ಕನ್ನಡ ಸಾಹಿತ್ಯದ ಪರಿಚಾರಕರು ಡಾ. ವೈ. ಎಂ. ಯಾಕೊಳ್ಳಿ – ರಮೇಶ ಮುರಂಕರ

Must Read

ಮುನವಳ್ಳಿ: “ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ವೈ. ಎಂ. ಯಾಕೊಳ್ಳಿ ಯವರು ಕನ್ನಡ ಮನಸುಗಳನ್ನು ಒಗ್ಗೂಡಿಸಿ ವಿವಿಧ ರಚನಾತ್ಮಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೋಗುವ ಮನೋಭಾವವನ್ನು ಹೊಂದಿರುವ ಇವರು ಕನ್ನಡ ಸಾಹಿತ್ಯ ದ ಪರಿಚಾರಕ ರು ಎಂದರೆ ಅತಿಶಯೋಕ್ತಿ ಯಲ್ಲ.ಮೂರು ಅವಧಿಯಲ್ಲಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಯಾಗಿ ಕನ್ನಡ ದ ಕೆಲಸ ಮಾಡಿ ಈಗ ಅಧ್ಯಕ್ಷ ರಾಗಿರುವ ಅವರು ಯಕ್ಕುಂಡಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ದ ಪ್ರಾಚಾರ್ಯರಾಗಿ ಕೂಡ ಕನ್ನಡ ಸಾಹಿತ್ಯದ ತಮ್ಮ ವಿವಿಧ ಸಾಹಿತ್ಯ ಪ್ರಕಾರದ ಕೃತಿಗಳನ್ನು ರಚಿಸಿ ನಾಡಿನ ಹೆಸರಾಂತ ಸಾಹಿತಿಗಳಲ್ಲೊಬ್ಬರಾಗಿರುವರು” ಎಂದು ಉಪನ್ಯಾಸಕ ರಮೇಶ ಮುರಂಕರ ತಿಳಿಸಿದರು.

ಅವರು ಪಟ್ಟಣದ ಸೋಮಶೇಖರ ಮಠದಲ್ಲಿ ಜರುಗಿದ ಡಾ. ವೈ. ಎಂ. ಯಾಕೊಳ್ಳಿ ಯವರಿಗೆ ಶ್ರೀ. ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮಿಗಳವರು ಏರ್ಪಡಿಸಿದ್ದ ಗುರುರಕ್ಷೆ ಕಾರ್ಯ ಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು.

ಗುರುರಕ್ಷೆ ಸ್ವೀಕರಿಸಿ ಮಾತನಾಡಿದ ಡಾ. ವೈ. ಎಂ. ಯಾಕೊಳ್ಳಿ ಯವರು ” ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ತಮ್ಮೆಲ್ಲರದ್ದು. ನಾನು ನಿಮಿತ್ತ ಮಾತ್ರ. ಎಲ್ಲರೂ ಸೇರಿ ಕನ್ನಡ ದ ಸೇವೆ ಮಾಡೋಣ. ಪೂಜ್ಯರು ಸದಾ ನನಗೆ ತಮ್ಮ ಮಾರ್ಗ ದರ್ಶನ ನೀಡುತ್ತ ಬಂದಿರುವರು.ಈಗ ನನಗೆ ಗುರುರಕ್ಷೆ ನೀಡುವ ಮೂಲಕ ಆಶೀರ್ವದಿಸಿರುವರು. ಈ ಹಿಂದೆ ಶಾಲೆಗೊಂದು ಸಾಹಿತ್ಯ. ಮನೆಮನೆಗೆ ಸಾಹಿತ್ಯ ಕಾರ್ಯ ಕ್ರಮ ಹಮ್ಮಿಕೊಂಡಿದ್ದ ನಮಗೆ ಮುಂಬರುವ ದಿನಗಳಲ್ಲಿ ಸವದತ್ತಿ ತಾಲೂಕಿನ ಸಾಹಿತ್ಯ ದ ಅವಲೋಕನ ಹಮ್ಮಿಕೊಂಡು ತಾಲೂಕಿನ ಸಾಹಿತ್ಯ ದ ಪರಿಚಯಿಸುವ ಕಾರ್ಯ ಪ್ರತಿ ತಿಂಗಳು ಒಂದು ಕಾರ್ಯ ಜರುಗಿಸಬೇಕು. ಆ ದಿಸೆಯಲ್ಲಿ ತಮ್ಮ ಸಹಕಾರ ಬಯಸುವೆನು.ಸಾಹಿತ್ಯ ಪರಿಷತ್ತಿನ ಸದಸ್ಯ ತ್ವವನ್ನು ಕೂಡ ಹೆಚ್ಚಿಸುವ ಕಾರ್ಯ ಮಾಡೋಣ” ಎಂದು ನುಡಿದರು.

ಕಾರ್ಯ ಕ್ರಮ ದ ದಿವ್ಯ ಸಾನಿಧ್ಯವಹಿಸಿ ದ್ದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳವರು ಮಾತನಾಡಿ ” ಡಾ. ವೈ. ಎಂ. ಯಾಕೊಳ್ಳಿ ಯವರು ಈ ಭಾಗದ ಪ್ರಸಿದ್ಧ ಸಾಹಿತಿಗಳು. ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ದೊರೆತಿದ್ದು ನಿಜಕ್ಕೂ ಅಭಿನಂದನಾರ್ಹ. ಮುಂದಿನ ದಿನಗಳಲ್ಲಿ ಸಾಹಿತ್ಯ ಚಟುವಟಿಕೆ ಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಳ್ಳುವ ಮೂಲಕ ಯುವಪೀಳಿಗೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕನ್ನಡ ಕಟ್ಟುವ ಕಾರ್ಯ ಜರುಗುವಂತಾಗಲಿ” ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ. ವೀರಣ್ಣ ಕೊಳಕಿ.ಸ್ನೇಹ ಜೀವಿ ಬಳಗದ ಸುಧೀರ ವಾಘೇರಿ. ರವಿ ಸಣಕಲ್.ಮಾಧ್ಯಮ ಪ್ರತಿನಿಧಿಗಳಾದ ತಾನಾಜಿರಾವ್ ಮುರಂಕರ. ಪ್ರಶಾಂತ ತುಳಜನ್ನವರ. ಬಿ. ಬಿ. ಹುಲಿಗೊಪ್ಪ. ಭವಾನಿ ಖೊಂದುನಾಯ್ಕ.ಎಮ್.ಎಚ್.ಕಾಮನ್ನವರ.ಕಿರಣ ಯಲಿಗಾರ. ಅನ್ನದಾನೇಶ್ವರ ಮಹಾವಿದ್ಯಾಲಯ ದ ಪ್ರಾಚಾರ್ಯ ಎಂ. ಎಚ್. ಪಾಟೀಲ. ಕೆ. ಬಿ. ನಲವಡೆ.ಐ.ಕೆ.ಮಠಪತಿ.ಅಶೋಕ ಸಂಕನ್ನವರ. ದಾನಯ್ಯ ಹಿರೇಮಠ. ಶಂಕರ ಅಪ್ಪೋಜಿ.ರಾಧಾ ಕುಲಕರ್ಣಿ. ಅನ್ನಪೂರ್ಣ ಲಂಬೂನವರ, ಅನುರಾಧ ಬೆಟಗೇರಿ. ಸುಮಾ ಯಲಿಗಾರ.ಗೌರಿ ಜೇವೂರ, ರಾಜೇಶ್ವರಿ ಬಾಳಿ. ಸವಿತಾ ಹಂಜಿ.ಸುರೇಖಾ ಗೋಪಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು. ಸೋಮಶೇಖರ ಮಠದಿಂದ ಡಾ. ವೈ. ಎಂ. ಯಾಕೊಳ್ಳಿ ಯವರಿಗೆ ಗುರುರಕ್ಷೆ ಜರುಗಿತು. ಶಿಕ್ಷಕ ಬಸನಗೌಡ ಹುಲಿಗೊಪ್ಪ ಕಾರ್ಯ ಕ್ರಮ ನಿರೂಪಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group