ಹೇಮರಡ್ಡಿ ಮಲ್ಲಮ್ಮ ಮಹಿಳಾ ಸಂಘದವರಿಂದ ಶ್ರೀ ವೇಮನ ಜನ್ಮ ದಿನಾಚರಣೆ

Must Read

ಸವದತ್ತಿ: ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಮಹಿಳಾ ಸಂಘದವರು ವೇಮನ ಜನ್ಮದಿನೋತ್ಸವ ಎನ್.ಎಸ್.ಪಟ್ಟಣಶೆಟ್ಟಿಯವರ ನಿವಾಸದಲ್ಲಿ ಅರ್ಥಪೂರ್ಣವಾಗಿ ಆಚರಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಚಾರ್ಯರಾದ ಎಸ್.ಬಿ.ಜಗಾಪೂರ ವೇಮನನ ಸಾಹಿತ್ಯದ ಕುರಿತು ಮತ್ತು ವೇಮನನ ಜೀವನ ವೃತ್ತಾಂತವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಲಕ್ಷ್ಮೀ ಚಂದ್ರರಡ್ಡಿ ಹೂಲಿ ಸದಸ್ಯರು ಶ್ರೀ ರೇಣುಕಾ ಯಲ್ಲಮ್ಮ ಆಡಳಿತ ಸಮಿತಿ, ಹೆಚ್.ಆರ್.ಪೆಟ್ಲೂರ ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸವದತ್ತಿ ಹಾಗೂ ಕುಮಾರ ಭೀಮರಡ್ಡಿ ರಾಜೀವ ಯರಬಂಡಿ (ಐ.ಐ.ಟಿ)ಯವರಿಗೆ ಗೌರವ ಸನ್ಮಾನ ಜರುಗಿತು.

ಸನ್ಮಾನಪರ ನುಡಿಗಳನ್ನಾಡಿದ ಸವದತ್ತಿ ತಾಲೂಕಾ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಹೆಚ್.ಆರ್.ಪೆಟ್ಲೂರ “ವೇಮನನ ಸಾಹಿತ್ಯ ಕನ್ನಡದಲ್ಲಿ ತರ್ಜುಮೆ ಮಾಡಿದ ಎಸ್.ಆರ್.ಪಾಟೀಲ ಅವರನ್ನು ನೆನೆಯುತ್ತಾ ತೆಲುಗು ಭಾಷೆ ಕಂಡ ಅತ್ಯಂತ ಶ್ರೇಷ್ಠ ಕವಿ ಎಂದು ಬಣ್ಣಿಸಿದರು. ಸುಮಾರು 15000 ವಚನಗಳನ್ನು ಬರೆದ ವೇಮನ ದಿಗಂಬರನಾಗಿ ಲೋಕ ಬೆಳಗಿದರು”.ಎಂದು ವೇಮನರ ಹಿರಿಮೆಯನ್ನು ಕೊಂಡಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವನಗೌಡ ಪಾಟೀಲ, “ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಸಂಘಟನೆ ಇಂದು ಅರ್ಥ ಪೂರ್ಣ ಕಾರ್ಯಕ್ರಮ ಸಂಘಟಿಸಿದ್ದು ಇದೊಂದು ಮಾದರಿ ಕಾರ್ಯಕ್ರಮ ಎಂದು ಸಮಾರೋಪ ನುಡಿಗಳನ್ನಾಡಿದರು.

ಕುಮಾರಿ ದಿವ್ಯಾ ಸಂಜು ಜಾಲಿಕೊಪ್ಪ ಕಾರ್ಯಕ್ರಮ ನಿರೂಪಿಸಿದರು.

ಕುಮಾರಿ ಮೇಘನಾ ಹನಮಂತ ಪೆಟ್ಲೂರ ಮತ್ತು ಕುಮಾರಿ ಜೀವಿಕಾ ಶ್ರೀನಿವಾಸ ಉದಗಟ್ಟಿ ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾರ್ಥನಾ ಗೀತೆ ಹೇಳಿದರು.

ನಗರದ ರಡ್ಡಿ ಸಮುದಾಯದ ಎಲ್ಲ ಕುಟುಂಬಗಳ ಸದಸ್ಯರು ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಶ್ರೀಮತಿ ರೇಖಾ ಆರ್.ಮಾಡೊಳ್ಳಿ ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group