ಬೆಳಗಾವಿ – ಸೋಮವಾರ ದಿ. 24 ರಂದು ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಸರಕಾರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ‘ಸಮಗ್ರ ಶಿಕ್ಷಣ- ಕರ್ನಾಟಕ ‘ಮತ್ತು ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ನಾಲ್ಕು ಮತ್ತು ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಗಣಿತ ವಿಷಯಾಧಾರಿತ ಪ್ರತಿ ಮಗುವಿನಲ್ಲಿ ಸ್ಪಷ್ಟವಾಗಿ ಕನ್ನಡವನ್ನು ಓದಲು, ಗುಣಿತಾಕ್ಷರ ಬಳಸಿ ತಪ್ಪದೇ ಬರೆಯಲು, ಗದ್ಯ-ಪದ್ಯ, ಕಥೆ ಆಧಾರಿತ ವಿವಿಧ ಚಟುವಟಿಕೆಗಳನ್ನು ಒಳಗೊಂಡಿರುವ ಕನ್ನಡ ಮತ್ತು ಅಂಕಿಗಳಿಂದ ಆರಂಭಿಸಿ ಸರಳ ಲೆಕ್ಕಾಚಾರ ಮಾಡುವ ಹಂತದವರೆಗೆ ಪ್ರತಿ ಮಗುವನ್ನು ಆ ಮಗುವಿನ ಪ್ರಸ್ತುತ ಕಲಿಕಾ ಮಟ್ಟವನ್ನು ಆಧರಿಸಿ ಅಭ್ಯಾಸ ಪುಸ್ತಕಗಳನ್ನು ನೀಡಿ 60 ದಿನಗಳಲ್ಲಿ ಸರಳ ಕನ್ನಡ ಮತ್ತು ಸರಳ ಗಣಿತ ದಲ್ಲಿ ಪ್ರಭುತ್ವ ಸಾಧಿಸುವ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ‘ಓದು ಕರ್ನಾಟಕ ‘ಕಾರ್ಯಕ್ರಮವನ್ನು ಒಳ್ಳೆಯ ರೀತಿಯಿಂದ ಅನುಷ್ಠಾನ ಮಾಡಲು ಪ್ರಯತ್ನಿಸುವಲ್ಲಿ ಎಲ್ಲ ಮಕ್ಕಳು ಕಾಳಜಿ ಪೂರ್ವಕವಾಗಿ ಇದರಲ್ಲಿ ಪಾಲ್ಗೊಳ್ಳಬೇಕೆಂದು 4 ಮತ್ತು 5ನೇ ತರಗತಿಯ ಶಿಕ್ಷಕಿಯರಾದ ಶ್ರೀಮತಿ ಎಸ್ ಎಸ್ ಸತ್ಯನಾಯಿಕ ಮತ್ತು ಶ್ರೀಮತಿ ಎಂ ಪಿ ಹೊಟ್ಟಿನವರ ಮಕ್ಕಳಿಗೆ ಕಾರ್ಯಕ್ರಮದ ಕುರಿತು ವಿವರಣೆ ನೀಡಿದರು.
ಇದೇ ಸಂದರ್ಭದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ ಆಚರಿಸಲಾಯಿತು.
ನೇತಾಜಿ ಶಿಸ್ತು, ನಿಷ್ಠೆ ಮತ್ತು ಸ್ವಾಭಿಮಾನಕ್ಕೆ ಹೆಸರಾಗಿದ್ದರು. ಅಂತಹ ಮಹಾನ್ ವ್ಯಕ್ತಿಗಳನ್ನು ಸದಾಕಾಲ ನೆನೆಯುವಂತಾಗಲು ದೆಹಲಿಯಲ್ಲಿ ಅವರ ಭವ್ಯವಾದ ಪ್ರತಿಮೆಯನ್ನು ಅನಾವರಣ ಮಾಡಲಾಗುತ್ತಿದೆ.ಇದು ನಮ್ಮ ಭಾರತದ ಹೆಮ್ಮೆ ಎಂದು ಶಿಕ್ಷಕರಾದ ಶಿವಾನಂದ ತಲ್ಲೂರ ಮಕ್ಕಳಿಗೆ ನೇತಾಜಿಯವರ ಜೀವನದ ಕುರಿತು ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕಿ ಕೆ.ಎಫ್. ಭಾವಿಹಾಳ ಶಿಕ್ಷಕಿಯರಾದ ಎಸ್ ಎಸ್ ಭೂಸಣ್ಣವರ ಸೇರಿದಂತೆ ಶಾಲಾ ಸಿಬ್ಬಂದಿ ಮತ್ತು ಮಕ್ಕಳು ಭಾಗವಹಿಸಿದ್ದರು. ಆರಂಭದಲ್ಲಿ ಪ್ರತೀಕ ಡವರಿ ಸ್ವಾಗತಿಸಿದರು. ಕೊನೆಯಲ್ಲಿ ಮಂಥನ ಬೆಳಗಾಂವಕರ ವಂದಿಸಿದರು.