ಶ್ರೀ ರೇವಣಸಿದ್ಧೇಶ್ವರ ಸಹಕಾರಿಸಂಘದ ಶಾಖೆ ಉದ್ಘಾಟನೆ

Must Read

ಮೂಡಲಗಿ: ಮೂಡಲಗಿ ಪಟ್ಟಣದಲ್ಲಿ ರಾಯಬಾಗ ತಾಲೂಕಿನ ಜೋಡಹಟ್ಟಿಯ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ವಿವಿಧ ಉದ್ಧೇಶಗಳ ಸಹಕಾರಿ ಸಂಘ ಶಾಖೆಯ ಉದ್ಘಾಟನಾ ಸಮಾರಂಭ ಪಟ್ಟಣದ ಪುರಸಭೆ ಹತ್ತಿರ ಢವಳೇಶ್ವರ ಕಟ್ಟಡದಲ್ಲಿ ಜರುಗಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಡೋಣವಾಡದ ದುರದುಂಡೇಶ್ವರ ಆಶ್ರಮದ ಶ್ರೀ ಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ಸಿಬ್ಬಂದಿ ವರ್ಗದವರ ಹಾಗೂ ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆಯಿಂದ ಮತ್ತು ಶೇರುದಾರರು, ಗ್ರಾಹಕರು ಪ್ರಾಮಾಣಿಕವಾಗಿ ಸಹಕಾರ ನೀಡಿದಲ್ಲಿ ಸಹಕಾರಿ ಸಂಸ್ಥೆಗಳು ಪ್ರಗತಿ ಯಾಗುತ್ತದೆ ಹಾಗೆ ಯಾವ ಉದ್ಧೇಶಕ್ಕಾಗಿ ಸಾಲ ಪಡೆದ ಗ್ರಾಹಕರು ಸೂಕ್ತವಾಗಿ ಬಳಕೆ ಮಾಡಿಕೊಂಡು ಸಕಾಲದಲ್ಲಿ ಮರು ಪಾವತಿ ಮಾಡಿ ಸಂಘದ ಪ್ರಗತಿಗೆ ಸಹಕರಿಸಬೇಕೆಂದರು.

ಸಮಾರಂಭದ ಸಾನ್ನಿಧ್ಯ ವಹಿಸಿದ ಪಟ್ಟಣ ಶ್ರೀ ಶಿವಬೋಧರಂಗ ಸಿದ್ಧ ಸಂಸ್ಥಾನ ಮಠದ ಪಿಠಾಧೀಪತಿ ಶ್ರೀ ಶ್ರೀಧರಬೋಧ ಸ್ವಾಮೀಜಿ ಮತ್ತು ಇಟನಾಳದ ಸಿದ್ಧೇಶ್ವರ ಆಶ್ರಮದ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಜಿಗಳು ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಚಿಕ್ಕ ಹಂಚಿನಾಳದ ಶ್ರೀ ಶಾಂತಾನಂದ ಶ್ರೀಗಳು, ಪಟ್ಟಣದ ಮಾರ್ತಾಂಡ ಮಲ್ಲಯ್ಯ ದೇವರ ಆರಾಧಕ ಶ್ರೀ ದುಂಡಪ್ಪ ಬಲಕನ್ನವರ ಶರಣರು, ಸಂಘ ಪ್ರಧಾನ ಕಛೇರಿಯ ಅಧ್ಯಕ್ಷ ಬಸವರಾಜ ಮಂಟೂರೆ, ಉಪಾಧ್ಯಕ್ಷ ಜಕ್ಕಪ್ಪ ಅಂದಾನಿ ಮತ್ತು ಮೂಡಲಗಿ ಶಾಖೆಯ ಅಧ್ಯಕ್ಷ ನಿಂಗಪ್ಪ ಹಡಪದ, ಉಪಾಧ್ಯಕ್ಷ ಮಲ್ಲಪ್ಪ ಮುಗಳಖೋಡ, ನಿರ್ದೇಶಕರಾದ ಸಂತೋಷ ಹೊಸಟ್ಟಿ, ರವಿ ನೇಸೂರ, ನಿಂಗಪ್ಪ ಗುಜನಟ್ಟಿ, ವಿನೋಧ ಎಮ್ಮಿ, ಮಹಾದೇವ ಮಾಳಿ, ಶ್ರೀನಾಥ ಕುಲ್ಲೋಳಿ, ಪರಪ್ಪ ಗಿರೆಣ್ಣವರ, ಮಹಾಂತೇಶ ಕಪರಟ್ಟಿ, ಮಾರುತಿ ಅಗ್ನೆಪ್ಪಗೋಳ, ಕಲ್ಲಪ್ಪ ಅಗ್ನೇಪ್ಪಗೋಳ, ಅನ್ನಪೂರ್ಣ ಬಡ್ಲಕನ್ನವರ, ಗೀತಾ ಬಾಬಣ್ಣವರ ಮತ್ತು ಜೋಡಹಟ್ಟಿ ಕಛೇರಿ ಹಾಗೂ ರಾಯಭಾಗ ಶಾಖೆಯ ನಿರ್ದೇಶಕರು ಮತ್ತಿತರು ಭಾಗವಹಿಸಿದರು.

Latest News

ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಒಂದು ಭೇಟಿ

ನಾವು ಶಿರಸಿಯಿಂದ ಬನವಾಸಿ ಬಸ್ಸು ಹತ್ತಿದಾಗಲೇ ನಾಲ್ಕೂವರೆ ಆಗಿತ್ತು. ಶಾಲೆ ಬಿಡುವ ವೇಳೆ ಬಸ್ ರಷ್ ಆಗಿತ್ತು. ಬನವಾಸಿಯಲ್ಲಿ ಇಳಿದಾಗ ಐದೂವರೆ ಆಗಿತ್ತು. ಕ್ಯಾಂಟಿನ್‌ನಲ್ಲಿ ಟೀ...

More Articles Like This

error: Content is protected !!
Join WhatsApp Group