ಗುಣಾತ್ಮಕ ಶಿಕ್ಷಣದಲ್ಲಿ ಸಮುದಾಯದ ಪಾತ್ರ ಬಹುಮುಖ್ಯ – ಮೈನುದ್ಧೀನ ಕೊಳಚಿ

Must Read

ಮುನವಳ್ಳಿ : “ಸಂವಿದಾನದ ಶಿಕ್ಷಣ ಹಕ್ಕು ಕಾಯಿದೆ ಆಶಯದಂತೆ ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವ ಮೂಲಕ ಶಾಲಾ ಶಿಕ್ಷಣದ ಸಾರ್ವತ್ರೀಕರಣ ಬೇಡಿಕೆ ಸಾಕಾರಗೊಳ್ಳಬೇಕಾದರೆ ಸಮುದಾಯದ ಪಾಲ್ಗೊಳ್ಳುವಿಕೆ ನಿರ್ಣಾಯಕ ಪಾತ್ರವಹಿಸುತ್ತದೆ. ಇಂದು ಸರಕಾರಿ ಶಾಲೆಗಳಲ್ಲಿ ಎಸ್.ಡಿ.ಎಂ.ಸಿಗಳು ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಶಿಕ್ಷಣದ ಸಬಲೀಕರಣದಲ್ಲಿ ಪ್ರಮಖ ಪಾತ್ರವಹಿಸುತ್ತಿವೆ”ಎಂದು ನೋಡಲ್ ಅಧಿಕಾರಿ ಮೈನುದ್ಧೀನ ಕೊಳಚಿ ಹೇಳಿದರು.

ಅವರು ಪಟ್ಟಣದ ಗಾಂಧಿನಗರದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಹಾಗೂ ಪೋಷಕರ ಸಭೆ ಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ರವಿ ತುಕ್ಕೋಜಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಗುರುಮಾತೆ ಎಚ್.ಎಸ್.ಮನಿಯಾರ, ನೋಡಲ್ ಅಧಿಕಾರಿ ಮೈನುದ್ದೀನ ಕೊಳಚಿ, ಹೇಮಾವತಿ ಹೊನ್ನಳ್ಳಿ, ವೀರಣ್ಣ ಕೊಳಕಿ, ಸರೋಜಿನಿ ವಿಶ್ವಜ್ಞ, ರಜನಿ ನಾಯ್ಕ, ಮಂಗಲಾ ಉಪ್ಪಾರಗುರು, ರೇಖಾ ಶಾನಭೋಗ, ಪಂಚಪ್ಪ ಚುಂಚನೂರ, ಆಯಿಷಾ ಬಂಡ್ರೋಳ್ಳಿ, ಪಂಚಪ್ಪ ಚುಂಚನೂರ ಸೇರಿದಂತೆ ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group