ಚುಟುಕುಗಳು

Must Read

ಸ್ಮರಣೆ

ಬಾವುಟ ಹಾರಿಸಿದ
ಮಂತ್ರಿಗಳು ಮಾಡಿದರು
‘ಗಾಂಧಿ ಸ್ಮರಣೆ ‘
ಎದುರು ರಸ್ತೆಯ ಬಾರೊಂದರಲಿ
ನಡೆದಿತ್ತು…
ಭರ್ಜರಿ ಸೇಂದಿ ಸ್ಮರಣೆ…

ಹುಚ್ಚ

ಬಟ್ಟೆ ಗಂಟುಗಳ
ಹಿಮಾಲಯ ಪರ್ವತ
ಮೆದುಳ ತುಂಬಾ
ಥಕ ದಿಂ-ಥಕ ದಿಂ
ಭಾವಗಳ ಭರತನಾಟ್ಯ,
ಶೃತಿಯಿಲ್ಲದ ಗಾನ
ಹಾಡುವ ಆತ ದಿನವೂ
ರಸ್ತೆಯ ಅಂಚಿನಲ್ಲಿ
ಹುಡುಕುತ್ತಿದ್ದಾನೆ
ಬೆಂಕಿ ಅಪಘಾತದಲ್ಲಿ
ಭಸ್ಮವಾದ…
ತನ್ನ ಹೆಂಡತಿ-ಮಕ್ಕಳನ್ನು!!!
ರಾತ್ರಿ-ಹಗಲೆನ್ನದೆ
ಮಳೆ-ಚಳಿ-ಗಾಳಿಗಳ ಮಧ್ಯೆ…

ಅಚ್ಚರಿ..ಅಚ್ಚರಿ

ಯುವಶಕ್ತಿ ಸಿಡಿದೇಳಬೇಕು
ಎಂಬ ಕರೆ ಕೇಳಿ
ನಮ್ಮೂರ ಯುವಕರು ಸಿಡಿದೆದ್ದು,
ಬಾರಿಗೆ ನುಗ್ಗಿ ‘ಗುಂಡು’ಹಾಕಿ
ಊರೊಳಗೆ ನುಗ್ಗಿ
ರಾತ್ರೋರಾತ್ರಿ
ಹಲವರ ತೆಂಗು-,ಮಾವು
ತೋಟಗಳಿಗೆ ನುಗ್ಗಿ,
ಮರಗಳಿಗೆ ಲಗ್ಗೆ ಹಾಕಿ
ರಸದೌತಣ ಮಾಡಿದರು…

ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು
ಮೊ:94496 80583
63631 72368

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group