ಸಹಕಾರ ನೀಡಿದರೆ ಯುವ ಸಾಹಿತಿಗಳಿಗೆ ಪ್ರೋತ್ಸಾಹ ನೀಡುವೆ – ಕೂಚಬಾಳ

Must Read

ಸಿಂದಗಿ– ಕನ್ನಡ ನಾಡು ನುಡಿ ಕಟ್ಟುವಲ್ಲಿ ಮತ್ತು ಸಿಂದಗಿ ಕ್ಷೇತ್ರವನ್ನು ಸಾಹಿತ್ಯ ಕ್ಷೇತ್ರವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ರಾಜಶೇಖರ ಕೂಚಬಾಳ ಹೇಳಿದರು.

ಅವರು ಪಟ್ಟಣದ ರಾಗರಂಜನಿ ಸಂಗೀತ ಕೇಂದ್ರದಲ್ಲಿ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಕನ್ನಡ ತಾಯಿಯ ಸೇವೆ ಮಾಡುವ ಭಾಗ್ಯ ನನಗೆ ಒಲಿದು ಬಂದಿರುವುದು ನನ್ನ ಸೌಭಾಗ್ಯ ಸರಿ. ಕನ್ನಡಾಭಿಮಾನಿಗಳ ಹಾಗೂ ಹಿರಿಯ ಸಾಹಿತಿಗಳು ಸಹಕಾರ ನೀಡಿದ್ದಾದರೆ ಯುವ ಪ್ರತಿಭೆಗಳಿಗೆ, ಸಾಹಿತ್ಯ ಪ್ರತಿಭೆಗಳಿಗೆ, ಕಲಾವಿದರು ಸೇರಿದಂತೆ ಅನೇಕ ಯುವ ಜನಾಂಗಕ್ಕೆ ವೇದಿಕೆಯನ್ನು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿ ತರುವಲ್ಲಿ ನಾನು ಸೇವೆಗೈಯುತ್ತೇನೆ ಎಂದರು.

ಜಿ.ಪಿ.ಪೋರವಾಲ ಪದವಿ ಕಾಲೇಜಿನ ದೈಹಿಕ ನಿರ್ದೇಶಕ ಪ್ರೋ.ರವಿ ಗೋಲಾ ಮಾತನಾಡಿ, ಇಂದು ಕನ್ನಡ ಭಾಷೆ, ಕನ್ನಡ ಸಂಸ್ಕೃತಿ ನಮ್ಮಿಂದ ದೂರವಾಗುತ್ತಿರುವುದು ಖೇದಕರ. ಕನ್ನಡ ಉಳಿದರೆ ಮಾತ್ರ ನಾವೆಲ್ಲ ಉಳಿಯುತ್ತೇವೆ ಎಂಬ ಸಂದೇಶ ನಮ್ಮ ರಕ್ತದಲ್ಲಿ ಹರಿಯಬೇಕು. ನಮ್ಮ ಆಡಳಿತ ಭಾಷೆ ಸಂಪೂರ್ಣ ಕನ್ನಡ ಮಯವಾಗಬೇಕು. ಸಿಂದಗಿ ಕನ್ನಡ ಸಾಹಿತ್ಯ ಪರಿಷತ್ತು ಅನೇಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಬೇಕು ಎಂದರು.

ನಿಕಟ ಪೂರ್ವ ಅಧ್ಯಕ್ಷ ಎಸ್.ಬಿ.ಚೌಧರಿ ಮಾತನಾಡಿ, ಕನ್ನಡ ಕಟ್ಟುವಲ್ಲಿ ಅನೇಕ ಎಡರು ತೊಡರುಗಳು ಬಂದು ಮುಳ್ಳಿನ ಹಾಸಿಗೆಯಾಗಿ ಪರಿಣಮಿಸುತ್ತದೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಅನೇಕ ತೊಂದರೆಗಳನ್ನು ಅನುಭವಿಸಿದ ಅನುಭವಗಳ ನನಗಿದೆ ಈಗ ಸಾಹಿತ್ಯ ಪರಿಷತ್ತು ಹೆಮ್ಮರವಾಗಿ ಬೆಳೆದಿದೆ ನನಗಾದ ಸಮಸ್ಯೆ ನೂತನ ಅದ್ಯಕ್ಷರಿಗೆ ಬರುವುದಿಲ್ಲ ಎಂಬ ಭರವಸೆ ನನ್ನಲ್ಲಿದೆ ಏಕೆಂದರೆ ಕನ್ನಡದ ಕಟ್ಟಾಳುಗಳಾಗಿ ನಾವು ನೀವೆಲ್ಲ ಶ್ರಮಿಸೋಣ ಎಂದು ಆಶಾಭಾವ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿ ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾ ಸಂಚಾಲಕ ಮುತ್ತು ಶಾಬಾದಿ ಮಾತನಾಡಿ, ಈ ನಾಡು ಕಂಡ ಅಪ್ರತಿಮ ಘಜಲ್ ಗಾಯಕರು ಹಂದಿಗನೂರ ಸಿದ್ರಾಮಪ್ಪ, ರಂಗಕಲಾವಿದರು ಕಂಡ ಈ ತಾಲೂಕು ಕನ್ನಡ ಕಟ್ಟುವ ಕೆಲಸ ಹಿರಿಮೆಯಾದದ್ದು. ತೆರೆ ಮರೆಯಲ್ಲಿ ಉಳಿದುಕೊಂಡ ಸಾಹಿತಿಗಳನ್ನು, ಬಂಡಾಯ ಸಾಹಿತಿಗಳನ್ನು, ರಂಗಭೂಮಿ ಕಲಾವಿದರನ್ನು, ಚಿತ್ರ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಡೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ರಾಜಶೇಖರ ಕೂಚಬಾಳ ಅವರನ್ನು ಸನ್ಮಾನಿಸಿ ಗೌರವಿಸಿದರು.

ವೇದಿಕೆ ಮೇಲೆ ಡಾ.ಶರಣಬಸವ ಜೋಗೂರ, ಪತ್ರಕರ್ತ ಪಂಡಿತ ಯಂಪೂರೆ ಇದ್ದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಸಂಘದ ಅಧ್ಯಕ್ಷ ಆನಂದ ಶಾಬಾದಿ, ಡಾ. ಪ್ರಕಾಶ ರಾಗರಂಜನಿ, ಪ್ರದೀಪ ಕತ್ತಿ, ಮಾಳು ಹೊಸೂರ, ಡಿ.ಬುಳ್ಳಪ್ಪ, ಮುತ್ತು ಅಗಸರ(ಬ್ಯಾಕೋಡ) ಗುರುನಾಥ ಅರಳಗುಂಡಗಿ, ನವೀನ ಶೆಳ್ಳಗಿ, ರಮೇಶ ನಡುವಿನಕೇರಿ, ಜ್ಞಾನೇಶ ಗುರವ, ಆಕಾಶ ರಾಠೋಡ, ಬಸವರಾಜ ಗುರಶೆಟ್ಟಿ, ಕಾವ್ಯಾ ನಾಯಕ ಸೇರಿದಂತೆ ಅನೇಕರು ಇದ್ದರು.

ಉಪನ್ಯಾಸಕ ಮಾಹಾಂತೇಶ ನೂಲಾನವರ ಸ್ವಾಗತಿಸಿದರು. ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

Latest News

ಪೂ ಚಂ ತೇ ಅವರ ಸಿದ್ಧಾಂತ ಮೌಲ್ಯಗಳ ಪ್ರತಿಬಿಂಬ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ : ಡಿ. ಕೆ.ಶಿವಕುಮಾರ

ಬೆಂಗಳೂರು ನಗರದ ಲಾಲ್ ಬಾಗ್ ನಲ್ಲಿ ಜನವರಿ 15 ರಿಂದ 26ರ ವರೆಗೆ ಏರ್ಪಡಿಸಲಾಗಿರುವ ಫಲ ಪುಷ್ಪ ಪ್ರದರ್ಶನವನ್ನು ಡಿ. ಕೆ. ಶಿವಕುಮಾರ್ ಅವರು ಬುಧವಾರ...

More Articles Like This

error: Content is protected !!
Join WhatsApp Group