ಲಂಚ ಪಡೆದರಾ ಭಾಲ್ಕಿ ಸಿಪಿಐ ರಾಘವೇಂದ್ರ?

Must Read

ಬೀದರ – ಅಂಗಡಿಯೊಂದರಲ್ಲಿ ಭಾಲ್ಕಿ ನಗರದ ಸಿಪಿಐ ರಾಘವೇಂದ್ರ ಅವರು ವ್ಯಕ್ತಿಯೊಬ್ಬನಿಂದ ಲಂಚ ಸ್ವೀಕರಿಸಿದ್ದಾರೆಂಬ ವೀಡಿಯೋ ವೈರಲ್ ಆಗಿದ್ದು ಕುತೂಹಲ ಸೃಷ್ಟಿಸಿದೆ.

ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಸರ್ಕಲ್ ಇನ್ಸ್ ಪೆಕ್ಟರ್ ರಾಘವೇಂದ್ರ ಅವರು ಅಂಗಡಿಯೊಂದರಲ್ಲಿ ವ್ಯಕ್ತಿಯಿಂದ ಲಂಚ ಪಡೆಯುತ್ತಿರುವ ದೃಶ್ಯವಿದೆ. ಅದು ಅನೇಕ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

ಒಂದು ಊಹೆಯ ಪ್ರಕಾರ ಅದು ಅಂಗಡಿಯಾದ್ದರಿಂದ ಸಿಪಿಐ ವ್ಯವಹಾರ ಮಾಡಿ ತಮ್ಮದೇ ಹಣವನ್ನು ಮರಳಿ ಪಡೆಯುತ್ತಿರಬಹುದು ಎಂದರೆ, ತಮ್ಮ ಹಣ ಪಡೆಯಲು ಕದ್ದು ಮುಚ್ಚಿ ಯಾಕೆ ಪಡೆಯಬೇಕು, ಅದನ್ನು ಯಾರೋ ವೀಡಿಯೋ ಮಾಡುವ ಪ್ರಮೇಯ ಯಾಕೆ ಬರುತ್ತದೆ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

ಒಟ್ಟಾರೆಯಾಗಿ ಸಿಪಿಐ ರಾಘವೇಂದ್ರ ಲಂಚ ಪಡೆಯುತ್ತಿರುವರು ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅವರು ಯಾವ ವಿಚಾರಕ್ಕೆ ಹಣ ಪಡೆಯುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಆದರೆ ಸಿಪಿಐ ರಾಘವೇಂದ್ರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಕೂಡಲೇ ವಿಡಿಯೋ ಬಗ್ಗೆ ತನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ. ಸತ್ಯಾಸತ್ಯತೆ ಹೊರಬರಬೇಕಿದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group