ನಿವೃತ್ತ ಯೋಧ ಶಿವಾನಂದ ಪಾಟೀಲ ಜನತಾ ದಳಕ್ಕೆ

Must Read

ಸಿಂದಗಿ: ವಿಧಾನಸಭೆ ಕ್ಷೇತ್ರದ ಪ್ರಭಾವಿ ಮುಖಂಡ ಹಾಗೂ ನಿವೃತ್ತ ಯೋಧ ಶಿವಾನಂದ ಪಾಟೀಲ್ ಅವರು ತಮ್ಮ ನೂರಾರು ಬೆಂಬಲಿಗರ ಜೊತೆಯಲ್ಲಿ ಮಂಗಳವಾರ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಪಕ್ಷದ ಶಾಲು ಹಾಗೂ ಪಕ್ಷದ ಧ್ವಜ ಹಿಡಿದು ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ಈ ಕುರಿತು ನಮ್ಮ ಪ್ರತಿನಿಧಿಯೊಂದಿಗೆ ನಿವೃತ್ತ ಯೋಧ ಶಿವಾನಂದ ಪಾಟೀಲ್ ಮಾತನಾಡಿ, ಕಳೆದ ಉಪ ಚುನಾವಣೆಯಲ್ಲಿ ಮಾಜಿ ಸೈನಿಕರ ಖೋಟಾದಡಿ ಟಿಕೇಟ್ ನೀಡಿ ಎಂದು ನಾನು ಕೂಡಾ ಪ್ರಬಲ ಆಕಾಂಕ್ಷಿಯಾಗಿದ್ದೆ ಆದರೆ ಬಿಜೆಪಿ ಕೆಲ ನಾಯಕರು ನನ್ನನ್ನು ಮನವೊಲಿಸಿ ಆಕಾಂಕ್ಷಿ ಪಟ್ಟಿಯಿಂದ ದೂರ ಇರುವಂತೆ ತಿಳಿಸಿ ಚುನಾವಣೆ ನಂತರ ನಾವಿನಿಂದ ಇಳಿದ ಬಳಿಕ ನಾನ್ಯಾರೋ ಎಂಬಂತೆ ಊಹಿಸುತ್ತಿರುವುದನ್ನು ಸಹಿಸಕ್ಕಾಗದೇ ಮತ್ತು ಪ್ರಾದೇಶಿಕ ಪಕ್ಷದಲ್ಲಿ ಭವಿಷ್ಯವಿದೆ ಎನ್ನುವ ತತ್ವದಡಿ ಜೆಡಿಎಸ್ ಪಕ್ಷವನ್ನು ಸಂತೋಷದಿಂದ ಸೇರುತ್ತಿದ್ದೇನೆ ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಹಂಗರಗಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಸಿಂದಗಿ ಕ್ಷೇತ್ರ ಹಾಗೂ ಪಕ್ಷಕ್ಕೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರ ನಡುವೆ ಕರುಳಬಳ್ಳಿ ಸಂಬಂಧ ಇದೆ. ದೇವೇಗೌಡರ ಕಾಲದಿಂದ ಸಿಂದಗಿ ಕ್ಷೇತ್ರವನ್ನು ಅತ್ಯುತ್ತಮವಾಗಿ ಪ್ರಗತಿ ಮಾಡಲಾಗಿದೆ. ಗುಳೆ ಹೋಗುತ್ತಿದ್ದ ಅಲ್ಲಿನ ಜನರು ಪಕ್ಕದ ರಾಜ್ಯಗಳಲ್ಲಿ ಕೂಲಿಗಳು ಆಗುವುದನ್ನು ತಪ್ಪಿಸಲು ಶಾಶ್ವತವಾಗಿ ನೀರಾವರಿ ಪರಿಹಾರ ಒದಗಿಸಿದ್ದವರು ಗೌಡರು. ಮಾಜಿ ಸಚಿವರಾದ ದಿವಂಗತ ಮನಗೂಳಿ ಮತ್ತು ಗೌಡರ ನಡುವಿನ ಸಂಬಂಧ ಎಲ್ಲರಿಗೂ ಗೊತ್ತೇ ಇದೆ. ತಮ್ಮ ಮಗನಂತೆ ಅವರನ್ನು ಗೌಡರು ಸಲುಹಿದ್ದರು. ಅವರ ನಿಧನದ ನಂತರ ನಡೆದ ಉಪಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗಿತ್ತು ಅದಕ್ಕೆ ಸಮರ್ಥ ಅಭ್ಯರ್ಥಿ ಬೇಕಾಗಿತ್ತು ಇದರಿಂದ ಶಿವಾನಂದ ಪಾಟೀಲ ಸೋಮಜ್ಯಾಳ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದು ಸಿಂದಗಿ ಮತಕ್ಷೇತ್ರಕ್ಕೆ ಒಂದು ದೊಡ್ಡ ಬಲ ಬಂದಂತಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಾಗಠಾಣ ಶಾಸಕ ದೇವಾನಂದ್ ಚವಾಣ್, ಮುಖಂಡರಾದ ಸುನೀತಾ ಚವಾಣ್, ತಾಲೂಕಾಧ್ಯಕ್ಷ ಗೊಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ ಸೇರಿದಂತೆ ಸಿಂದಗಿ ಕ್ಷೇತ್ರದ ಅನೇಕ ಹಿರಿಯ ಮುಖಂಡರು ಹಾಜರಿದ್ದರು

Latest News

ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ವ್ಯಕ್ತಿ ದಾರುಣ ಸಾವು

ಬೀದರ - ಮಕರ ಸಂಕ್ರಾಂತಿ ನಿಮಿತ್ತ ಗಾಳಿಪಟ ಹಾರಿಸುತ್ತಿರುವ ಸಂದರ್ಭದಲ್ಲಿ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಯುವಕ ಸಂಜಿಕುಮಾರ ಎಂಬುವವರ ಕುತ್ತಿಗೆಗೆ ಗಾಳಿ ಪಟದ ಮಾಂಜಾ(ಚೀನಿ...

More Articles Like This

error: Content is protected !!
Join WhatsApp Group