ಮತ್ತೊಂದು ವೈರಸ್ ಆಘಾತ: ಕೊರೋನಾದ ಅಪ್ಪನಂತೆ ನಿಯೋಕೋವ್ !

Must Read

ಹೊಸದಿಲ್ಲಿ – ಕೊರೋನಾದ ಘಾತಕ ಹೊಡೆತದಿಂದ ಜಗತ್ತು ಇನ್ನೂ ಚೇತರಿಸಿಕೊಂಡಿಲ್ಲ ಆಗಲೇ ಮತ್ತೊಂದು ವೈರಸ್ ದಾಳಿ ಮಾಡಲು ಸಜ್ಜಾಗಿದ್ದು ಯಾವ ಲಸಿಕೆಗೂ ಜಗ್ಗದ ನಿಯೋಕೋವ್ ಎಂಬ ವೈರಸ್ ಮರಣ ಮೃದಂಗ ಬಾರಿಸಲಿದೆ ಎಂದು ಹೇಳಲಾಗುತ್ತಿದೆ.

ಚೀನಾದ ವುಹಾನ್ ವೈರಸ್ ಸಂಶೋಧನಾಲಯದಿಂದ ಈ ಆಘಾತಕಾರಿ ಸಂಗತಿ ಹೊರಬಿದ್ದಿದ್ದು ಕೋವಿಡ್ ಗಿಂತ ಭೀಕರವಾಗಿ ಹರಡುತ್ತದೆ ಹಾಗೂ ಶೇ.೩೦ ರಷ್ಟು ಸಾವಿನ ಪ್ರಮಾಣ ಉಂಟುಮಾಡಲಿದೆಯೆನ್ನಲಾಗಿದೆ.

ನಿಯೋಕೋವ್ ಭವಿಷ್ಯದಲ್ಲಿ ಜಗತ್ತಿಗೆ ತೀವ್ರ ಮಾರಕವಾಗಿ ಪರಿಣಮಿಸಲಿದೆ. ಅತಿ ವೇಗವಾಗಿ ಹಬ್ಬುವ ಈ ವೈರಸ್ ಮರಣ ಪ್ರಮಾಣವನ್ನೂ ಹೆಚ್ಚಿಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಇನ್ನೂ ಆಘಾತಕಾರಿಯೆಂದರೆ ಈ ನಿಯೋಕೋವ್ ವೈರಸ್ ಗೆ ಚಿಕಿತ್ಸೆಯಾಗಲಿ, ಪೂರ್ವಭಾವಿ ಲಸಿಕೆಯಾಗಲಿ ಇಲ್ಲವೆನ್ನಲಾಗುತ್ತಿದೆ. ಇದು ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದೆ.

ಇನ್ನೊಂದು ಮೂಲದ ಪ್ರಕಾರ ನಿಯೋಕೋವ್ ಎಂಬ ವೈರಸ್ ಈಗಾಗಲೇ ಮಧ್ಯಪ್ರಾಚ್ಯದಲ್ಲಿ ಬಂದು ಹೋಗಿದೆ ಆದರೆ ಮನುಷ್ಯರಿಗೆ ಇದು ತಗುಲದೆ ಕೇವಲ ಬಾವಲಿಗಳಲ್ಲಿ ಮಾತ್ರ ಇತ್ತು ಎನ್ನ ಲಾಗುತ್ತಿದೆ.

೨೦೧೨ ರಿಂದ ೨೦೧೫ ರ ವರೆಗೆ ಉಸಿರಾಟದ ತೊಂದರೆಯು ಮಧ್ಯಪ್ರಾಚ್ಯದಲ್ಲಿ ಹೆಚ್ಚಾದ ಸಂದರ್ಭದಲ್ಲಿ ಕಂಡು ಹಿಡಿಯಲಾದ ನಿಯೋಕೋವ್ ಈಗ ಮತ್ತಷ್ಟು ಶಕ್ತಿಶಾಲಿಯಾಗಿ ಹೊರಹೊಮ್ಮಿದ್ದು ಜನರು ತುಂಬ ಎಚ್ಚರಿಕೆಯಿಂದ ಇರಬೇಕು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group