ಗಣರಾಜ್ಯೋತ್ಸವ ಆಚರಣೆ ಹೇಗೆ?

Must Read

ಗಣರಾಜ್ಯೋತ್ಸವ ದ ಶುಭಾಶಯಗಳು.

ಆಚರಣೆ ಹೇಗಿರಬೇಕು? ನಾವೆಷ್ಟೇ ದೇಶದ ಪರ, ಧರ್ಮದ ಪರವಿದ್ದರೂ ಪ್ರಜಾಪ್ರಭುತ್ವದಲ್ಲಿ ಕೇವಲ ಹಣ,ಅಧಿಕಾರಕ್ಕೆ ಮಣೆ ಹಾಕುವವರದ್ದೇ ರಾಜಕೀಯ. ಗಣರಾಜ್ಯೋತ್ಸವ ದಲ್ಲಿ ವಿದೇಶಿಗಳನ್ನು ಅತಿಥಿಗಳಾಗಿ ಕರೆದು ದೇಶದ ಸ್ವಚ್ಚತೆ ಹೊರಗಿನಿಂದ ನಡೆಸಲು ಸಾಕಷ್ಟು ಹಣ ಬಳಕೆಯಾಗುತ್ತದೆ.

ಮುಂ ದಿನ ದಿನ ಯಥಾ ಪ್ರಕಾರ ಅದೇ ರಾಜಕೀಯ ಜಗಳ, ವಿರೋಧ, ಶುದ್ದವಿಲ್ಲದ ಕಾರ್ಯಕ್ರಮ ದಲ್ಲಿ ಮೈ ಮರೆಯುವವರೆ ಹೆಚ್ಚು. ಗಣ ರಾಜ್ಯೋತ್ಸವ ರಾಜ್ಯಗಳನ್ನು ಸ್ವಚ್ಚಗೊಳಿಸುವ ಸ್ವತಂತ್ರಗೊಳಿಸಿ ಅವರವರ ಮೂಲ ಶಿಕ್ಷಣವನ್ನು ಧರ್ಮ, ಸಂಸ್ಕೃತಿ, ಭಾಷೆಯ ಮೂಲಕ ಶುದ್ದಿಗೊಳಿಸಿಕೊಂಡು ತಾನೂ ಬದುಕಿ ಇತರರನ್ನೂ ಬದುಕಲು ಬಿಡುವ ಉದ್ದೇಶದಿಂದ ಆಚರಿಸಬೇಕಿತ್ತು. ಈಗಿನ ಪರಿಸ್ಥಿತಿಯಲ್ಲಿ ಇದನ್ನು ಯಾವ ರಾಜ್ಯದಲ್ಲಿ ಕಾಣುತ್ತಿದ್ದೇವೆ?

ಒಟ್ಟಾರೆ ಹೇಳೋದಾದರೆ ಉತ್ಸವಗಳಿಂದ ಮಾನವನಿಗೆ ಜೀವನೋತ್ಸಾಹ ಹೆಚ್ಚಾಗಬೇಕಷ್ಟೆ. ಹಣದ ದುಂದುವೆಚ್ಚ ಬಿಟ್ಟು ಸರಳವಾಗಿ ಆಚರಿಸಿ ಜನರನ್ನು ಒಗ್ಗೂಡಿಸುವ ಕಾರ್ಯ ವರ್ಷವಿಡೀ ನಡೆಯಲು ಶಿಕ್ಷಣದಲ್ಲಿಯೇ ಉತ್ತಮ ವಿಚಾರ ಅಳವಡಿಸಿ,ಉತ್ತಮ ಶಿಕ್ಷಕರನ್ನು ನೇಮಿಸಿ ಶಿಕ್ಷಣ ಸ್ವಚ್ಚಗೊಳಿಸಿದರೆ ಸಮಸ್ಯೆಗಳಿಗೆ ಕಾರಣದ ಜೊತೆಗೆ ಪರಿಹಾರವೂ ಅವರವರೊಳಗೇ ಕಂಡುಕೊಳ್ಳಲು ಸಾಧ್ಯ.ಇದಕ್ಕೆ ಸರ್ಕಾರದ ಅನುಮತಿ ಬೇಡ, ಹಣ ಬೇಡವಲ್ಲವೆ ಆತ್ಮಾವಲೋಕನ ಪ್ರಜಾಪ್ರಭುತ್ವದಲ್ಲಿ ಅಗತ್ಯವಿದೆ. ಗಣರಾಜನೆಂದು ಕರೆಯುವ ಗಣಪತಿಗೆ ಯಾವುದೇ ಜಾತಿ ಭೇದಗಳಿಲ್ಲ. ಆದರೆ ದೇಶದಲ್ಲಿ ಗಣರಾಜ್ಯೋತ್ಸವ ದಲ್ಲಿ ಇದೆ. ಇದೇ ಭಾರತೀಯರ ದೊಡ್ಡ ಸಮಸ್ಯೆಗೆ ಕಾರಣವೆಂದರೆ ತಪ್ಪಿಲ್ಲ.

ಯಾವುದೇ ಸರ್ಕಾರ ಬಂದರೂ ಪ್ರಜೆಗಳ ಸಹಕಾರ ಸರಿಯಿಲ್ಲವಾದರೆ ವ್ಯರ್ಥ. ಗಣಪತಿಯನ್ನು ಎಷ್ಟೇ ಪೂಜಿಸಿದರೂ ನಮ್ಮ ಗಣಗಳಲ್ಲಿ ಅಜ್ಞಾನವಿದ್ದರೆ ವಿಘ್ನೇಶ್ವರನ ಮೊರೆ ಹೋಗಲೇಬೇಕಲ್ಲವೆ. ದೇಶ ಬೇರೆ ದೇವರು ಬೇರೆ ಎನ್ನುವ ಅಜ್ಞಾನಕ್ಕೆ ನಾವೆಲ್ಲರೂ ಬೇರೆ ಬೇರೆಯಾಗಿರುವುದು. ದೇಶದೊಳಗೆ ಇದ್ದೂ ವಿದೇಶಿಗರಂತೆ ಬದುಕಿದರೆ ಆಗೋದೇ ಹೀಗೆ. ಸತ್ಯ ತಿಳಿಯಲು ಸಾಮಾನ್ಯ ಜ್ಞಾನದ ಅಗತ್ಯವಿದೆ. ಏನೇ ಬರಲಿ ಒಗ್ಗಟ್ಟು ಇರಲಿ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

Latest News

ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ವ್ಯಕ್ತಿ ದಾರುಣ ಸಾವು

ಬೀದರ - ಮಕರ ಸಂಕ್ರಾಂತಿ ನಿಮಿತ್ತ ಗಾಳಿಪಟ ಹಾರಿಸುತ್ತಿರುವ ಸಂದರ್ಭದಲ್ಲಿ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಯುವಕ ಸಂಜಿಕುಮಾರ ಎಂಬುವವರ ಕುತ್ತಿಗೆಗೆ ಗಾಳಿ ಪಟದ ಮಾಂಜಾ(ಚೀನಿ...

More Articles Like This

error: Content is protected !!
Join WhatsApp Group