ಬೀದರ: ಗಡಿ ಜಿಲ್ಲೆ ಬೀದರನಲ್ಲಿ ಶಾಲೆ ಕಾಲೇಜುಗಳು ಪೊಲೀಸ್ ಬಂದೋಬಸ್ತಿನಲ್ಲಿ ಶಾತಿಯುತವಾಗಿ ಆರಂಭಗೊಂಡವು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಎಚ್ಚರಿಕೆ ವಹಿಸಿದ್ದ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳ ಮೇಲೂ ಹದ್ದಿನ ಕಣ್ಣಿರಿಸಿದ್ದು ಯಾವುದೆ ಪ್ರಚೋದನಾತ್ಮಕ ಬರಹಗಳಾಗಲಿ, ಪೋಸ್ಟ್ ಗಳಿಗಾಗಲಿ ಅವಕಾಶ ಇಲ್ಲವೆಂದು ಕಟ್ಟಾಜ್ಞೆ ಹೊರಡಿಸಲಾಗಿದೆ.
ಇತ್ತ ಶಾಲಾ ಕಾಲೇಜುಗಳು ಆರಂಭಗೊಂಡಿದ್ದು ವಿದ್ಯಾರ್ಥಿಗಳು ತಂತಮ್ಮ ಇಚ್ಛೆಯನುಸಾರ ಬಟ್ಟೆ ಧರಿಸಿಕೊಂಡು ಬಂದಿದ್ದು ಕಂಡುಬಂದರೂ ಶಾಲೆ ಗೇಟ್ ಎದುರು ಪೊಲೀಸ್ ಕಾವಲಿಟ್ಟು ಶಾಂತಿ ಕದಡದಂತೆ ಎಚ್ಚರವಹಿಸಲಾಗಿತ್ತು.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕೆಲಸ ಮಾಡುತ್ತಿದ್ದು ಡಿವೈಎಸ್ ಪಿ ಸತೀಶ ನೇತೃತ್ವದಲ್ಲಿ ಬಿಗಿ ಬಂದೋಬಸ್ತ ಮಾಡಲಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ