ಇಂದು ಮಠಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಸಿಗುತ್ತಿದೆ – ಅಲ್ಲಾಪುರ

Must Read

ಸಿಂದಗಿ: ಮಠ-ಮಾನ್ಯಗಳಿಂದ ಗ್ರಾಮೀಣ ಭಾಗದಲ್ಲಿ ಧಾರ್ಮಿಕ ಸಂಸ್ಕಾರ ಸಿಗುತ್ತಿರುವುದು ದೊಡ್ಡ ಕಾರ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ ಹೇಳಿದರು.

ತಾಲೂಕಿನ ಸುಕ್ಷೇತ್ರ ಆರೂಢ ಆಶ್ರಮ ಆಸಂಗಿಹಾಳ ಶ್ರೀ ಸಮರ್ಥ ಸದ್ಗುರು ಆರೂಢ ಸಂಗನಬಸವೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ 5 ದಿನಗಳ ಪ್ರವಚನ ಮುಕ್ತಾಯ ಹಾಗೂ ಧರ್ಮಸಭೆಯಲ್ಲಿ ಮಾತನಾಡಿ, ಮೊದಲು ಮಠ-ಮಾನ್ಯಗಳಲ್ಲಿ ನಿತ್ಯ ದಾಸೋಹ ಮಾಡುವ ಮೂಲಕ ಅನ್ನದಾಹ ನೀಗುತ್ತಿತ್ತು ಇಂದು ಮಠಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಸಿಗುತ್ತಿದೆ ಇದರಿಂದ ಗ್ರಾಮೀಣ ಭಾಗದಲ್ಲಿ ಬ್ರಾತೃತ್ವ ಬೆಳೆಯುವುದರ ಮೂಲಕ ಸಹೋದರತ್ವ ಭಾವ ಉಳಿಸಿಕೊಂಡು ಬರುತ್ತಿದೆ ಕಾರಣ ಮಠಗಳಲ್ಲಿ ನಡೆಯುವ ಪುರಾಣ-ಪ್ರವಚನಗಳನ್ನು ಆಲಿಸುವುದರಿಂದ ಅನೇಕ ದಾರ್ಶನಿಕರ, ಮಹಾನ ಶರಣರ ಪರಿಚಯವಾಗುತ್ತದೆ ಅಲ್ಲದೆ ಅವರ ತತ್ವದಡಿ ಜೀವನ ರೂಪಿಸಿಕೊಂಡು ವ್ಯಸನಮುಕ್ತ ಸಮಾಜ ನಿರ್ಮಿಸಲು ಸಹಕಾರಿಯಾಗುತ್ತದೆ ಎಂದರು.

ಶ್ರೀ ಶಂಕರಾನಂದ ಮಹಾರಾಜರು ಶ್ರೀ ನಿತ್ಯಾನಂದ ಮಹಾರಾಜರು ರಾಂಪುರ್ ಸಾನ್ನಿಧ್ಯ ವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸೀಂಪಿರ ವಾಲೀಕಾರ ಅವರು ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕ ಶಿವಕುಮಾರ ಗುಂದಗಿ, ಎಂ.ಎಸ್.ಚೌಧರಿ, ಸದಾಶಿವ ಹಾದಿಮನಿ, ರಾಹುಲ ಯಂಟಮಾನ, ಮಹಿಬೂಬ ಮಸಳಿ ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group