನೆಯಾದರು ಏನು ಎಂದು ಪ್ರಶ್ನಿಸಿದ ಅವರು, ಸಮಾಜ ಕಲ್ಯಾಣ ಇಲಾಖೆ ಸಚಿವರಿದ್ದ ಸಂದರ್ಭದಲ್ಲಿ ದಲಿತರಿಗಾಗಿ ಇದ್ದ ಐರಾವತ ಯೋಜನೆ, ಸ್ವಯಂ ಉದ್ಯೋಗ ಯೋಜನೆಯಡಿ ರೂ 5 ಲಕ್ಷ ಸಬ್ಸಿಡಿಯನ್ನು 1 ಲಕ್ಷಕ್ಕೆ ಇಳಿಸಿದ್ದಲ್ಲದೆ ವಾಹನ ಸೌಲಭ್ಯ, ಪ್ರಬುದ್ಧ ಯೋಜನೆ, ಶಿಷ್ಯವೇತನ ಸೇರಿದಂತೆ ಎಲ್ಲ ಯೋಜನೆಗಳನ್ನು ನಿಲ್ಲಿಸಿದಲ್ಲದೆ ನಿಗಮಗಳನ್ನು ಇಬ್ಭಾಗ ಮಾಡಿದರು ಕೂಡಾ ಸೌಲಭ್ಯಗಳು ಸಿಗದಂತಾಗಿದೆ. ಎಸ್‍ಸಿಪಿ ಟಿಎಸ್‍ಪಿ ಯೋಜನೆಯ ರೂ. 84 ಸಾವಿರ ಲಕ್ಷ ಹಣವನ್ನು ಕಾನೂನು ತಿದ್ದುಪಡಿ ಮಾಡಿ ಬೇರೆ ಇಲಾಖೆಗೆ ಕಮಿಷನ್ ಪಡೆದು ಮಾರಿಕೊಂಡು ದಲಿತರ ಟ್ರೋಲ್ ಕಾರ್ಡ ನೀವಾಗಿದ್ದಿರಿ ಅವಳಿ ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿ ಕಟ್ಟಿ ದಲಿತರು ತಲೆ ಎತ್ತಿ ತಿರುಗುವಂತೆ ಮಾಡಿ ದಲಿತರ ಸಮಗ್ರ ಅಭಿವೃದ್ದಿಗೆ ಸಹಕರಿಸಿ ಎಲ್ಲ ಯೋಜನೆಗಳ ಅರಿವು ಮೂಡಿಸಿದ ಪ್ರೋ ರಾಜು ಆಲಗೂರ ಅವರನ್ನು ದಲಿತರ ಟ್ರೋಲ್ ಕಾರ್ಡ ಎಂದು ಹೇಳಿಕೆ ನೀಡುತ್ತಿರುವ ರಮೇಶ ಜಿಗಜಿಣಗಿ ಹಾಗೂ ಕಾರಜೋಳ ಅವರು ಹಾಳಗುಂಡಕ್ಕನಾಳ ಗ್ರಾಮದಲ್ಲಿ ದಲಿತರ ಮೇಲೆ ಆದ ಘಟನೆ ಸಂದರ್ಭದಲ್ಲಿ ಯಾವು ರೀತಿಯಾಗಿ ಮಾತನಾಡಿದ್ದು ಗೊತ್ತು ಇಂತವರು ದಲಿತರು ಎಂದು ಹೇಳಿಕೊಳ್ಳುವುದಕ್ಕೆ ನೈತಿಕ ಹಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಒಬ್ಬ ಸಂವಿಧಾನ ಬದಲಾವಣೆ ಮಾಡುತ್ತೇವೆ, ಇನ್ನೊಬ್ಬ ಸಂವಿಧಾನ ಸುಡುತ್ತೇವೆ ಮತ್ತು ದಲಿತರ ಸೌಲಭ್ಯ ಕಡಿತ ಗೊಳಿಸುವಾಗ ದಲಿತರೆನ್ನಿಸಿಕೊಂಡವರು ಎಲ್ಲಿ ಹೋಗಿದ್ದಿರಿ. ದಲಿತರಿಗಾಗಿ ಒಂದು ಸೌಲಭ್ಯಗಳನ್ನು ಒದಗಿಸದೇ ದಲಿತರ ಅಸ್ಮಿತೆಯನ್ನು ಅಧಿಕಾರಕ್ಕಾಗಿ ಜಾತೀಯತೆಯನ್ನು ಎತ್ತಿ ಹಿಡಿದವರು ನೀವು ವಿನಾಕಾರಣ ಕೀಳು ಮಟ್ಟದ ಭಾಷೆಯನ್ನು ಬಳಕೆ ಮಾಡುವುದರ ಜೊತೆಗೆ ಹೀನ ಕೃತ್ಯವೆಸಗುವುದರ ಮೂಲಕ ಪ್ರೋ. ರಾಜು ಆಲಗೂರ ಅವರ ತೇಜೋವಧೆ ಮಾಡುವುದಲ್ಲದೆ ಅವರ ಘನತೆಗೆ ಕುಂದು ತರುತ್ತಿರುವವರಿಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತದೆ. ಬರದ ನಾಡಿನ ಭಗೀರಥ ಎಂ.ಬಿ.ಪಾಟೀಲರು ದಲಿತರ ಮುಂಬಡ್ತಿ ವಿಚಾರದಲ್ಲಿ ಅವರು ಮಾಡಿದ ಸಾಧನೆ ಸ್ಮರಿಸಲೇಬೇಕು ಅವರನ್ನು ಇಡೀ ರಾಜ್ಯದ ದಲಿತ ಸಮುದಾಯ ಬೆಂಬಲಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಪರಶುರಾಮ ಕಾಂಬಳೆ, ಸಂತೋಷ ಹರನಾಳ, ಮಲ್ಲು ಸಾವಳಸಂಗ, ರಮೇಶ ನಡುವಿನಕೇರಿ, ಮಲ್ಲು ಕೂಚಬಾಳ, ತಿರುಪತಿ ಬಂಡ್ಡಿವಡ್ಡರ, ರಾಕೇಶ್ ಕಾಂಬಳೆ ಸೇರಿದಂತೆ ಹಲವರಿದ್ದರು.