ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ

Must Read

ಮುಡಲಗಿ: ತಾಲೂಕಿನ ವಡೇರಹಟ್ಟಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಸುಣಧೋಳಿಯಲ್ಲಿ ಹಮ್ಮಿಕೊಂಡಿದ ಪ್ರಸಕ್ತ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಜರುಗಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಎಸ್.ಐ.ಭಾಗೋಜಿ ಮಾತನಾಡಿ, ಶಿಬಿರಾರ್ಥಿಗಳು ಶಿಬಿರದಿಂದ ಕಲಿತ ಪಾಠವನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಳ್ಳಲು ಪ್ರೇರೆಪಿಸಿದ ಅವರು ಶಿಬಿರಕ್ಕೆ ಸಹಾಯ ಸಹಕಾರ ನೀಡಿದ ಶ್ರೀ ಶಿವಾನಂದ ಶ್ರೀಗಳನ್ನು ಸುಣಧೋಳಿ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.

ಸುಣಧೋಳಿ ಶ್ರೀ ಜಡಿಸಿದ್ದೇಶ್ವರ ಕಾಲೇಜಿನ ಪ್ರಾಚಾರ್ಯ ಸುರೇಶ ಲಂಕೆಪ್ಪನವರ ಮಾತನಾಡಿ, ಶಿಬಿರದಲ್ಲಿಯರುವ ಅವಕಾಶ ಉಳಿದ ವಿದ್ಯಾರ್ಥಿಗಳಿಗೆ ಸಿಗುವುದಿಲ್ಲ ಈ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಸುದೈವಿಗಳು, ಶಿಬಿರದಲ್ಲಿನ ಶಿಸ್ತು ತಮ್ಮ ಜೀವನವನ್ನು ಉಜ್ವಲಗೊಳಿಸುತ್ತದೆ ಎಂದರು.

ಸಮಾರಂಭದ ಸಾನಿಧ್ಯ ವಹಿಸಿದ ಸುಣಧೋಳಿ ಜಡಿಸಿದ್ಧೇಶ್ವರ ಮಠದ ಶ್ರೀ ಶಿವಾನಂದ ಮಕ್ಕಳ ಈ ದಿನUಶ್ರೀಗಳು ಮಾತನಾಡಿ, ಎನ್.ಎಸ್.ಎಸ್ ಶಿಬಿರದ ಕಾರ್ಯಕ್ಷಮತೆಯನ್ನು ಶ್ಲಾಘಿಸಿ ಆಶಿರ್ವಚನ ನೀಡಿದರು.

ಸಮಾರಂಭದಲ್ಲಿ ಎಸ್.ಡಿ.ವಾಲಿ, ಎನ್.ಎಸ್.ಎಸ್.ಸಂಯೋಜನಾಧಿಕಾರಿ ಕೆ.ಬಿ.ಬೆಳಗಲಿ ವಾಯ್.ಎಲ್.ಶೇಖರಗೋಳ, ಎಲ್.ಎಸ್.ವಾರೆಪ್ಪಗೋಳ, ಕೆ.ಎಮ್.ಉಪ್ಪಾರ, ಮುಖ್ಯೋಪಾಧ್ಯಾಯ ಸುಭಾಸ ಭಾಗೋಜಿ, ಕೌಜಲಗಿ, ಪಿಡಿಒ ಗಂಗಾಧರ ಮಲ್ಹಾರಿ, ಮತ್ತಿತರು ಇದ್ದರು.

ಡಾ|| ಎ.ವ್ಹಿ.ಮೆಳವಂಕಿ ಸ್ವಾಗತಿಸಿದರು, ವ್ಹಿ.ಬಿ.ಜೋಡಟ್ಟಿ ನಿರೂಪಿಸಿದರು, ಎಮ್.ಜಿ.ದೇವಡಿ ವಂದಿಸಿದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group