Homeಸುದ್ದಿಗಳುಡಾ. ಕವಿತಾ ಕುಸಗಲ್ಲ ಅವರ ಎರಡು ಕೃತಿಗಳ ಲೋಕಾರ್ಪಣೆ

ಡಾ. ಕವಿತಾ ಕುಸಗಲ್ಲ ಅವರ ಎರಡು ಕೃತಿಗಳ ಲೋಕಾರ್ಪಣೆ

ಬೆಳಗಾವಿ – ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಇವರಿಂದ ಡಾ ಕವಿತಾ ಕುಸಗಲ್ಲ ಅವರ ಬೆಳಕಿನ ಬಿತ್ತನೆ ಹಾಗೂ Charles shobharaj and other stories ಕೃತಿಗಳ ಲೋಕಾಪ೯ಣೆ ಕಾಯ೯ಕ್ರಮದ ಅಧ್ಯಕ್ಷತೆಯನ್ನು ಡಾ ಹೇಮಾವತಿ ಸೊನೊಳ್ಳಿ ಅಧ್ಯಕ್ಷರು ಬೆ ಜಿ ಲೇ ಸಂಘ ಅವರು ವಹಿಸಲಿದ್ದಾರೆ.

ಕೃತಿ ಲೋಕಾಪ೯ಣೆಯನ್ನು ಪ್ರೋ.ಎಂ ರಾಮಚಂದ್ರ ಗೌಡ, ಉಪಕುಲಪತಿಗಳು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ ಅವರು ಮಾಡಲಿದ್ದು ಅತಿಥಿಗಳಾಗಿ ಡಾ ಸರಜೂ ಕಾಟ್ಕರ, ಹಿರಿಯಪತ್ರಕತ೯ರು, ಖ್ಯಾತ ಸಾಹಿತಿಗಳು ಆಗಮಿಸಲಿದ್ದಾರೆ.

ಕೃತಿ ಪರಿಚಯವನ್ನು ಡಾ.ಗುರುಪಾದ ಮರಿಗುದ್ದಿ ‘ಬೆಳಕಿನ ಬಿತ್ತನೆ’ ಕುರಿತು ನಿವೃತ್ತ ಪ್ರಾಧ್ಯಾಪಕರು ಖ್ಯಾತ ಸಾಹಿತಿಗಳು ಮಾಡಲಿದ್ದಾರೆ.’ ಚಾಲ್ಸ೯ಶೋಭರಾಜ ಮತ್ತಿತರ ಕಥೆಗಳು’ ಕುರಿತು ಕೃತಿ ಪರಿಚಯವನ್ನು ಡಾ. ಗುರುದೇವಿ ಹುಲ್ಲೆಪ್ಪನ್ನವರಮಠ ಖ್ಯಾತ ಸಾಹಿತಿಗಳು ಮಾಡಲಿದ್ದಾರೆ.

ಸ್ಥಳ : ಕನ್ನಡ ಸಾಹಿತ್ಯ ಭವನ ಚನ್ನಮ್ಮವೃತ್ತ ಬೆಳಗಾವಿ ದಿನಾಂಕ 31.01.2022 ಮಧ್ಯಾಹ್ನ 04.00 ಕ್ಕೆ ಸಾಹಿತ್ಯಾಸಕ್ತರು ಆಗಮಿಸಲು ಸಂಘದ ಕಾಯ೯ದಶಿ೯ ರಾಜನಂದಾ ಘಾಗಿ೯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group