ಹೋರಾಟಗಾರರ ಸಾಧನೆ ಯುವಕರಿಗೆ ಸ್ಫೂರ್ತಿಯಾಗಬೇಕು – ಡಾ.ಭೇರ್ಯ ರಾಮಕುಮಾರ್

Must Read

ರಾಷ್ಟ್ರದ ಇಂದಿನ ಯುವಜನತೆಗೆ ಹಿರಿಯ ಸಾಧಕರಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರಬೋಸ್, ಚಂದ್ರಶೇಖರ್ ಆಜಾದ್ , ಭಗತ್ ಸಿಂಗ್ ಅವರ ಜೀವನ ಹಾಗೂ ಸಾಧನೆಗಳು ದಾರಿದೀಪವಾಗಬೇಕು ಎಂದು ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.

ಅವರು ನಿನ್ನೆ ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ಭಗತ್ ಸಿಂಗ್ ಯೂತ್ ಫೌಂಡೇಶನ್ ವತಿಯಿಂದ ನಡೆದ ನೇತಾಜಿ ಸುಭಾಷ್ ಚಂದ್ರಬೋಸ್ ಅವರ ೧೨೫ ನೇ ಜನ್ಮದಿನಾಚರಣೆ ಕಾರ್ಯಕ್ರಮ ದಲ್ಲಿ ಮಾತನಾಡುತ್ತಿದ್ದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಕ್ರಾಂತಿಯ ಮೂಲಕ‌ ಮಾತ್ರ ರಾಷ್ಟಕ್ಕೆ ಸ್ವಾತಂತ್ರ್ಯ ಬರಲು ಸಾಧ್ಯ ಎಂದು ನಂಬಿದ್ದರು. ಅರವಿಂದೊ ಅವರ ಪ್ರಭಾವಕ್ಕೆ ಒಳಗಾಗಿ ಐಸಿಎಸ್ ಪದವಿ ಗಳಿಸಿ , ತಾವು ಗಳಿಸಿದ್ದ ಕಲ್ಕತ್ತಾದ ಆಯುಕ್ತರ ಸ್ಥಾನವನ್ನು ತ್ಯಜಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಜೈಲುವಾಸವನ್ನೂ ಅನುಭವಿಸಿದರು. ಶಾಂತಿವಾದಿಗಳಾಗಿದ್ದ ಗಾಂಧೀಜಿಯವರ ನೀತಿಯನ್ನು ವಿರೋಧಿಸಿ, ಉಗ್ರಹೋರಾಟದಿಂದ ಮಾತ್ರ ಸ್ವಾತಂತ್ರ್ಯ ಗಳಿಸಲು ಸಾಧ್ಯ ಎಂದು ಯುವಕರನ್ನು ಸಂಘಟಿಸಿ, ಹೋರಾಟ ಆರಂಬಿಸದರು. ಪರಿಣಾಮವಾಗಿ ಅಂಡಮಾನ್ ಜೈಲಿನಲ್ಲಿ ಬಂಧಿತರಾದರು. ತೀವ್ರ ಅನಾರೋಗ್ಯಕ್ಕೆ ಒಳಗಾದರು.ಅಲ್ಲಿಂದ ತಪ್ಪಿಸಿಕೊಂಡು ವಿದೇಶಗಳಲ್ಲಿ ಭಾರತದಲ್ಲಿ ಬ್ರಿಟೀಷರ ದುರಾಡಳಿತದ ವಿರುದ್ದ ಜಾಗೃತಿ ಮೂಡಿಸಿದರು. ಸಾವಿರಾರು ಯುವಕರ ಸ್ವಯಂ ಸೇವಕ ಪಡೆ ನಿರ್ಮಿಸಿದರು,. ಆ ಮೂಲಕ ಬ್ರಿಟೀಷರ ವಿರುದ್ದ ಜಾಗತಿಕ ಅರಿವು ಮೂಡಿಸುವಲ್ಲಿ ಯಶಸ್ವಿಯಾದರು. ಭಾರತಕ್ಕೆ ಸ್ವಾತಂತ್ರ್ಯ ಬರುವಲ್ಲಿ ಸುಭಾಷರ ಪಾತ್ರವೂ ಗಣನೀಯವಾಗಿದೆ ಎಂದವರು ವಿವರಿಸಿದರು.

ಸುಭಾಷ್ ಚಂದ್ರಬೋಸರ ಜೀವನ ಹಾಗೂ ಹೋರಾಟದ ವಿವಿಧ ಮಜಲುಗಳನ್ನು ಫೌಂಡೇಶನ್ ಕಾರ್ಯದರ್ಶಿ ರಕ್ಷಿತ್ ವಿವರಿಸಿದರು. ಸಂಸ್ಥೆಯ ಪದಾಧಿಕಾರಿಗಳಾದ ಸ್ವಾಮಿಗೌಡ, ಚೆಲ್ವನ್, ಕೃಷ್ಣಯ್ಯ ಸಭೆಯಲ್ಲಿ ಮಾತನಾಡಿ ಸುಭಾಷ್ ಚಂದ್ರಬೋಸರ ಹೋರಾಟದ ವಿವಿಧ ಮಜಲುಗಳನ್ನು ವಿವರಿಸಿದರು.

ಕರೋನಾ ದ ಹಿನ್ನೆಲೆಯಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರದ ಮುಂದೆ ಮೇಣದ ಬತ್ತಿಗಳನ್ನು ಹಚ್ಚುವ ಮೂಲಕ ಕಾರ್ಯಕ್ರಮ ನಡೆಸಲಾಯಿತು.ಫೌಂಡೇಶನ್ ನ ತೇಜು , ಸಿ.ಶಿವರಾಜ್,ಸುದೀಪ್, ಸೀತಾರಾಮ್, ರಾಕೇಶ್, ಗಿರೀಶ್, ಬಸವರಾಜು, ಪ್ರಮೋದ್, ಸುದೀಪ್, ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕೃಷ್ಣಯ್ಯ ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group