ಗುತ್ತಿ ಬಸವಣ್ಣ ಏತ ನೀರಾವರಿ ಕಾಲುವೆಗೆ ಬೇಗ ನೀರು ಬಿಡಲು ಆಗ್ರಹ

Must Read

ಸಿಂದಗಿ: ರೈತರ ನೀರಿನ ಬವಣೆ ನೀಗಿಸುತ್ತಿರುವ ಗುತ್ತಿ ಬಸವಣ್ಣ ಏತ ನೀರಾವರಿಯ ಕಾಲುವೆಗೆ ನೀರು ಬಿಡುವಂತೆ ಆಗ್ರಹಿಸಿ ಎಪಿಪಿ ಕಾರ್ಯಕರ್ತರು ತಹಶೀಲ್ದಾರ ಕಾರ್ಯಾಲಯದ ಶಿರಸ್ತೆದಾರ ಜಿ.ಎಸ್.ರೊಡಗಿ ಮೂಲಕ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಪಿಪಿ ತಾಲೂಕಾಧ್ಯಕ್ಷ ಶಬ್ಬೀರಪಟೇಲ ಬಿರಾದಾರ ಮಾತನಾಡಿ, ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆಯಾಗದೇ ಇದ್ದ ಬೆಳೆಗಳೆಲ್ಲ ಹಾಳಾಗಿದ್ದು ಗುತ್ತಿಬಸವಣ್ಣ ಏತ ನೀರಾವರಿಗೆ ಅವಲಂಬಿತವಾದ ರೈತರಿಗೆ ನೀರು ಹರಿಸುವುದು ನಿಂತು ಹೋಗಿದ್ದರಿಂದ ತೋಟಗಾರಿಕೆ ಹಾಗೂ ಒಣ ಬೆಸಾಯ ಬೆಳೆಗಳು ಬಾಡಿ ಹೋಗುತ್ತಿವೆ ಇದರಿಂದ ರೈತ ಸಮುದಾಯ ಕಂಗಾಲಾಗಿದ್ದು ಕೂಡಾ ಸುಮಾರು 4 ತಿಂಗಳಿಂದ ಗುತ್ತಿ ಬಸವಣ್ಣ ಏತ ವೀರಾವರಿಯು ನೀರು ಬಿಡದಿದ್ದಲ್ಲಿ ರೈತರ ಬೆಳೆ ನಷ್ಟ ಆಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮತ್ತು ಅಷ್ಟೇ ಅಲ್ಲದೆ ಅದೇ ರೈತರಿಗೆ ಕುಡಿಯಲು ನೀರು ಸಹ ಇಲ್ಲಾ, ನಮಗೆ ಆಹಾರ ನೀಡುವಂಥ ರೈತನಿಗೆ ಆಹಾರ ಬೆಳೆಯಲು ಸಹ ನೀರಿಲ್ಲದಂತಾಗಿದೆ. ಜಾನುವಾರಗಳಿಗೂ ಹಾಗೂ ಪಕ್ಷಿಗಳಿಗೆ ನೀರಿಲ್ಲದೆ ಸತ್ತುಹೋಗಿವೆ ಕಾಲುವೆ ಕೂಡಾ ಬರಡಾಗಿವೆ. ತಿಂಗಳಾದರೂ ಇನ್ನೂ ನೀರು ಬಿಡದೇ ಸರಕಾರ ಕಣ್ಣು ಮುಚ್ಚಿ ಕೊಂಡು ಕುಳಿತಿದೆಯಾ ? ಪ್ರತಿ ವರ್ಷಕ್ಕೆ ಏನಾದರೂ ಬಜೆಟ್ ಇಟ್ಟಿರಬಹುದು ಏತ ನೀರಾವರಿಗಾಗಿ ಬಂದಂತಹ ಬಜೆಟ್‍ನ ಕಾಮಗಾರಿ ಕೈಗೊಳ್ಳದೇ ಅಧಿಕಾರಿಗಳ ಜೇಬಿಗೆ ಹೋಗುತ್ತಿದೆ. ಅಧಿಕಾರಿಗಳು ಕಾಮಗಾರಿ ಮಾಡಿದರೆ ಇವತ್ತು ಏತ ನೀರಾವರಿ ಮೂರು ವಾರಗಳವರೆಗೆ ಬಂದ್ ಬಿಳುತ್ತಿರಲ್ಲಿಲ್ಲ. ಮೊದಲು ಮಳೆ ಹೆಚ್ಚಾಗಿ ಮಂಜು ಬಿದ್ದು ವಿಜಯಪುರ ಜಿಲ್ಲೆಯ ದ್ರಾಕ್ಷಿ ಬೆಳೆನಷ್ಟವಾಯಿತು. ಇಷ್ಟಾದರೂ ಸಹ ಸರ್ಕಾರ ಇನ್ನೂವರೆಗೂ ಯಾವುದೇ ರೀತಿ ಕಾರ್ಯನಿರ್ವಹಿಸದಿರುವುದು ಸರ್ಕಾರ ನಿರ್ಲಕ್ಷ ವಹಿಸಿದ್ದರಿಂದ ಹಿಂಗಾರಿ ಬೆಳೆಗಳಾದ ಶೇಂಗಾ, ಕಬ್ಬು, ಕಡಲೇ, ನಿಂಬೆ, ಗೋದಿ, ಮೆಕ್ಕೆಜೋಳ ಸೇರಿದಂತೆ ಹಲವಾರು ಬೆಳೆಗಳಿಗೆ ನೀರಿಲ್ಲದೆ ರೈತರು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಈಗಾಗಲೇ ಕಣ್ಣ ಮುಂದೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಸು, ಪಕ್ಷಿಗಳಿಗೆ ನೀರು ಇಲ್ಲದೆ ಸಾಯುತ್ತಿವೆ. ಆದ ಕಾರಣ ಆದಷ್ಟೂ ಬೇಗ ಮೋಟಾರ್ ಅಳವಡಿಸಿ ರೈತರಿಗೆ ಅನೂಕಲ ಮಾಡಿಕೊಡಬೇಕು ಈ ಮನವಿಗೆ ಸರ್ಕಾರ ಕೂಡಲೇ ಸ್ಪಂದಿಸಿ ಕಾಲುವೆಗೆ ನೀರು ಹರಿಸದಿದ್ದಲ್ಲಿ ಈ ಭಾಗದ ರೈತರನ್ನು ಒಗ್ಗೂಡಿಸಿ ಉಗ್ರ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಅಶೋಕ ಕೊರಳ್ಳಿ, ಎಚ್.ಎಸ್ ಬಿರಾದಾರ, ಬಸವರಾಜ ಬಿರಾದಾರ, ಬಸವಲಿಂಗ ಧರಿಕಾರ, ಶಿವಲಿಂಗಪ್ಪ ಸೇರಿದಂತೆ ಮಾಜಿ ಸೈನಿಕರು ಇದ್ದರು.

Latest News

ಸ್ವರ ಗಾರುಡಿಗ ಸಿದ್ಧರಾಮ ಜಂಬಲದಿನ್ನಿ

ಹೈದ್ರಾಬಾದ ಕರ್ನಾಟಕದ ಇನ್ನೊಂದು ಅಪೂರ್ವದ ಕಲಾವಿದ ಶ್ರೇಷ್ಠ ಗಾಯಕ ಸಿದ್ಧರಾಮ ಜಂಬಲದಿನ್ನಿ ನಾಡು ನುಡಿ ಸಂಸ್ಕೃತಿಯ ಹಿರಿಯ ರಾಯಭಾರಿ . ರಾಯಚೂರಿನ ಬಿಸಿಲು ಬೇಗೆಯಲ್ಲಿ ಹಿಂದುಸ್ತಾನ್...

More Articles Like This

error: Content is protected !!
Join WhatsApp Group