ಬೀದರ: ಗಣರಾಜ್ಯೋತ್ಸವಕ್ಕೆ ಇಬ್ಬರೂ ಸಚಿವರು ಗೈರು, ಜನರಲ್ಲಿ ಅಸಮಾಧಾನ

Must Read

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಜಿಲ್ಲೆಯ ಇಬ್ಬರೂ ಸಚಿವರು 73ನೇ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಸಂಭ್ರಮಕ್ಕೆ ಬರದೆ ಬೀದರ ಜನತೆಗೆ ಅವಮಾನಿಸಿದ ಪ್ರಸಂಗ ನಡೆಯಿತು.

ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ನೂತನ ಬೀದರ್ ಜಿಲ್ಲೆ ಉಸ್ತುವಾರಿ ಸಚಿವ ಶಂಕರ್ ಬಿ ಪಾಟೀಲ ಮುನೇನಕೊಪ್ಪ ಈ ಇಬ್ಬರೂ ಸಚಿವರು ಗಣರಾಜ್ಯೋತ್ಸವ ಸಮಾರಂಭಕ್ಕೆ ಆಗಮಿಸದೆ ದೂರ ಉಳಿದಿದ್ದದ ಜನತೆಯಲ್ಲಿ ಅಸಮಾಧಾನ ಮನೆ ಮಾಡಿದೆ.

ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಆಗುತ್ತಿರುವ ರಾಜಕೀಯ ಬದಲಾವಣೆಗಳನ್ನು ಗಮನಿಸಿದ ಮುಖ್ಯ ಮಂತ್ರಿಗಳು ಲಿಂಗಾಯತರ ಪ್ರಭಾವವನ್ನು ತಮ್ಮಕಡೆಗೆ ಸಳೆಯಲು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ ಅವರಿಗೆ ಯಾದಗಿರ ಜಿಲ್ಲಾ ಉಸ್ತುವಾರಿ ವಹಿಸಿದ್ದರು. ಬೀದರ ಜಿಲ್ಲೆಗೆ ಲಿಂಗಾಯತ ಸಚಿವರಾದ ಶಂಕರ ಬಿ ಪಾಟೀಲ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಿದ್ದರಿಂದ ಬೀದರ ಜಿಲ್ಲೆಯ ಭಾರತೀಯ ಜನತಾ ಪಕ್ಷದ ನಾಯಕರಲ್ಲಿ ಅಸಮಾಧಾನ ವಾಗಿರುವದು ಕಂಡುಬಂದಿತ್ತು. ಜಿಲ್ಲೆಯಲ್ಲಿ ನಡೆಯುತ್ತಿರುವ 73 ನೇ ಗಣರಾಜೋತ್ಸವದ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಾದ ಭಗವಂತ ಖೂಬಾ ಅವರನ್ನು ಒಳಗೊಂಡು ಭಾರತೀಯ ಜನತಾ ಪಕ್ಷದ ನಾಯಕರುಗಳು ಭಾಗವಹಿಸದೆ ತಮ್ಮ ಅಸಮಾಧಾನ ವನ್ನು ಹೊರಹಾಕಿದರು. ಆದರೆ ತಮ್ಮ ಸ್ವಾರ್ಥ ರಾಜಕೀಯಕ್ಕೋಸ್ಕರ ಜಿಲ್ಲೆಯಲ್ಲಿ ಗಣರಾಜೋತ್ಸವದ ಸಂಭ್ರಮ ಕಡೆಗಣಿಸಿ ರುವ ಭಾರತೀಯ ಜನತಾ ಪಕ್ಷದ ನಾಯಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವನ್ನು ಹೊರ ಹಾಕಿದ್ದು ಜಿಲ್ಲೆಯ ಜನರಿಗೆ ಈ ನಾಯಕರು ಅವಮಾನ ಮಾಡಿದ್ದಾರೆ ಎಂಬ ಭಾವನೆ ಎಲ್ಲರಲ್ಲಿ ಕಂಡುಬಂದಿದೆ. ಮುಂಬರುವ ದಿನಗಳಲ್ಲಿ ಈ ಮಡುಗಟ್ಟಿದ ಅಸಮಾಧಾನ ಯಾವ ರೀತಿಯ ಪರಿಣಾಮ ಬೀರುತ್ತದೆಯೆಂಬುದನ್ನು ಕಾದು ನೋಡಬೇಕಾಗಿದೆ.

ಜಿಲ್ಲಾಧಿಕಾರಿ ರಾಮಚಂದ್ರ ಆರ್. ಧ್ವಜಾರೋಹಣ:

ಈ ಮುಂಚೆ ನಗರದ DAR ಮೈದಾನದಲ್ಲಿ ಜಿಲ್ಲಾ ಅಧಿಕಾರಿ ರಾಮಚಂದ್ರ ಆರ್. ಧ್ವಜಾರೋಹಣ ನೆರವೇರಿಸಿದರು. ಅವರ ಜೊತೆ ಎಸ್ಪಿ ಡಿ ಎಲ್ ನಾಗೇಶ್ ಸಾಥ್ ನೀಡಿದರು.

ಕಾರ್ಯಕ್ರಮದಲ್ಲಿ ಉತ್ತರ ಕ್ಷೇತ್ರದ ಶಾಸಕ ರಹಿಂ ಖಾನ್ , ದಕ್ಷಿಣ ಕ್ಷೇತ್ರದ ಬಂಡೆಪ್ಪ ಖಾಶೆಂಪುರ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group